ಕೋಹಳ್ಳಿ: ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಣೆ

0
23
loading...

ಕನ್ನಡಮ್ಮ ಸುದ್ದಿ- ಕೋಹಳ್ಳಿ : ಸಮಾಜದ ಕೆಳಹಂತದ ಜನರಲ್ಲಿ ಆತ್ಮ ವಿಶ್ವಾಸ ಮೂಡಿಸಿ ಅವರ ಹಕ್ಕುಗಳ ರಕ್ಷಣೆಗೆ ತಮ್ಮ ಇಡಿ ಜೀವನ ಮುಡುಪಾಗಿಟ್ಟ ಡಾ|| ಬಿ.ಆರ್ ಅಂಬೇಡ್ಕರರವರು ವಿಶ್ವದ ಮಹಾನ ವ್ಯಕ್ತಿಯಾಗಿದ್ದಾರೆ ಎಂದು ಗ್ರಾಪಂ ಪಿಡಿಒ ಕೆ.ಆರ್.ಶಿವಾನಗೋಳ ಹೇಳಿದರು.
ಅವರು ಶನಿವಾರ ಗ್ರಾಮದಲ್ಲಿ ಜೈ ಭೀಮ ಯುವಕ ಮಂಡಳ ವತಿಯಿಂದ ಅಂಬೇಡ್ಕರ ವೃತ್ತದಲ್ಲಿ ಹಮ್ಮಿಕೊಂಡ ಡಾ|| ಬಿ ಆರ್ ಅಂಬೇಡ್ಕರರ 127 ನೇ ಜನ್ಮ ದಿನದಂದು ಭಾವಚಿತ್ರಕ್ಕೆ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಭಾರತ ದೇಶಕ್ಕೆ ಸಂವಿಧಾನವನ್ನು ರೂಪಿಸಿ ಅನೇಕ ರೀತಿಯ ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸಿ ಜನರಲ್ಲಿರುವ ಮೇಲು- ಕೀಳು ಎಂಬ ಭಾವನೆಯನ್ನು ಹೊಗಲಾಡಿಸಲು ಪ್ರಯತ್ನಿಸಿದರು. ಅಂತಹವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಕಾರ್ಯದರ್ಶಿ ಈರಪ್ಪ ತಮದಡ್ಡಿ, ತಾಪಂ ಸದಸ್ಯ ಸದಾಶಿವ ಹರಪಾಳೆ, ಮೈನುದ್ದೀನ್ ಡೊಂಗರಗಾಂವ, ಶಾಮು ಕುಂಬಾರ, ನೂರಅಹ್ಮದ್ ಡೊಂಗರಗಾಂವ, ಉಮ್ಮಯ್ಯ ಪೂಜಾರಿ, ಶೌಖತಲಿ ಡೊಂಗರಗಾಂವ, ಚಿದಾನಂದ ತಳಕೇರಿ, ಶ್ರೀಕಾಂತ ಆಲಗೂರ, ಹಣಮಂತ ಕನ್ನಾಳ, ನಿಜಲಿಂಗ ಬಡಕೆ, ದುಂಡಪ್ಪ ಬಾಡಗಿ, ಸಂಗಪ್ಪ ದೇವಖಾತೆ, ಅಣ್ಣೇಶ ಗುರಪ್ಪಗೋಳ, ಸುನೀಲ ಗುರಪ್ಪಗೋಳ, ಮುರಗೇಪ್ಪ ಕನ್ನಾಳ, ಮುದಕ ಪುಂಡಿಪಲ್ಲೆ, ವಿಕಾಸ ಗುರಪ್ಪಗೋಳ, ಅಶೋಕ ಮೆಂಡಿಗೇರಿ, ಶಂಕರ ಗುರಪ್ಪಗೊಳ, ಕುಮಾರ ತಳಕೇರಿ, ಖಂಡು ಅಜಟರಾವ, ಸುನೀಲ ಕಾಂಬಳೆ, ಸುಭಾನ ಮೆಂಡಿಗೇರಿ, ಚೇತನ ಪುಂಡಿಪಲ್ಲೆ, ಶಿವು ತಳಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದರು.

ಗ್ರಾಮ ಪಂಚಾಯತ: ಸ್ಥಳೀಯ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಅಂಬೇಡ್ಕರರ 127 ನೇ ಜನ್ಮ ದಿನದಂದು ಭಾವಚಿತ್ರಕ್ಕೆ ಹಿರಿಯರಾದ ಸಂಗಪ್ಪ ದೇವಖಾತೆ ಪೂಜೆ ನೇರವೆರಿಸಿದರು, ಗ್ರಾಪಂ ಪಿಡಿಒ ಕೆ.ಆರ್ ಶಿವಾನಗೋಳ, ಗ್ರಾಮಲೆಕ್ಕಿಗ ಎಮ್.ಎ.ಮುಜಾವರ, ಈರಪ್ಪ.ತಮದಡ್ಡಿ, ಶ್ರೀಕಾಂತ.ಆಲಗೂರ, ರಮೇಶ.ನಾಗಣಿ, ದುಂಡಪ್ಪ.ಬಾಡಗಿ, ಮುರಗೆಪ್ಪ. ಕನ್ನಾಳ, ಮೈಬೂಬ ಪಡಸಲಗಿ, ಸಿಕ್ಕಂದರ ಮುಜಾವರ, ವಿಠ್ಠಲ ಸರಗರ, ಸುನೀಲ ಕಾಂಬಳೆ, ತುಕಾರಾಮ.ದೇವಖಾತೆ, ಅಪ್ಪಾಸಾಬ.ನಾಗಣಿ ಸೇರಿದಂತೆ ಎಲ್ಲ ಗ್ರಾಮ ಪಂಚಾಯತ ಸದಸ್ಯರು ಹಾಗೂ ಸಿಬ್ಬಂದಿಯವರು ಅನೇಕರು ಉಪಸ್ಥಿತರಿದ್ದರು.
ಸಾರ್ವಜನಿಕ ಗ್ರಂಥಾಲಯ:ಸ್ಥಳೀಯ ಸಾರ್ವಜನಿಕ ಗ್ರಂಥಾಲಯದಲ್ಲಿ ಅಂಬೇಡ್ಕರರ ಜನ್ಮ ದಿನದಂದು ಭಾವಚಿತ್ರಕ್ಕೆ ಅಣ್ಣೇಶ ಗುರಪ್ಪಗೋಳ ಪೂಜೆ ಸಲ್ಲಿಸಿದರು. ಗ್ರಾಪಂ ಪಿಡಿಒ ಕೆ.ಆರ್.ಶಿವಾನಗೋಳ, ಕಾರ್ಯದರ್ಶಿ ಈರಪ್ಪ ತಮದಡ್ಡಿ, ಮೇಲ್ವಿಚಾರಕ ಕೆ.ಡಿ.ಸತ್ತಿ, ಉಮ್ಮಯ್ಯ.ಪೂಜಾರಿ, ಸಂಗಪ್ಪ.ದೇವಕಾತೆ, ದುಂಡಪ್ಪ.ಬಾಡಗಿ, ಸುನೀಲ.ಗುರಪ್ಪಗೋಳ, ಅಪ್ಪಾಸಾಬ.ನಾಗಣಿ, ರಾಕೇಶ.ಕನ್ನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸರಕಾರಿ ಪ್ರೌಢ ಶಾಲೆ :ಸ್ಥಳೀಯ ಸರಕಾರಿ ಪ್ರೌಢ ಶಾಲೆಯಲ್ಲಿ ಅಂಬೇಡ್ಕರರ ಜನ್ಮ ದಿನದಂದು ಭಾವಚಿತ್ರಕ್ಕೆ ಹಿರಿಯರಾದ ಶೌಖತಲಿ ಡೊಂಗರಗಾಂವ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ಎಸ್‍ಡಿಎಮ್‍ಸಿ ಅಧ್ಯಕ್ಷ ಸಂಗಯ್ಯಾ ಪೂಜಾರಿ, ಪಿಡಿಒ ಕೆಆರ್ ಶಿವಾನಗೋಳ, ಶ್ರೀಕಾಂತ ಆಲಗೂರ, ಸಂಗಪ್ಪ ದೇವಖಾತೆ, ಸದಾಶಿವ ಹರಪಾಳೆ, ತುಕಾರಾಮ ದೇವಖಾತೆ, ವಸಂತ ಝರೆ, ಚಿದಾನಂದ ತಳಕೇರಿ, ಗಜಾನಂದ ಅಜಟರಾವ, ಪರಶುರಾಮ ಮಾದರ, ಸಿದರಾಮೇಶ್ವರ ಮೋಟಗಿ, ಮಹಾಂತೇಶ ನಾಟೀಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...