ಕಾಶಪ್ಪನವರ ಸಿಡಿ ಬಿಡುಗಡೆ ಮಾಡಲಿ : ದೊಡ್ಡನಗೌಡ

0
17
ಕನ್ನಡಮ್ಮ ಸುದ್ದಿ-ಹುನಗುಂದ: ಅಭಿವೃದ್ಧಿ ನೆಪವನ್ನು ಹೊಡೆ ಕ್ಷೇತ್ರದ ಜನತೆಗೆ ಮೋಸ ಮಾಡಿ ಅವಧಿ ಪೂರ್ಣ ಅಕ್ರಮ ಚಟುವಟಿಕೆ ನಡೆಸಿದ ವಿಜಯಾನಂದ ಕಾಶಪ್ಪನವರ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಮಾಡುತ್ತ ನಾನು ಯಾವದೇ ಸಮುದಾಯಕ್ಕೂ ಮೋಸ ಮಾಡಿಲ್ಲ ಎಂದು ಸುಳ್ಳು ಹೇಳುತ್ತ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಳ್ಳ ಹಿಡಿದಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.
ನಗರದ ನಾಗರಾಳ ಜಿನ್ನಿಂಗದಲ್ಲಿ ಇರುವ ಬಿಜೆಪಿ ಕಚೇರಿ ಪೂಜೆ ನೆರವೇರಿಸಿ ನಂತರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತ ಇಲ್ಲಿಯವರಿಗೂ ಬಹಿರಂಗ ಸಭೆಯಲ್ಲಿ ಬಿಜೆಪಿ ಪಕ್ಷ ಮತ್ತು ಪ್ರಧಾನಿ ಮೋದಿಜಿಯವರನ್ನು ಅವಹೇಳನಕಾರಿಯಾಗಿ ಮಾತನಾಡುತ್ತ ಬಂದಿದ್ದು. ಸೋಲಿನ ಭೀತಿಯಿಂದ ಕ್ಷೇತ್ರದ ಅವರಿವರ ಮೇಲೆ ಸಿಡಿಗಳು ತಯಾರಿವೆ ಸಂದರ್ಭ ನೋಡಿ ಬಹಿರಂಗ ಪಡಿಸೋತ್ತೇನೆಂದು ಅರಬಿ ಹಾವು ಬಿಡುತ್ತಿರುವ ಸುಳ್ಳಿನ ಸರದಾರ ವಿಜಯಾನಂದ ಕಾಶಪ್ಪನವರೆ ನಿಮ್ಮಲ್ಲಿ ಆ ಸಿಡಿಗಳಿದ್ದರೇ ತಕ್ಷಣದಲ್ಲಿ ಬಿಡುಗಡೆ ಮಾಡಿ, ತಮ್ಮ ಅವಧಿಯಲ್ಲಿ ನಡೆದ ಲಂಚ ಸಾಮ್ರಾಜ್ಯ ಮತ್ತು ಅಕ್ರಮ ಮರಳು ದಂಧೆ ಮತ್ತು ಹಳ್ಳ ಹಿಡಿದ ಯೋಜನೆಗಳ ಜೊತೆಗೆ ನಿಮ್ಮ ಭ್ರಷ್ಟಾಚಾರದ ಬ್ರಹ್ಮಾಂಡವನ್ನು ಮತದಾರರಿಗೆ ಎಳೆಎಳೆಯಾಗಿ ಬಿಜೆಪಿ ಪಕ್ಷ ಬಿಚ್ಚಿಡುತ್ತದೆ ಎಂದು ದೊಡ್ಡನಗೌಡ ಪಾಟೀಲ ಸವಾಲ ಎಸೆದರು.

loading...

ಅಷ್ಟೆಯಲ್ಲ ಅಧಿಕಾರಿಗಳನ್ನು ಕೈಚೀಲಾಗಿಸಿಕೊಂಡು ಬೃಹತ್ ಹನಿ ನೀರಾವರಿ ಯೋಜನೆ ಕಳಪೆಯಾಗಿ ರೈತರ ಮೇಲೆ ಕಲ್ಲೆಸೆದಂತಾಗಿದೆ. ಬಿಜೆಪಿ ಮಾಡಿದ ಸಾಧನೆ ಮತ್ತು ಕಾಂಗ್ರೆಸ್ ಮಾಡಿದ ಗೂಂಡಾ ರಾಜಕೀಯ ಕುರಿತು ಮತದಾರರಿಗೆ ಮನವರಿಕೆ ಮಾಡುವಂತೆ ಕಾರ್ಯಕರ್ತರಿಗೆ ಸೂಚಿಸಿದರು ಮತ್ತು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕಳೆದ 9ವರ್ಷ ಬಿಜೆಪಿ ಅವಧಿಯಲ್ಲಿ ಮತ್ತು ಮೋದಿಜಿ ಸಾಧನೆಗಳನ್ನು ಮತದಾರರಿಗೆ ತಿಳಿಸಿ ಭೂತ ಕಮೀಟಿ ಜವಾಬ್ದಾರಿ ವಹಿಸಬೇಕು ಎಂದರು.
ಮುಖಂಡ ಮುಕ್ಕಣ್ಣ ಮುಕ್ಕಣ್ಣವರ ಮಾತನಾಡಿ ಸರ್ವರಿಗೂ ಸಮಬಾಳು-ಸಮಪಾಲೆಂಬ ಬಿಜೆಪಿ ತತ್ವ ಸಿದ್ದಾಂತದಂತೆ ನಾವೆಲ್ಲರೂ ಪ್ರತಿ ಮತದಾರರನ್ನು ಭೇಟಿ ಮಾಡಿ ಸಾಧನೆಗಳನ್ನು ಗಮನಕ್ಕೆ ತಂದು ಬಿಜೆಪಿಗೆ ಜಯ ತರಬೇಕೆಂದರು.ಮುಖಂಡ ರವಿ ಹುಚನೂರ ಮಾತನಾಡಿದರು. ಮುಖಂಡರಾದ ಅಶೋಕ ಬಂಡರಗಲ್ಲ, ಜಿಪಂ ಸದಸ್ಯ ವೀರೇಶ ಉಂಡೋಡಿ, ಬಿಜೆಪಿ ತಾಲೂಕಾಧ್ಯಕ್ಷ ಮಲ್ಲಯ್ಯ ಮೂಗನೂರಮಠ, ಮಲ್ಲು ಚೂರಿ, ಮಹಾಂತಗೌಡ ತೊಂಡಿಹಾಳ, ಅಪ್ಪು ಆಲೂರ, ಗುರಪ್ಪ ಹಕಾರಿ, ಮಸ್ತಾನ ಬಿಜಾಪೂರ, ಮಹೇಶ ಪವಾರ, ಅಜ್ಜಪ್ಪ ನಾಡಗೌಡ, ಬಸವರಾಜ ನಾಡಗೌಡ, ಮಲ್ಲು ಕುಂಬಾರ, ಸಂಗಮೇಶ ಚೂರಿ, ಬಸನಗೌಡ ಆರೇಗೌಡ್ರ, ಶಾಂತಪ್ಪ ಹೊಸಮನಿ ಇತರರಿದ್ದರು.

loading...