ಕಾಗವಾಡ ಮತಕ್ಷೇತ್ರದ ಬಗ್ಗೆ ಹೆಚ್ಚಿನ ನಿಗಾ: ಗೋಪಾಲಕೃಷ್ಣ

0
28
loading...

ಕಾಗವಾಡ 03: ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣೆ ಸುಗಮವಾಗಿ ಸಾಗಿಸಲು ಕ್ಷೇತ್ರದ 231 ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶಿಲಿಸುತಿದ್ದೇನೆ. 36 ಅತಿಸೂಕ್ಷ್ಮ, 26 ಸೂಕ್ಷ್ಮ ಮತದಾನ ಕೇಂದ್ರದಲ್ಲಿ ಹೆಚ್ಚಿನ ನಿಗಾವಹಿಸುತಿದ್ದೇನೆ ಎಂದು ಕಾಗವಾಡ ಕ್ಷೇತ್ರದ ಚುನಾವಣಾಧಿಕಾರಿ ಗೋಪಾಲ ಕೃಷ್ಣ ಹೇಳಿದರು.

ಮಂಗಳವಾರ ಸಂಜೆ ಕಾಗವಾಡದ ಅಬಕಾರಿ ತನಿಖಾ ಠಾಣೆಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿಗಳಿಗೆ ಕೆಲವು ಸೂಕ್ಷ್ಮ ಮಾಹಿತಿ ಚುನಾವಣಾ ಅಧಿಕಾರಿ ನೀಡಿದರು.
ಕಾಗವಾಡ ಕ್ಷೇತ್ರದಲ್ಲಿ 1,78,078 ಲಕ್ಷ ಮತದಾರರು ಇದ್ದು, ಇದರಲ್ಲಿ 92, 223 ಪುರುಷರು, 85,805 ಮಹಿಳಾ ಮತದಾರರು ಇದ್ದಾರೆ. ಕಾಗವಾಡ ಕ್ಷೇತ್ರದ ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶಿಲಿಸಲಾಗಿದೆ ಎಂದು ಕಾಗವಾಡ ಗ್ರೆಡ್ 2 ತಹಶಿಲ್ದಾರ ವಿಜಯ್ ಚೌಗುಲೆ ಹೇಳಿದರು. ಅವರೊಂದಿಗೆ ಕಂದಾಯ ನಿರಿಕ್ಷಕ್ ಟಿಜಿ ಕಲಾಟೆ ಇದ್ದರು.

loading...