ಕಾರ್ಮಿಕರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ: ಸಂಗೀತಾ

0
7
loading...

ನರಗುಂದ: ಕಾರ್ಮಿಕರು ತಮ್ಮ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸಬೇಕು. ಕಾರ್ಮಿಕ ನೀರಿಕ್ಷಕ ಕಚೇರಿಯಿಂದ ಅನೇಕ ಸೌಲಭ್ಯಗಳಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಮೇ. 1 ಕಾರ್ಮಿಕ ದಿನಾಚರಣೆಯಾಗಿದ್ದು ಎಲ್ಲ ಕಾರ್ಮಿಕರು ಅಂದು ತಮ್ಮ ಸಂಘಗಳಲ್ಲಿ ಕಾರ್ಯಕ್ರಮ ರೂಪಿಸಿ ಕಾರ್ಮಿಕರ ಭವಿಷ್ಯದೆಡೆಯ ಚಿಂತನೆಗೊಳಿಸಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಗಳನ್ನು ಕಾರ್ಮಿಕರಿಗೆ ಒದಗಿಸಬೇಕೆಂದು ತಾಲೂಕಾ ಕಾರ್ಮಿಕ ನೀರಿಕ್ಷರ ಕಚೇರಿಯ ನಿರೀಕ್ಷಣಾಧಿಕಾರಿ ಸಂಗೀತಾ ಬೆನಕನಕೊಪ್ಪ ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು. ಕಾರ್ಮಿಕರ ಒಟ್ಟು ಇಬ್ಬರು ಮಕ್ಕಳ ಮದುವೆಯ ಸಂದರ್ಭದಲ್ಲಿ ತಲಾ ಒಂದು ಲಕ್ಷರೂ ಕಾರ್ಮಿಕ ನೀರಿಕ್ಷಕ ಇಲಾಖೆಯಿಂದ ನೀಡಲಾಗುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕಾರ್ಮಿಕರು ಮನೆಕಟ್ಟಿಕೊಳ್ಳಲು ನೆರವಾಗುವಂತೆ ಕಾರ್ಮಿಕ ಇಲಾಖೆಯು ಸಾಲದ ರೂಪದಲ್ಲಿ 2 ರಿಂದ 5 ಲಕ್ಷಗಳವರೆಗೆ ಸಾಲದ ರೂಪದಲ್ಲಿ ಹಣಕಾಸಿನ ಸೌಲಭ್ಯ ನೀಡಲಾಗುತ್ತಿದೆ. ಸ್ವಉಧ್ಯೋಗ ಮಾಡುವ ಕಾರ್ಮಿಕರಿಗೆ ಉಧ್ಯೋಗದ ಸಾಮಗ್ರಿಗಳನ್ನು ಪಡೆದುಕೊಳ್ಳಲು 1 ಲಕ್ಷರೂ ವರೆಗೆ ಸಾಲದ ಸೌಲಭ್ಯವಿದೆ. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸಹಾಯಧಯ ಧನ ಮತ್ತು ಕಾರ್ಮಿಕರಿಗೆ ವೈದ್ಯಕೀಯ ಸಹಾಯ ಧನದ ಸೌಲಭ್ಯ ಮತ್ತು ಕಾರ್ಮಿಕರು ನಿಧನಹೊಂದಿದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಧನ ಸಹಾಯ ಕಾರ್ಮಿಕ ನೀರಿಕ್ಷಕರ ಕಚೇರಿಯಿಂದ ಒದಗಿಸಲಾಗುವುದು. ಈ ಸೌಲಭ್ಯಗಳನ್ನು ಕಾರ್ಮಿಕರು ಪಡೆದುಕೊಳ್ಳಲು ಆಸಕ್ತಿವಹಿಸಬೇಕು. ಹೆಚ್ಚಿನ ವಿವರಗಳಿಗಾಗಿ ಕಾರ್ಮಿಕರ ನೀರಿಕ್ಷಣಾಲಯ ಕಚೇರಿಗೆ ಬಂದು ಮಾಹಿತಿ ಪಡೆದುಕೊಳ್ಳಬಹುದೆಂದು ಸಂಗೀತಾ ಬೆನಕನಕೊಪ್ಪ ತಿಳಿಸಿದ್ದಾರೆ.

loading...