‘ಖಗೋಳ ವಿಸ್ಮಯ’ ಶೂನ್ಯ ನೆರಳಿನ ದಿನ ಆಚರಣೆ

0
14
loading...

ಮುಂಡರಗಿ : ಸಮೀಪದ ಜಾಲವಾಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೂನ್ಯ ನೆರಳಿನ ದಿನದ ಅಂಗವಾಗಿ, ಮಕ್ಕಳು ಹಾಗೂ ಶಿಕ್ಷಕರು ಶಾಲಾ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ಏ.24 ರಂದು ಸೂರ್ಯನ ಬಿಸಿಲು ನೇರ ನೆತ್ತಿಯ ಮೇಲೆ ಬಿಳುತ್ತದೆ. ಮಧ್ಯಹ್ನದ ಸೂರ್ಯನ ಕಿರಣಗಳು ನೇರವಾಗಿ ವಸ್ತುವಿನ ಮೇಲೆ ಬಿದ್ದಾಗ ವಸ್ತುವಿನ ಕೆಳಗೆ ನೆರಳು ಬೀಳದಂತಾಗುತ್ತದೆ. ಈ ಖಗೋಳ ಪ್ರಕ್ರಿಯೆಯನ್ನು ಶೂನ್ಯ ನೆರಳಿನ ದಿನವೆಂದು ಆಚರಿಸುತ್ತಾರೆ ಎಂದು ವಿಜ್ಞಾನ ಶಿಕ್ಷಕ ರವಿ ದೇವರಡ್ಡಿ ಮಾಹಿತಿ ನೀಡಿದರು.
ಸೂರ್ಯ ಮಕರ ಸಂಕ್ರಾಂತಿ ವೃತ್ತದಿಂದ, ಕರ್ಕಾಟಕ ಸಂಕ್ರಾಂತಿ ವೃತ್ತದ ಕಡೆ ಚಲಿಸುವಾಗ ವರ್ಷದಲ್ಲಿ ಒಂದು ಬಾರಿ, ನೇರ ನೆತ್ತಯ ಮೇಲೆ ಬಿಳುತ್ತದೆ. ಪ್ರತಿ ವರ್ಷ ಏ.24 ರಂದು ಈ ವಿದ್ಯಮಾನ ನಡಿಯುತ್ತದೆ. ಇದು ಉತ್ತರಭಾರತದಲ್ಲಿ ಅಷ್ಟು ಪರಿಣಾಮಕಾರಿಯಾಗಿ ಕಾಣುವುದಿಲ್ಲ ಎಂದು ಮಕ್ಕಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಜಿ.ಬಿ.ಗೊಲ್ಲರಟ್ಟಿ , ತಾಲ್ಲೂಕಾ ಶಿಕ್ಷಕರ ಸಂಘದ ಕಾರ್ಯದರ್ಶಿ ವಿಶ್ವನಾಥ ಉಳ್ಳಾಗಡ್ಡಿ ಇದ್ದರು.

loading...