ಕಾಂಗ್ರೆಸ್ ಚುನಾವಣೆಗಾಗಿ ಲಿಂಗಾಯತ ಸ್ವತಂತ್ರ ಧರ್ಮದ ಕುತಂತ್ರ

0
20
loading...

ಕನ್ನಡಮ್ಮ ಸುದ್ದಿ- ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾರವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಆಗದಂತೆ ತಡೆಯುವ ಷಡ್ಯಂತ್ರವಿದೆ. ಬಿಜೆಪಿ ಇದಕ್ಕೆಲ್ಲ ಜಗ್ಗುವುದಿಲ್ಲ. ನಾಲ್ಕೂವರೆ ವರ್ಷ ಸುಮ್ಮನಿದ್ದ ಸಿದ್ದರಾಮಯ್ಯ ಚುನಾವಣೆಗಾಗಿ ಪ್ರತ್ಯೇಕ ಧರ್ಮದ ವಿಷಯ ಹರಿಬಿಟ್ಟಿದ್ದಾರೆ ಎಂದು ಕಿಡಿಕಾರಿದರು. ಶಿವಯೋಗ ಮಂದಿರದಲ್ಲಿ ಸಾಕಷ್ಟು ಸ್ವಾಮೀಜಿಗಳು ನನ್ನನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಲಿಂಗಾಯತ ಧರ್ಮದ ನಿಲುವಿನ ಬಗ್ಗೆ ಸ್ವಾಮೀಜಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ಮಾದರಿಯ ಶಿಫಾರಸುಗಳನ್ನು ಕಾಂಗ್ರೆಸ್ ಸರ್ಕಾರ ಈ ಹಿಂದೆ ತಿರಸ್ಕರಿಸಿದೆ. ಕಾಂಗ್ರೆಸ್‍ನವರು ಚುನಾವಣೆಗಾಗಿ ಲಿಂಗಾಯತ ಸ್ವತಂತ್ರ ಧರ್ಮದ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದವರು. ಸುಪ್ರೀಂಕೋರ್ಟ್ ಬಿಲ್ ಹೊರಡಿಸಿದ್ದರಿಂದ ಮೀಸಲಾತಿ ರದ್ದಾಗಲಿದೆ ಎಂಬ ವದಂತಿ ಕೇವಲ ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿರುದ್ದ ಹಬ್ಬಿಸಿರುವ ಸುಳ್ಳು.

ನಾವು ಯಾವಾಗಲೂ ಮೀಸಲಾತಿ ಪರವಾಗಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದರು. ಇನ್ನು ಕಾಂಗ್ರೆಸ್ ವಿರೋಧದಿಂದ ರಾಜ್ಯಸಭೆಯಲ್ಲಿ ಓಬಿಸಿ ಬಿಲ್ ಪಾಸ್ ಆಗುತ್ತಿಲ್ಲ ಎಂದು ಶಾ ಅಸಮಾಧಾನ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಬಂದ್ ಕರೆಯ ಅವಶ್ಯಕತೆಯಿರಲಿಲ್ಲ. ಬಂದ್ ವೇಳೆ ನಡೆದ ಹಿಂಸಾಚಾರಕ್ಕೆ ಪ್ರತಿಪಕ್ಷದ ಎಲ್ಲರೂ ಹೊಣೆಗಾರರು. ಮೀಸಲಾತಿ ರದ್ದಾಗುತ್ತಿದೆ ಎನ್ನುವ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ. ಬಿಜೆಪಿ ಮೀಸಲಾತಿ ರದ್ದು ಮಾಡಲ್ಲ, ನಾವು ಮೀಸಲಾತಿ ಪರವಾಗಿ ಇದ್ದೇವೆ. ಯಾವುದೇ ಪಕ್ಷ ಮೀಸಲಾತಿ ವಿರೋಧಿಸಿದರು ನಾವು ಖಂಡಿಸುತ್ತೇವೆ. ರಾಜಕೀಯ ಲಾಭಕ್ಕಾಗಿ ಜನರ ದಾರಿ ತಪ್ಪಿಸಲಾಗುತ್ತಿದೆ. ನಾವು ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಬದ್ಧರಾಗಿದ್ದೇವೆ. ದಾರಿ ತಪ್ಪಿಸುವವರ ಮಾತುಗಳನ್ನು ಜನ ಕೇಳಬಾರದು ಎಂದು ಸ್ಪಷ್ಟಪಡಿಸಿದರು.

loading...