ಕೆಲ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿ ವರ್ತಿಸುತಿದ್ದಾರೆ: ನಾಯ್ಕ

0
19
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಭಟ್ಕಳ ತಹಶೀಲ್ದಾರ ಕಛೇರಿಯಲ್ಲಿ ಕಳೇದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಚುಣಾವಣೆಯ ಈ ಸಂದರ್ಭದಲ್ಲಿ ನಿರ್ದಿಷ್ಟ ಪಕ್ಷದ ಪರ ಪ್ರಚಾರ ಮಾಡುತ್ತಿದ್ದು ಅವರ ಮೇಲೆ ಚುಣಾವಣಾ ಆಯೋಗ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಸಂಘಟನೆ ಕಾರ್ಯದರ್ಶಿ ಎಂ. ಡಿ ನಾಯ್ಕ ಆಗ್ರಹಿಸಿದರು.

ಅವರು ಶನಿವಾರ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಕರೇದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತಹಶೀಲ್ದಾರ ಕಛೇರಿಯಲಿ ಉಪತಹಶೀಲ್ದಾರ ಆಗಿ ಕಾರ್ಯನಿರ್ವಹಿಸುತ್ತಿರುವ ವಿಜಯಲಕ್ಷ್ಮೀ ಮಣಿಯವರು ಕಳೇದ 15 ವರ್ಷಗಳಿಂದ ಭಟ್ಕಳದಲ್ಲೆ ಜಾಂಡಾ ಹೂಡಿದ್ದು, ಈ ಚುಣಾವಣೆಯ ಸಮಯದಲ್ಲಿ ಕೂಡ ಅವರನ್ನು ಬೇರೆಡೆ ವರ್ಗಾಯಿಸಿಲ್ಲ. ಈಗ ಅವರು ನಿರ್ದಿಷ್ಠ ಪಕ್ಷದ ಪರ ಮತ ಪ್ರಚಾರದಲ್ಲಿ ತೋಡಗಿಕೊಂಡಿದ್ದು ಈ ಬಗ್ಗೆ ಜಿಲ್ಲಾ ಚುಣಾವಣಾಧಿಕಾರಿಯವರಲ್ಲಿ ದೂರು ನೀಡದರೂ ಕೂಡ ಎನೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು. ಜಿಲ್ಲಾಡಳಿತವೇ ಕಾಂಗ್ರೆಸ್ ಪರವಾಗಿ ಕಾರ್ಯನಿರ್ವಹಿಸುತ್ತಿರುವಾಗ ನಾವು ನೀಡುವ ದೂರಿಗೆ ಯಾವುದೇ ರೀತಿಯ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಮುಂದಾಗುತ್ತಿಲ್ಲ. ತಾಲೂಕಿನ ಅನೇಕ ಅಧಿಕಾರಿಗಳು ರಾಜಕೀಯ ಮುಖಂಡರ ಜೋತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಜೋತೆ ಊಟ, ಓಡಾಟ ಮಾಡಿಕೊಂಡಿದ್ದಾರೆ.
ಜೆಡಿಎಸ್ ಮುಖಂಡ ಕೃಷ್ಣಾನಂದ ಫೈ ಮಾತನಾಡಿ ಭಟ್ಕಳ ತಾಲೂಕಿನ 28 ಸೆಕ್ಟರನ ಅಧಿಕಾರಿಗಳಲ್ಲಿ 26 ಅಧಿಕಾರಿ ಹಲವಾರು ವರ್ಷಗಳಿಂದ ಭಟ್ಕಳದಲ್ಲೇ ಕಾರ್ಯನಿರ್ವಹಿಸುತ್ತಿದ್ದು ರಾಜಕೀಯ ಸಂಪರ್ಕ ಹೊಂದಿದ್ದವರಾಗಿದ್ದಾರೆ ಅಂತಹವರನ್ನು ಬದಲಾಯಿಸಬೇಕಾಗಿ ರಾಜ್ಯ ಚುಣಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಆದರೆ ರಾಜ್ಯ ಚುಣಾವಣಾ ಆಯೋಗ ಈ ಬಗ್ಗೆ ಕೂಲಂಕುಷ ತನಿಖೆ ನಡೆಸದೇ ಕೇವಲ ಎರಡು ಅಧಿಕಾರಿಗಳನ್ನು ಮಾತ್ರ ಬದಲಾಯಿದೆ. ಇದರಿಂದಲೇ ತಿಳಿಯುತ್ತದೆ ಚುಣಾವಣಾ ಆಯೋಗ ಯಾರದೋ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ತಿಳಿಸಿದರು. ಜೆ.ಡಿ.ಎಸ್ ಮುಖಂಡರಾದ ಪಾಂಡುರಂಗ ನಾಯ್ಕ, ಗಣಪತಿ ಭಟ್, ದೇವಯ್ಯ ನಾಯ್ಕ, ದತ್ತಾತ್ರೇಯ ನಾಯ್ಕ, ಅಬ್ದುಲ್ ಸಮಾದ್ ಮುಂತಾದವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

loading...