ಗ್ರಾಮೀಣ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ: ಅಶೋಕ ಪಟ್ಟಣ

0
27
loading...

ರಾಮದುರ್ಗ: ತಾಲೂಕಿನ ಪ್ರತಿ ಗ್ರಾಮಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇ£.É ಹಾಗಾಗಿ ಮತ್ತೊಮ್ಮೆ ಜನಾಶೀರ್ವಾದ ಯಾಚಿಸಿ ಪಾದಯಾತ್ರೆ ಮೂಲಕ ಮತ ಯಾಚನೆ ಮಾಡುತ್ತಿದ್ದೆನೆ. ಹಾಗೂ ಅಪಾರ ಜನರು ಬೆಂಬಲ ಇರುವುದರಿಂದ ಗೆಲವು ನಿಶ್ಚಿತ ಎಂದು ಶಾಸಕ ಅಶೋಕ ಪಟ್ಟಣ ಅಭಿಪ್ರಾಯ ವ್ಯಕ್ತ ಪಡಿಸಿದರು.

ತಾಲೂಕಿನ ಅವರಾದಿ ಗ್ರಾಮದಿಂದ ನಡೆದ ಮತ್ತೊಮ್ಮೆ ಜನಾಶೀರ್ವಾದ ಯಾಚಿಸಿ ಶಾಸಕ ಅಶೋಕ ಪಟ್ಟಣ ಅವರಿಂದ ಅವರಾದಿಯಿಂದ ರಾಮದುರ್ಗದವರಗೆ 15 ಕೀಮಿ ಪಾದಯಾತ್ರೆಯ ಮೂಲಕ ಆಗಮಿಸಿ ಕುದರಿ ಬೈಲಿನಲ್ಲಿ ಸಾಯಂಕಾಲ 5 ಗಂಟೆಗೆ ಸಮಾವೇಶಗೊಂಡಿತು. ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಜನಪರ ಕೆಲಸ ಹಾಗೂ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ತಾಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬಿಜೆಪಿಯ ನಾಯಕರು ಅಭಿವೃದ್ಧಿ ಸಹಿಸದೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಇವರು ತಮ್ಮ ಅಧಿಕಾರ ಅವಧಿಯಲ್ಲಿ ಯಾಕೆ ಅಭಿವೃದ್ದಿ ಕೆಲಸ ಮಾಡಲಿಲ್ಲ. ಅವರದೆ ಪಕ್ಷ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಕೆಲವು ಅಧಿಕಾರಿಗಳ ವರ್ಗಾವಣೆ ಮಾಡಿಸಿಕೊಳ್ಳಲು ಬರುತ್ತಿದ್ದರು. ಜೈಲು ವಾಸ ಅನುಭವಿಸಿ ಬಂದವರ ಪಕ್ಷದವರ ಕಡೆಯಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಲೇವಡಿ ಮಾಡಿದರು.
ಅಶೋಕ ಪಟ್ಟಣ ಅವರು ಸಾಕಷ್ಟು ಅಭಿವೃದ್ಧಿಯ ಜೊತೆಗೆ ರೈತರಿಗೆ ನೀರಾವರಿಯನ್ನು ಕಲ್ಪಿಸಿದ ಅಧುನಿಕ ಭಗೀರಥ. ತಾಲೂಕಿನ ಜನರು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಕೆಪಿಸಿಸಿ ಕಾರ್ಯಧರ್ಶಿ ದಯಾನಂದ ಪಾಟೀಲ ಸಿದ್ದಲಿಂಗಪ್ಪ ಶಿಂಗಾರಗೊಪ್ಪ, ಶಿವಾನಂದ ಚಿಕ್ಕೋಡಿ, ಪುರಸಭೆಯ ಅಧ್ಯಕ್ಷ ಅಶೋಕ ಸೂಳಿಭಾವಿ, ಸಿದ್ದನಗೌಡ ಪಾಟೀಲ, ಜಯಪ್ರಕಾಶ ಶಿಂಧೆ, ಜಿಪಂ ಸದಸ್ಯ ಕೃಷ್ಣಾ ಲಮಾಣಿ, ಯುವ ಕಾಂಗ್ರೆಸ್ ಅಧ್ಯಕ್ಷ ರಮೇಶ ಬಂಡಿವಡ್ಡರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಜಿ.ಬಿ.ರಂಗನಗೌಡರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

loading...