ಕಾಂಗ್ರೆಸ್ ಸರಕಾರದ ಸಾಧನೆಯೆ ಪಕ್ಷದ ಗೆಲುವಿಗೆ ವರದಾನ: ದೇಶಪಾಂಡೆ

0
17
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಅನ್ನಭಾಗ್ಯ, ಕ್ಷೀರಭಾಗ್ಯಗಳಂತಹ ಮಹತ್ವದ ಕಾರ್ಯಕ್ರಮಗಳಲ್ಲದೇ, ಬಡವರ ಕಷ್ಟಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವುದರ ಮೂಲಕ ಅಭಿವೃದ್ಧಿಯಲ್ಲಿ ಹೊಸ ಭಾಷ್ಯ ಬರೆದ ಹೆಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕಿದೆ. ರಾಜ್ಯವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ದ ಕಾಂಗ್ರೆಸ್ ಸರಕಾರದ ಸಾಧನೆಗಳೆ ಪಕ್ಷದ ಗೆಲುವಿಗೆ ವರದಾನವಾಗಲಿದೆ ಎಂದು ಉಸ್ತುವಾರಿ ಸಚಿವ ಹಾಗೂ ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ನುಡಿದರು.
ಅವರು ನಗರದ ರಂಗನಾಥ ಸಭಾಭವನದಲ್ಲಿ ಭಾನುವಾರ ರಾತ್ರಿ ನಡೆದ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಅವಧಿಯಲ್ಲಿ ಹಳಿಯಾಳ-ಜೊಯಿಡಾ ವಿಧಾನಸ ಭಾ ಕ್ಷೇತ್ರ ಅಭಿವೃದ್ಧಿ ಕಾರ್ಯಗಳಲ್ಲಿ ಕ್ರಾಂತಿಯನ್ನು ಮಾಡಿದೆ. ದಾಂಡೇಲಿಗರ ಬಹುವರ್ಷಗಳ ದಾಂಡೇಲಿ ತಾಲೂಕು ಕನಸು ನನಸು ಮಾಡಿದ ಶ್ರೇಯಸ್ಸು ನಮ್ಮ ಸರಕಾರಕ್ಕಿದೆ. ಪ್ರವಾಸೋಧ್ಯಮ ಕ್ಷೇತ್ರದಲ್ಲಿ ದಾಂಡೇಲಿ-ಜೊಯಿಡಾ ವಿಶ್ವ ಭೂಪಟದಲ್ಲಿ ಗುರುತಿಸುವಂತಾಗಹಬೇಕೆಂಬ ಉದ್ದೇಶದಿಂದ ಕೆನೊಪಿ ವಾಕ್ ನಂತಹ ಜನಪ್ರಿಯ ಯೋಜನೆಗಳನ್ನು ಅನುಷ್ಟಾನ ಪಡಿಸಲಾಗಿದೆ. ಕೋಟಿ ಕೋಟಿ ಹಣವನ್ನು ತರುವುದರ ಮೂಲಕ ಕ್ಷೇತ್ರದಲ್ಲಿ ಶರವೇಗದಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ದೇಶಪಾಂಡೆ ಹೇಳಿದರು. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ವಿಟಿಯು ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ನಿರ್ಮಿಸಲಾಗಿದೆ.

ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರುಗಳಾದ ಜೆ.ಡಿ.ಎಸ್ ಪಕ್ಷದ ಅಬ್ದುಲ್ ವಹಾಬ(ಮುನ್ನಾ) ಅವರು 300 ಕಾರ್ಯಕರ್ತರೊಂದಿಗೆ ಅಧಿಕೃತವಾಗಿ, ರುದ್ರಮ್ಮಾ ಬಿರದಾರ ಅವರ ಪತಿ ಸೋಮಣ್ಣ ಬಿರದಾರ ಸಮೇತ 20 ಜನ ಕಾರ್ಯಕರ್ತರೊಂದಿಗೆ, ಯುವ ಮುಖಂಡ ಸಾಧೀಕ ಮುಕಾಶಿ ಯವರು 120 ಯುವ ಬಳಗದೊಂದಿಗೆ, ಯುವ ವಕೀಲ ಹಾಗೂ ಕ್ಷತ್ರೀಯ ಮರಾಠಾ ಸಮಾಜದ ಯುವ ಘಟಕದ ಅಧ್ಯಕ್ಷ ವಿಶ್ವನಾಥ ಜಾಧವ, ಸಚಿವ ದೇಶಪಾಂಡೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಯಾದ ಎಲ್ಲ ಮುಖಂಡರುಗಳು ಸಚಿವ ದೇಶಪಾಂಡೆಯವರ ಅಭಿವೃದ್ಧಿ ಕಾರ್ಯಗಳೆ ಪಕ್ಷ ಸೇರ್ಪಡೆಗೆ ಕಾರಣ ಎಂದು ಹೇಳಿದರು. ವೇದಿಕೆಯಲ್ಲಿ ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳುಂಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಬಸೀರ್ ಗಿರಿಯಾಲ, ಪಕ್ಷದ ಮುಖಂಡರುಗಳಾದ ಇಕ್ಬಾಲ ಶೇಖ, ಎಸ್.ಎಸ್.ಪೂಜಾರ, ಆದಂ ದೇಸೂರು, ರೇಣುಕಾ ಬಂದಂ, ನಗರ ಸಭಾ ಸದಸ್ಯರುಗಳಾದ ಕೀರ್ತಿ ಗಾಂವಕರ, ಮಂಜು ರಾಥೋಡ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ ಅವರು ದಾಂಡೇಲಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ, ಎಲ್ಲರನ್ನು ಸ್ವಾಗತಿಸಿದರು. ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಮೋಹನ ಹವಾಯಿ ನಿರೂಪಿಸಿ, ವಂದಿಸಿದರು.

loading...