ಕುಡಿಯುವ ನೀರಿನ ಪೂರೈಕೆಗೆ ಮನವಿ

0
22
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಇಲ್ಲಿನ ಮುರ್ಡೇಶ್ವರದ ಮಾವಳ್ಳಿ-1ರ ನ್ಯಾಶನಲ್ ಕಾಲೋನಿಯ ಬಾಕಡಕೇರಿಯಲ್ಲಿ ಜನರಿಗೆ ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲದೇ ನೀರಿಗಾಗಿ ಸ್ಥಳಿಯರು ಆಹಾಕಾರ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕರು, ಸ್ಥಳಿಯರು ಮಾವಳ್ಳಿ-1 ಗ್ರಾ.ಪಂ. ಅಧಿಕಾರಿಗೆ ಈ ಭಾಗಕ್ಕೆ ಕುಡಿಯುವ ನೀರನ್ನು ಪೂರೈಸುವಂತೆ ಸೋಮವಾರದಂದು ಮನವಿಯನ್ನು ಸಲ್ಲಿಸಿದ್ದಾರೆ.

ಮನವಿಯಲ್ಲಿ ಹಲವು ತಿಂಗಳಿನಿಂದ ಇಲ್ಲಿ ಕುಡಿಯುವ ನೀರು ಬಾರದೇ ಇರುವ ಬಗ್ಗೆ ಸಾಕಷ್ಟು ಬಾರಿ ದೂರನನ್ನು ಪಂಚಾಯತ್ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನೀಡಿದ್ದರು ಸಹ ಯಾವುದೇ ಕ್ರಮಕ್ಕೆ ಅಧಿಕಾರಿಯೂ ಮುಂದಾಗಿಲ್ಲವಾಗಿದೆ. ಸರಕಾರದ ಕುಡಿಯುವ ನೀರಿನ ಹತ್ತು ಹಲವು ಯೋಜನೆಗಳು ಜಾರಿಗೆ ಬಂದಿದ್ದರು ಸಹ ಸರಿಯಾಗಿ ಅಧಿಕಾರಿಗಳು ಇಲ್ಲಿನ ಪರಿಶಿಷ್ಟ ಜಾತಿಯವರಿರುವ ಬಾಕಡಕೇರಿಗೆ ಯಾವುದೇ ಮೂಲಭುತ ಸೌಲಭ್ಯ ದೊರಕುತ್ತಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹಾರ ಮಾಡಿಕೊಡಬೇಕೆಂದು ಮನವಿಯನ್ನು ಸಲ್ಲಿಸಿದರು. ಇದೇ ರೀತಿ ಅಧಿಕಾರಿಗಳು, ಮುಖ್ಯವಾಗಿ ಜನಪ್ರತಿನಿಧಿಗಳು ನಮಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ಕಸಿದುಕೊಂಡಲ್ಲಿ ಮುಂದಿನ ದಿನದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದರೊಂದಿಗೆ ಉಗ್ರ ಪ್ರತಿಭಟನೆಗೆ ಸಜ್ಜಾಗಬೇಕೆಂದು ಎಚ್ಚರಿಕೆಯನ್ನು ನೀಡಿದರು.
ಈ ಸಂಧರ್ಭದಲ್ಲಿ ಸ್ಥಳಿಯರಾದ ಈಶ್ವರ ಬಾಕಡ, ಸುಬ್ರಮಣ್ಯ ಬಾಕಡ, ನಾಗರಾಜ ಬಾಕಡ, ನಾಗೇಶ ಬಾಕಡ, ಲಕ್ಷ್ಮೀ ಬಾಕಡ ಸೇರಿದಂತೆ ಊರಿನ ಸಾರ್ವಜನಿಕರು ಉಪಸ್ಥಿತರಿದ್ದರು.

loading...