ಕಾಲುವೆ ನೀರು ಅಕ್ರಮ ಬಳಸುತ್ತಿದ್ದವರ ಮೇಲೆ ಪ್ರಕರಣ

0
26
loading...

ಪಾಲಬಾವಿ 04: ಘಟಪ್ರಭಾ ಎಡದಂಡೆ 55ನೇ ಮೇನ್ ಕಾಲುವೆಯ ಬಲ ಬದಿಯ ದಿಬ್ಬವನ್ನು ಅಗೆದು ಕೆಲ ರೈತರು ಪೈಪ್‍ಲೈನ್ ಮಾಡಿಕೊಂಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಪಾಲಬಾವಿ ಗ್ರಾಮದಲ್ಲಿ ಕಳೆದು ವಾರದಿಂದ ಗ್ರಾಮದ ತಳವಾರ ಜಮೀನ್ ಹತ್ತಿರ ಕಾಲುವೆಯ ಸುರಂಗ ಸೇತುವೆಯ ಪಕ್ಕ ಹಾಗೂ ಇನ್ನೂ ಅನೇಕ ಸ್ಥಳಗಳಲ್ಲಿ ಈ ಕಾರ್ಯವು ನಡೆದಿದೆ. ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಯಿಂದ ಸುಮಾರು 1ಸಾವಿರ ಫೂಟ್ ಅಂತರದಲ್ಲಿ 10 ಅಡಿ ಆಳದಲ್ಲಿ ಫೈಪ್‍ಲೈನ್ ಮಾಡಿ ತಮ್ಮ ತೆರೆದ ಬಾವಿಗಳಿಗೆ ಪೈಪ್ ಲೈನ್ ಕನಕ್ಷನ್ ಮಾಡಿಸಿದ್ದಾರೆಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ.
ಮಾಹಿತಿ ಪಡೆದು ಕಾರ್ಯಪ್ರವರ್ತರಾದ ಅಧಿಕಾರಿಗಳು:

ಗ್ರಾಮದಲ್ಲಿ ಕಳೆದ ವಾರದಿಂದ ಜೆಸಿಬಿ ಹಾಗೂ ಬುಲ್ಡಜರ್ ಮಶೀನ್‍ಗಳಿಂದ ಘಟಟಪ್ರಭಾ ಎಡದಂಡೆ ಕಾಲುವೆಯನ್ನು ಅಗೆದು ಪೈಪ್ ಲೈನ್ ಜೋಡಿಸುವ ಮಾಹಿತಿಯು ಜಮಂಖಂಡಿ ನೀರಾವರಿ ಇಲಾಖೆಯ ಅಧಿಕಾರಿ ಇಇ ಮಿರ್ಜಿ, ಎಇಇ ಶ್ರೀಧರ, ಕಾಮಗಾರಿ ನಿರೀಕ್ಷಕ ಎಹ್.ಎಲ್ ಧರಿಗೌಡರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಕಾಲುವೆ ಅಗೆದ ರೈತರಿಬ್ಬರ ಮೇಲೆ ಪ್ರಖರಣ ದಾಖಲಿಸಿದ್ದಾರೆ. ಬುಧವಾರ ಮುಂಜಾನೆ 10ಗಂಟೆಗೆ ನೀರಾವರಿ ಇಲಾಖೆ ಅಧಿಕಾರಿ ಧರಿಗೌಡರ ಹಾಗೂ ಸಿಬ್ಬಂದಿ ಕಾಲುವೆಗೆ ಅಕ್ರಮವಾಗಿ ಪೈಪ್ ಲೈನ್ ಜೋಡಿಸಿದ ಕೆಲವು ಪೈಪ್‍ಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿದರು.

loading...