ಕಾರವಾರ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನಿಂದ ನಾಮಪತ್ರ ಸಲ್ಲಿಕೆ

0
24
loading...

ಕನ್ನಡಮ್ಮ ಸುದ್ದಿ-ಕಾರವಾರ: ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಆರ್‍ಜೆಡಿ ಹಾಗೂ ಎನ್‍ಸಿಪಿ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸುವ ಮೂಲಕ ಕಾರವಾರ-ಅಂಕೋಲಾ ಕ್ಷೇತ್ರದ ಚುನಾವಣಾ ಕಣ ರಂಗೇರುವಂತೆ ಮಾಡಿದರು.
ಕಾಂಗ್ರೇಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರೊಂದಿ ನಗರದಲ್ಲಿ ಮೆರವಣಿಗೆ ನಡೆಸಿ ತಮ್ಮ ಬಲಾಬಲ ಪ್ರದರ್ಶನ ನಡೆಸಿದರು. ಇವರು ನಾಮಪತ್ರ ಸಲ್ಲಿಸುವ ಚುÀ ಚುನಾವಣಾ ಕೇಂದ್ರದ ಸುತ್ತಮುತ್ತ ಜನಜಂಗುಳಿಯೇ ಸೇರಿತ್ತು. ನಾಮಪತ್ರ ಸಲ್ಲಿಸಿದವರಲ್ಲಿ ಬಿಜೆಪಿಯಿಂದ ರೂಪಾಲಿ ನಾಯ್ಕ, ಕಾಂಗ್ರೆಸ್‍ನಿಂದ ಹಾಲಿ ಶಾಸಕ ಸತೀಶ್ ಸೈಲ್, ಜೆಡಿಎಸ್‍ನಿಂದ ಮಾಜಿ ಸಚಿವ ಆನಂದ್ ಅಸ್ನೋಟಿಕರ ಹಾಗೂ ಎನ್‍ಸಿಪಿಯ ಅಭ್ಯರ್ಥಿಯಾಗಿ ಮಾಧವ್ ನಾಯ್ಕ ಪ್ರಮುಖರಾಗಿದ್ದಾರೆ.

ಬಿಜೆಪಿ, ಜೆಡಿಎಸ್, ಎನ್‍ಸಿಪಿ ಪಕ್ಷಗಳು ನಗರದ ಮಾಲಾದೇವಿ ಮೈದಾನದಿಂದ ಮೆರವಣಿಗೆ ಪ್ರಾರಂಭಿಸಿದರೆ, ಕಾಂಗ್ರೆಸ್‍ನವರು ಕೋಡಿಬಾಗದಿಂದ ಮೆರವಣಿಗೆಯಲ್ಲಿ ಆಗಮಿಸಿದರು. ಅಭ್ಯರ್ಥಿಗಳ ಹಾಗೂ ಪಕ್ಷದ ಪರವಾಗಿ ಮೊಳಗಿದ ಘೋಷಣೆಗಳು ಮುಗಿಲು ಮುಟ್ಟಿತು. ಮೆರವಣಿಗೆ ಹೊರಡುವ ಮುನ್ನ ಅಭ್ಯರ್ಥಿಗಳು ನೆರೆದ ಜನರನ್ನುದ್ದೇಶಿಸಿ ಮಾತನಾಡಿದರು. ಬಳಿಕ ಮೆರವಣಿಗೆಯು ನಗರದ ಮುಖ್ಯ ರಸ್ತೆ, ಸುಭಾಸ್ ಸರ್ಕಲ್, ಶಿವಾಜಿ ಸರ್ಕಲ್, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಮುಖಾಂತರ ಚುನಾವಣಾ ಕೇಂದ್ರದತ್ತ ಸಾಗಿತು. ಮೆರವಣಿಗೆಯುದ್ದಕ್ಕೂ ಅಭ್ಯರ್ಥಿಗಳು ಜನರತ್ತ ಕೈ ಬೀಸಿ ಬೆಂಬಲ ಕೋರಿದರು. ಮೆರವಣಿಗೆಯಲ್ಲಿ ಕಾರವಾರ ಮತ್ತು ಅಂಕೋಲಾದಿಂದ ಸಹಸ್ರಾರು ಜನರು ಆಯಾ ಪಕ್ಷದ ಪರವಾಗಿ ಭಾಗವಹಿಸಿದ್ದರು. ಎಲ್ಲ ಪಕ್ಷಗಳ ಮೆರವಣಿಗೆ ಸಂದರ್ಭದಲ್ಲಿ ಬಿಗಿ ಪೆÇಲೀಸ್ ಭದ್ರತೆ ಒದಗಿಸಲಾಗಿತ್ತು.ಮೆರವಣಿಗೆ ಸಮಯದಲ್ಲಿ ಯಾವುದೇ ರೀತಿಯ ಅಹಿಕರ ಘಟನೆಗಳು ನಡೆಯದಂತೆ, ಕೇಂದ್ರದ ಬಿಎಸ್‍ಎಫ್ ಹಾಗೂ ಸಿಆರ್‍ಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ನಗರಸಭೆಯಲ್ಲಿ ತೆರೆಯಲಾಗಿರುವ ಕ್ಷೇತ್ರ-77 ಚುನಾವಣಾ ಕೇಂದ್ರದ 200 ಮೀಟರ್ ದೂರದ ವ್ಯಾಪ್ತಿ ಪ್ರದೇಶದಲ್ಲಿ ಕಾರ್ಯಕರ್ತರು, ಬೆಂಬಲಿಗರನ್ನು ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿತ್ತು.
ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ (ಎನ್‍ಸಿಪಿ) ಅಭ್ಯರ್ಥಿಯಾಗಿ ಮಾಧವ್ ನಾಯ್ಕ ನಾಮಪತ್ರ ಸಲ್ಲಿಸಿದರು. ತಮ್ಮ ಬೆಂಬಲಿಗರೊಂದಿಗೆ ನಗರದಲ್ಲಿ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು. ಮೆರವಣಿಗೆ ಮುನ್ನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದರೆ, ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡಿದರು.

ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಸೋಮವಾರ ನಾಮಪತ್ರ ಸಲ್ಲಿಸಿದರು. ಮೆರವಣಿಗೆ ಹೊರಡುವ ಮುನ್ನ ಮಾತನಾಡಿದ ಅವರು, ಎಲ್ಲ ಸಮಾಜಗಳು ಮೆರವಣಿಗೆಯಲ್ಲಿ ಭಾಗವಹಿಸುವುದರ ಮೂಲಕ ನನ್ನ ಗೆಲುವು ಸುನಿಶ್ಚಿತ.ಇದೇ ರೀತಿಯ ಬೆಂಬಲ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿಯವರು ಭೇಟಿ ನೀಡಿದಾಗ ಇರಲಿ ಎಂದರು. ಬಳಿಕ ಬಾಜಾ ಬಜಂತ್ರಿಯೊಂದಿಗೆ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು.

loading...