ಕಾರ್ಮಿಕರಿಗೆ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹ

0
9
loading...

ಕನ್ನಡಮ್ಮ ಸುದ್ದಿ-ಶಿರಸಿ: ನಗರಸಭೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸರ್ಕಾರದ ನಿಯಮದ ಪ್ರಕಾರ ಹಾಗೂ ಜಿಲ್ಲಾಧಿಕಾರಿ ಆದೇಶದಂತೆ ಸೌಲಭ್ಯ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್‌ ಕಾರ್ಮಿಕರ ಸಂಘದ ವತಿಯಿಂದ ಗುರುವಾರ ನಗರಸಭೆಗೆ ಮನವಿ ಸಲ್ಲಿಸಲಾಯಿತು.
ಶಿರಸಿ ನಗರಸಭೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಸ್ವಚ್ಚತಾ ಕಾರ್ಮಿಕರು, ಪಂಪ್‌ ಆಪರೇಟರ್‌, ಡ್ರೈವರ್ಸ್‌, ಕಾವಲುಗಾರರು, ಕಂಪ್ಯೂಟರ್‌ ಆಪರೇಟರ್‌, ಮನೆ ಮನೆ ಕಸ ಸಂಗ್ರಹಿಸುವವರು ಹಾಗೂ ಇತರ ಕಾರ್ಮಿಕರು ದುಡಿಯುತ್ತಿದ್ದು, ನಿತರಂತರವಾಗಿ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟವರಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಇಲ್ಲಿ ಜಿಲ್ಲಾಧಿಕಾರಿ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಕಾರ್ಮಿಕರಿಗೆ ಪ್ರತಿ ತಿಂಗಳು 7ನೇ ತಾರಿಖೀನೊಳಗೆ ಸಂಬಳ ನೀಡಬೇಕು. ಸ್ವಚ್ಚತಾ ಕಾರ್ಮಿಕರಿಗೆ, ಲೋಡರ್‌ಗಳಿಗೆ ಕೆಲಸದ ಪರಿಕರ ಮತ್ತು ಸಮವಸ್ತ್ರ ನೀಡಬೇಕು. ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಮನೆ ಮನೆ ಕಸ ಸಂಗ್ರಹಣೆಯ ಕಾರ್ಮಿಕರಿಗೆ ಬೆಳಗ್ಗಿನ ಉಪಹಾರ ನೀಡಬೇಕು. ಎಲ್ಲಾ ಕಾರ್ಮಿಕರಿಗೂ ಪಿಎಫ್‌, ಇಎಸ್‌ಐ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಡಿ.ಸ್ಯಾಮಸನ್‌, ಖಜಾಂಚಿ ರಮೇಶ ಬಾಬು, ಪ್ರಧಾನ ಕಾರ್ಯದರ್ಶಿ ನಾಗಪ್ಪ ನಾಯ್ಕ ಪ್ರಮುಖರಾದ ಹರೀಶ ನಾಯ್ಕ ಮತ್ತಿತರರಿದ್ದರು.

loading...