ಗ್ರಾಹಕರ ಮಕ್ಕಳಿಗೆ ಶ್ರೀರಾಮ ಪೈನಾನ್ಸ್‌ ಶಿಷ್ಯವೇತನ: ಸುರೇಶ

0
13
loading...

ನರಗುಂದ: ಶ್ರೀರಾಮ ಪೈನಾನ್ಸ್‌ ಟ್ರಾನ್ಸಪೋರ್ಟ ಕಂಪನಿಯು ಗ್ರಾಹಕರಿಗೆ ಅನೇಕ ಸವಲತ್ತುಗಳನ್ನು, ಉತ್ತಮ ಹಣಕಾಸಿನ ವ್ಯವಸ್ಥೆ ಹಾಗೂ ಗ್ರಾಹಕರ ಮಕ್ಕಳಿಗೆ ಪ್ರತಿ ವರ್ಷವೂ ಶಿಷ್ಯವೇತನ ನೀಡುವ ಮಹತ್ವದ ಯೋಜನಗಳನ್ನು ಜಾರಿ ತಂದಿದೆ ಎಂದು ಶ್ರೀರಾಮ ಪೈನಾನ್ಸ್‌ ಟ್ರಾನ್ಸ್‌ಪೋರ್ಟ ಹುಬ್ಬಳ್ಳಿ ವಿಭಾಗೀಯ ಮುಖ್ಯ ವ್ಯವಸ್ಥಾಪಕ ಸುರೇಶ ಚವ್ಹಾಣ ತಿಳಿಸಿದರು.
ಇಲ್ಲಿನ ಶ್ರೀರಾಮ ಪೈನಾನ್ಸ್‌ ಟ್ರಾನ್ಸಪೋರ್ಟ ಕಂಪನಿ ವತಿಯಿಂದ ಬುಧವಾರ ‘ತಮ್ಮ ಗ್ರಾಹಕರ ಮಕ್ಕಳಿಗೆ ಶಿಷ್ಯವೇತನ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶ್ರೀರಾಮ ಪೈನಾನ್ಸ್‌ ಟ್ರಾನ್ಸಪೋರ್ಟ ಕಂಪನಿಯು ನರಗುಂದ, ನವಲಗುಂದ, ರಾಮದುರ್ಗ, ಸವದತ್ತಿ ಹಾಗೂ ಬದಾಮಿ ತಾಲೂಕಿನ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಸಾಲ ಸೌಲಭ್ಯದ ಅವಕಾಶ ಕಲ್ಪಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಹಕರ ಮಕ್ಕಳಿಗೆ ಶಿಷ್ಯವೇತನ ಜಾರಿಮಾಡಲಾಗಿದೆ. ಗ್ರಾಹಕರ ಬಡ ಮಕ್ಕಳಿಗೆ ಈ ಶಿಷ್ಯವೇತನ ನೀಡಲಾಗುತ್ತಿದೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ವಿಭಾಗಗಳಲ್ಲಿ ಗ್ರಾಹಕರ ಮಕ್ಕಳು ವಿದ್ಯಾಅಭ್ಯಾಸ ಮುಂದುವರೆಸಲು ಅವರಿಗೆ ಅನುಕೂಲವಾಗುವಂತೆ ಮೂರು ಸಾವಿರ ರೂ ಶಿಷ್ಯವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಒಟ್ಟು 83 ವಿದ್ಯಾರ್ಥಿಗಳಿಗೆ ಈ ಶಿಷ್ಯವೇತನ ನೀಡಲಾಗಿದೆ. ನರಗುಂದ ತಾಲೂಕಿನ ಶ್ರೀರಾಮ ಪೈನಾನ್ಸ್‌ ಟ್ರಾನ್ಸಪೊರ್ಟ ಕಂಪನಿಯಲ್ಲಿ ಒಟ್ಟು 1000 ರಷ್ಟು ಗ್ರಾಹಕರಿದ್ದಾರೆ ಎಂದು ತಿಳಿಸಿದರು.
ನರಗುಂದ ಶಾಖಾ ವಿಭಾಗದ ವ್ಯವಸ್ಥಾಪಕ ಗೋಪಾಲ ಹರ್ಲಾಪೂರ, ಸಂದೀಪ್‌ ಪಾಚಲಾಗ, ಪ್ರಕಾಶ ಪದಕಿ ಮಾತನಾಡಿದರು. ವೇದಿಕೆಯ ಮೇಲೆ ಸಿದ್ದಪ್ಪ ಕೋಟಿ, ಎಚ್‌.ಎಂ. ಪಾಣಿಗಟ್ಟಿ, ಬಾಬೂರಾವ ಮೋಟೆ, ಮಹೆಬೂಬ ಅಡ್ಲಿ, ದ್ಯಾಮಣ್ಣ ಬೆನಕೊಪ್ಪ, ಸಿದ್ದಪ್ಪ ಸುಳ್ಳದ ಉಪಸ್ಥಿತರಿದ್ದರು. ರಾಮಚಂದ್ರ ಕುಲಕರ್ಣಿ, ಮಡಿವಾಳ ಗುಡ್ಡಕೊಪ್ಪ, ಐಶ್ವರ್ಯ ಗುಡಿಸಾಗರ ನಿರ್ವಹಿಸಿದರು.

loading...