ಕಾಂಗ್ರೆಸ್ ಮುಖಂಡರ ಹೇಳಿಕೆ ಹಾಸ್ಯಾಸ್ಪದ: ಪ್ರದೀಪ ಮಾಳಗಿ

0
58
loading...

ರಾಯಬಾಗ 02: ವಿಧಾನ ಪರಿಷತ ಸದಸ್ಯ ವಿವೇಕರಾವ ಪಾಟೀಲ ಕಾಂಗ್ರೆಸ್ಸಿಗರಲ್ಲ ಎಂಬ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ತಾಲೂಕಿನಲ್ಲಿ ಕಾಂಗ್ರೆಸ್ ಬಲಗೊಳಿಸಲು ಕಾರಣರಾರು ಎನ್ನುವದನ್ನು ಅರಿಯದೇ ಮಾತನಾಡಿದ್ದಾರೆ ಎಂದು ಪ್ರದೀಪ ಮಾಳಗಿ ಹೇಳಿದರು.

ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈರಗೌಡಾ ಪಾಟೀಲರಿಗೆ ತಿರುಗೇಟು ನೀಡಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಜಿಲ್ಲಾ ಗ್ರಾಮೀಣ ಕಾಂಗ್ರೆಸ್ಸ ಅಧ್ಯಕ್ಷ ವಿನಯ ನಾವಲಗಟ್ಟಿಯವರ ಸಮ್ಮುಖದಲ್ಲಿ ಬೆಂಗಳೂರಿನ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಜಿ.ಪರಮೇಶ್ವರ ನೇತೃತ್ವದಲ್ಲಿ ವಿವೇಕರಾವ ಪಾಟೀಲರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ವಿಧಾನ ಪರಿಷತ್ ಸಭಾಪತಿಯವರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಲು ವಿಧಾನ ಪರಿಷತ್ತನಲ್ಲಿ ಮುಖ್ಯ ಸಚೇತಕ ಐವನ್ ಡಿಸೋಜಾ ವಿವೇಕರಾವ ಪಾಟೀಲರಿಗೆ ವಿಪ್ ಜಾರಿ ಮಾಡಿ ಪಕ್ಷದ ಅಭ್ಯರ್ಥಿ ಪರ ಮತ ಚಲಾವಣೆ ಮಾಡುವಂತೆ ಕೋರಿದ್ದು, ಅವರು ಪಕ್ಷದವರು ಆಗದೇ ಇದ್ದಲ್ಲಿ ಅವರಿಗೇಕೆ ವಿಪ್ ಜಾರಿ ಮಾಡುತ್ತಿದ್ದರು. ಜಿ.ಪಂ, ತಾ.ಪಂ, ಎಪಿಎಮ್‍ಸಿ ಚುನಾವಣೆ ಸಮಯದಲ್ಲಿ ಚುನಾವಣಾ ಜಾಹೀರಾತಿನಲ್ಲಿ ಈರಗೌಡಾ ಪಾಟೀಲರು ತಮ್ಮ ಹೆಂಡತಿಯ ಗೆಲುವಿಗಾಗಿ ವಿವೇಕರಾವ ಪಾಟೀಲರ ಭಾವಚಿತ್ರವನ್ನು ಬಳಸಿಕೊಂಡು ಗೆಲುವು ಪಡೆದಿರುವದನ್ನು ಇಷ್ಟು ಬೇಗ ಮರೆತಿರುವರೇ? ಅಲ್ಲದೆ ಇದೇ ಸಂದರ್ಭದಲ್ಲಿ ವಿವೇಕರಾವ ಪಾಟೀಲರ ಪುತ್ರ ಪ್ರಣಯ ಪಾಟೀಲ ಹಾಗೂ ಸೊಸೆ ಗಾರ್ಗಿ ಪಾಟೀಲರೂ ಕೂಡಾ ಕಾಂಗ್ರೆಸ್ಸ ಪಕ್ಷದಿಂದಲೇ ಜಿ.ಪಂ ಗೆ ಚುನಾಯಿತರಾದದ್ದು ಈರಗೌಡಾ ಪಾಟೀಲರು ಅರಿಯದ ವಿಷಯವೇ? ಎಂದು ಪ್ರಶ್ನಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಹಾವೀರ ಸಾನೆ, ಎಸ್.ಬಿ.ಹೋಳ್ಕರ, ಪಿ.ಎಮ್.ಪಾಟೀಲ, ಬಿ.ಎಸ್.ಗಡ್ಡೆ, ಕಲ್ಲಪ್ಪ ಹಳಿಂಗಳೆ, ಸಾರಗೌಡ ಪಾಟೀಲ, ಭೂಪಾಲ ಪುಣೇಕರ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

loading...