ಗುಣಮಟ್ಟ ರಸ್ತೆ ಕಾಮಗಾರಿ ಮಾಡಿಸಿಕೊಡಬೇಕೆಂದು ಒತ್ತಾಯ

0
16
loading...

ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದ ಗ್ರಾ.ಪಂ ಕಾರ್ಯಾಲಯ ಮಾರ್ಗವಾಗಿ ಆಂಜನೇಯ ದೇವಾಲಯದವರೆಗೆ ನಿರ್ಮಾಣ ಮಾಡಲಾದ ಡಾಬರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋಗುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 2017-18ನೇ ಸಾಲಿನ ಅಂದಾಜು 12.22 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 400 ಮೀಟರ್ ರಸ್ತೆ ಡಾಂಬರಿಕರಣ ಕಾಮಗಾರಿ ಇದಾಗಿದ್ದು, ಹೊಂಡಗಳಿಗೆ ಕಡಿ ಹಾಕಿ ಅದರ ಮೇಲೆಯೇ ಡಾಂಬರಿಕರಣ ಮಾಡಲಾಗಿದೆ. ಕಾಮಗಾರಿಗೆ ಕಡಿಮೆ ಪ್ರಮಾಣದಲ್ಲಿ ಡಾಂಬರ ಬಳಕೆ ಮಾಡಲಾಗಿರುವುದರಿಂದ ಕಾಮಗಾರಿ ಗುಣಮಟ್ಟವಾಗಿಲ್ಲ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಬ್ರೇಕ್ ಹಾಕಿದರೂ ಕಿತ್ತು ಹೋಗುತ್ತದೆ.

ಈ ಬಗ್ಗೆ ಗ್ರಾ.ಪಂ ಅಧ್ಯಕ್ಷ ಮಖ್ಬೂಲಅಹ್ಮದ ಡೊಳ್ಳೇಶ್ವರ ಅವರನ್ನು ಪ್ರಶ್ನಿಸಿದಾಗ, ಕಾಮಗಾರಿ ನಡೆಯುತ್ತಿರುವಾಗಲೇ ಕಾಮಗಾರಿ ಕಪೆಯಾಗುತ್ತಿದೆ ಎಂದು ನಾವು ತಕರಾರು ಮಾಡಿ ಕಾಮಗಾರಿಯನ್ನು ನಿಲ್ಲಿದ್ದೆವು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಗುಣಮಟ್ಟ ಕಾಮಗಾರಿ ಮಾಡಿಸಿವುದಾಗಿ ಬರವಸೆ ನೀಡಿದ್ದರು. ಆದರೆ ಯತಾ ರೀತಿಯೇ ಕಳಪೆಯಾಗಿ ಕಾಮಗಾರಿಯನ್ನು ಮಾಡಿ ಹೋಗಿದ್ದಾರೆ. ಸುಮಾರು ನಾಲ್ಕು ಇಂಚು ಡಾಂಬರ್ ಹಾಕಬೇಕಿತ್ತು. ಎಲ್ಲಿಂದಲೋ ಬರುತ್ತಾರೆ ತವiಗೆ ಮನ ಬಂದಂತೆ ಕಾಮಗಾರಿ ಪೂರ್ಣಗೊಳಿಸಿ ಹೋಗುತ್ತಾರೆ. ಗ್ರಾ.ಪಂ ಗಮನಕ್ಕೆ ಬರುವುದೇ ಇಲ್ಲ ಎಂದು ಗ್ರಾ.ಪಂ ಸದಸ್ಯ ರಾಜೇಂದ್ರ ಚಿಕ್ಕಮಠ ದೂರಿದರು.
ಹೇಳಿಕೆ: ಸ್ಥಳಕ್ಕೆ ಬೇಟಿ ನೀಡಿ ಮತ್ತೊಮ್ಮೆ ರಸ್ತೆ ಪರಿಶೀಲಿಸಲಾಗುವುದು ಒಂದಾನು ವೇಳೆ ಎಸ್ಟಿಮೇಟ್ ಪ್ರಕಾರ ಕೆಲಸವಾದೇ ಹೋದರೆ ಅಥವಾ ಕಾಮಗಾರಿ ಗುಣಮಟ್ಟದಲ್ಲಿ ವ್ಯತ್ಯಾಸವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸುಭಾಸ ವಡ್ಡಟ್ಟಿ, ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ.

loading...