ಕೋನರಡಿ ನಾಮಪತ್ರ ಸಲ್ಲಿಕೆ

0
32
loading...

ಹುಬ್ಬಳ್ಳಿ: ಪಟ್ಟಣದ ದ್ಯಾಮ್ಮವ್ವನಗುಡಿಯಿಂದ ಶಾಸಕ ಎನ್.ಎಚ್.ಕೋನರಡ್ಡಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನವಲಗುಂದ-69 ವಿಧಾನಸಭಾ ಕ್ಷೇತ್ರಕ್ಕೆ ಶುಕ್ರವಾರ ಪತ್ನಿ ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಇಲ್ಲಿಯ ಮಿನಿವಿಧಾನಸೌಧದಲ್ಲಿ ಚುನಾವಣಾಧಿಕಾರಿಯಾದ ಟಿ.ಎಸ್.ರುದ್ರೇಶಪ್ಪವರಿಗೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುಂಚೆ ತಮ್ಮ ದ್ಯಾಮ್ಮವ್ವನಗುಡಿ ಓಣಿಯಲ್ಲಿರುವ ತಮ್ಮ ನಿವಾಸದಿಂದ ಚಕ್ಕಡಿಯ ಮೇಲೆ ನಿಂತು ಮೆರವಣಿಗೆಯಲ್ಲಿ ಪಾಳ್ಗೋಂಡರು. ಮೆರವಣೆಗೆಯು ಗಾಂಧಿಮಾರುಕಟ್ಟೆ, ಲಿಂಗರಾಜ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಚಕ್ಕಡಿಯಲ್ಲಿ ತಹಶೀಲ್ದಾರ ಕಾರ್ಯಾಲಯದವರಿಗೂ ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಡೊಳ್ಳುಗಳ ಬಾರಿಸಿ, ಪಕ್ಷದ ಗೆಲುವಿಗಾಗಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮುಖಾಂತರ ಆಗಮಿಸಿ ನಾಮಪತ್ರದಲ್ಲಿ ಪಾಲ್ಗೋಂಡಿದ್ದರು. ನಾಮಪತ್ರದ ಸಲ್ಲಿಸುವ ಮೆರವಣಿಗೆಯಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ ಸಾಥ ನೀಡಿ ಮಾತನಾಡಿ ರಾಜ್ಯದ 224 ಶಾಸಕರ ಪೈಕಿ ಅತಿ ಹೆಚ್ಚು ನಮ್ಮ ಹೊಲ ನಮ್ಮ ರಸ್ತೆ ಮಾಡಿದ ಮತ್ತು ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಗ್ರಾಮ ವಾಸ್ತವ್ಯ ಮಾಡಿ ಜನಪರ ಕೆಲಸ ಮಾಡಿದ ಏಕೈಕ ಶಾಸಕ ಕೋನರಡ್ಡಿ ಅವರಾಗಿದ್ದಾರೆಂದು ಹೇಳಿದರು.
ನಾನು ವಿಧಾನ ಪರಿಷತ್ ನಲ್ಲಿ ಏಳು ಅವಧಿಯಲ್ಲಿ ಪರಿಚಯವಾದಷ್ಟು ಕೇವಲ ಒಂದೇ ಅವಧಿಯಲ್ಲಿ ಸದನ ಒಳಗೆ ಗಟ್ಟಿ ಧ್ವನಿ ಮೊಳಗಿಸಿದ ಹಿರಿಮೆ ಎನ್.ಹೆಚ್. ಕೋನರಡ್ಡಿ ಅವರಿಗೆ ಸಲ್ಲುತ್ತದೆ. ಇಂತಹ ಜ್ಯಾತ್ಯಾತೀತ ಮನೋಭಾವ ಹೊಂದಿದ ಎಲ್ಲರಿಗೂ ಬೇಕಾದ ವ್ಯಕ್ತಿ ಕೋನರಡ್ಡಿ, ಜಾತಿ, ಮತ, ಪಂಥ ಮರೆತು ಚಿಕ್ಕಮಕ್ಕಳಿಂದ ಹಿಡಿದು ಹಿರಿಯವರೆಗೆ ಎಲ್ಲರೊಂದಿಗೆ ಒಳ್ಳೇಯ ಬಾಂಧವ್ಯ ಹೊಂದಿದ ಕೋನರಡ್ಡಿ ಜನಸಾಮಾನ್ಯರ ಶಾಸಕನನ್ನ ಮತ್ತೇ ವಿಧಾನಸೌಧಕ್ಕೆ ಕಳುಹಿಸಬೇಕು ಎಂದು ಕರೆ ನೀಡಿದರು. ಎನ್.ಹೆಚ್. ಕೋನರಡ್ಡಿ ಅವರಿಗೆ ಮತ ಹಾಕಿದರೆ ಕುಮಾರಸ್ವಾಮಿ ಅವರಿಗೆ ಮತ ಹಾಕಿದ ಹಾಗೆ. ರೈತರ ಸಾಲಮನ್ನಾ ಮಾಡದ ಸಿದ್ದರಾಮಯ್ಯನೂ ನಾನೇ ಮುಂದಿನ ಮುಖ್ಯಮಂತ್ರಿ ಅಂತನಾ ಯಡಿಯೂರಪ್ಪನು ನಾನೇ ಅಂತನಾ.

ಈ ಸಂದರ್ಭದಲ್ಲಿ ವೀರಣ್ಣ ನೀರಲಗಿ, ಶಿವಣ್ಣ ಹುಬ್ಬಳ್ಳಿ, ಶಿವಶಂಕರ ಕಲ್ಲೂರ, ಅಬ್ಬಾಸ ದೇವರಡು, ಪ್ರದೀಪ ಲೆಂಕನಗೌಡರ, ಎಂ.ಎಸ್.ರೋಣದ, ದೇವೆಂದ್ರಪ್ಪ ಹಳ್ಳದ, ಅಣ್ಣಿಗೇರಿ ಪುರಸಭೆ ಅಧ್ಯಕ್ಷೆ ರೂಪಾ ಕಲ್ಲೂರ, ನವಲಗುಂದ ಪುರಸಭೆ ಸದಸ್ಯರಾದ ಜೀವನ ಪವಾರ, ಪ್ರಕಾಶ ಶಿಗ್ಲಿ, ಕಾಶೀಂಸಾಬ ಅಲ್ಲಿಬಾಯಿ, ತಾಪಂ ಸದಸ್ಯ ಬಸಣ್ಣ ಸಾಲಿ, ಬಸವರಾಜ ಬೀರಣ್ಣವರ, ಶಂಕ್ರು ಕುರಿ, ಮಂಜು ಬ್ಯಾಳಿ, ಬಿ.ವಿ. ಸೋಮಾಪುರ, ದ್ಯಾಮಣ್ಣ ವನಕುದರಿ, ಶ್ರೀಶೈಲಯ್ಯ ಮೂಲಿಮನಿ, ಕುಮಾರ ಮಾದರ, ಆನಂದ ಹವಳಕೊಡ, ದೇವಪ್ಪ ರೋಣದ, ಮಲ್ಲಪ್ಪ ಕುರಹಟ್ಟಿ, ಪ್ರಕಾಶ ಕೊಣ್ಣರು, ಮಲ್ಲಮ್ಮ ತೋಟದ, ಶಿವಲೀಲಾ ಬೋರಶೆಟ್ಟರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹಸನಸಾಬ ಗುಡುನಾಯ್ಕರ, ಶಂಕ್ರು ಶಿರಗುಪ್ಪಿ, ಡಿ.ಎಂ. ಶಲವಡಿ, ನಂದೀಶ ದೇಸಾಯಿ, ನಾರಾಯಣ ದೇವರಡ್ಡಿ, ಮಲ್ಲಿಕಾರ್ಜುನ ಕಾಲವಾಡ, ಪರಮೇಶ ನಿಡವಣಿ, ಬಾಬು ಚಾಂದಕೋಟಿ, ಸಿದ್ದನಿಂಗಪ್ಪ ಮದ್ನೂರ, ನಿಂಗಪ್ಪ ಮರಿನಾಯ್ಕರ, ದೇವಣ್ಣ ಗಡಾಡ, ಶಾಂತಾ ಚಿಕ್ಕನರಗುಂದ, ಮೌಲಾಸಾಬ ಗುಡ್ಡಣ್ಣವರ, ಗಿರೀಶ ಹಂಗರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...