ಕಾಳಿಕಾ ದೇವಿ ದರ್ಶನ: ಪ್ರಚಾರ ಆರಂಭ

0
27
loading...

ಶಿರಸಂಗಿ: ಸ್ಥಳೀಯ ಸುಕ್ಷೇತ್ರ ಕಾಳಿಕಾ ದೇವಿ ದೇವಸ್ಥಾನಕ್ಕೆ ಕಾಂಗ್ರೇಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಳ್ಳುವ ಮೂಲಕ ಗ್ರಾಮದ ಜನತೆಯನ್ನು ಭೇಟಿ ಮಾಡಿ ಪ್ರಚಾರವನ್ನು ನಡಿಸಿದರು. ಪ್ರಚಾರ ಕೈಗೊಂಡ ವಿಶ್ವಾಸ ವೈದ್ಯ ಅವರಿಗೆ ಗ್ರಾಮದ ಮಹಿಳೆಯರು ಆರತಿ ಮಾಡುವ ಮೂಲಕ ಸ್ವಾಗತಿಸಿದರೆ ಕಾಂಗ್ರೇಸ್ ಕಾರ್ಯಕರ್ತರು ಮಾಲಾರ್ಪಣೆ ಮಾಡುವ ಮೂಲಕ ಬರಮಾಡಿಕೊಂಡರು. ಸಿದ್ದರಾಮಯ್ಯನವರ ದಕ್ಷ ಆಡಳಿತ ಹಾಗೂ ಜನಪರ ಯೋಜನೆಗಳನ್ನು ಗಮನಿಸಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ನಿರ್ಮಾಣಕ್ಕೆ ನನ್ನನ್ನು ಸವದತ್ತಿ ಮತ ಕ್ಷೇತ್ರದಿಂದ ಆಯ್ಕೆ ಮಾಡಿ ಎನ್ನುವ ಮೂಲಕ ಜನರಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಹಾರಾಜ ಕಣವಿ, ಎಮ್.ಎಸ್. ಹಿರೇಕುಂಬಿ, ಮೈಬೂಬ್ ರಾಮದುರ್ಗ, ಸದಾಶೀವ ಕೌಜಲಗಿ, ಸಂದೀಪ ನಿಂಗರಡ್ಡಿ, ಶಂಕರ ಹೂಗಾರ, ಮಲ್ಲು ಮುದ್ನೂರ ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು ಸಾತ್ ನೀಡಿದರು.

loading...