ಗ್ರಾ.ಪಂ ಕಾರ್ಯಾಲಯವನ್ನು ಸ್ಥಳಾಂತರಿಸಬೇಕೆಂದು ಒತ್ತಾಯ

0
25
loading...

ಕನ್ನಡ್ಮಮ ಸುದ್ದಿ-ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಗ್ರಾ.ಪಂ ಕಾರ್ಯಾಲಯವನ್ನು ಕಣ್ಣಿಗೇರಿಯಿಂದ ಹಳಿಯಾಳ ಕ್ರಾಸ್‍ಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಜಮಗುಳಿ ಗ್ರಾಮಸ್ಥರು ತಾ.ಪಂ ಇಒ ಮೂಲಕ ಜಿ.ಪಂ ಇಒ ಅವರಿಗೆ ಮನವಿ ಸಲ್ಲಿಸಿದರು.

ಸಲ್ಲಿಸಿದ ಮನವಿಯಲ್ಲಿ ಕಣ್ಣಿಗೇರಿ ಗ್ರಾ.ಪಂ ನೂತನ ಕಟ್ಟಡಕ್ಕೆ ಉದ್ಯೋಗ ಖಾತರಿ ಯೋಜನೆಯಡಿ 20 ಲಕ್ಷ ರೂ ಮಂಜೂರಿಯಾಗಿದ್ದು ಇರುತ್ತದೆ. ಈ ಹಣದಿಂದ ಕಟ್ಟಡ ಕಾಮಗಾರಿಯನ್ನು ಪಂಚಾಯತದ ಮಧ್ಯಸ್ಥಳವಾದ ಹಳಿಯಾಳ ಕ್ರಾಸ್‍ನಲ್ಲಿ ನಿರ್ಮಿಸಬೇಕು. ಗ್ರಾ.ಪಂ ವ್ಯಾಪ್ತಿಯ ಮಾವಳ್ಳಿ, ಚಿಕ್ಕಮಾವಳ್ಳಿ, ಸಾತನಕೊಪ್ಪ, ಹಿಟ್ಟಿನಬೈಲ್, ದುರ್ಗಾಡಿ, ಕೋಳಿಕೇರಿ, ದೇಶಪಾಂಡೆನಗರ, ಬೆಳಗೇರಿ, ಜಮಗುಳಿ, ಕಲಗದ್ದೆ, ಅರಳಿಕೊಪ್ಪ, ಕೃಷ್ಣಗದ್ದೆ, ಬಸವಣ್ಣನಗರ ಮಜರೆಗಳಿಗೆ ಮಧ್ಯಸ್ಥಳವಾಗಿದೆ. ಕಾರಣ ಈ ಕಟ್ಟಡವನ್ನು ಹಳಿಯಾಳ ಕ್ರಾಸ್‍ನಲ್ಲಿ ನಿರ್ಮಿಸಬೇಕು. ಇಲ್ಲವಾದರೆ ತಾ.ಪಂ ಎದುರು ಪ್ರತಿಭಟನೆ ನಡಸಲಾಗುವುದೆಂದು ಎಚ್ಚರಿಸಿದ್ದಾರೆ.
ಗ್ರಾಮಸ್ಥರಾದ ಕುಮಾರ ಮರಾಠಿ, ಸಂತೋಷ ಮರಾಠಿ, ವಿಶ್ವನಾಥ ಗಾಂವ್ಕಾರ, ಸೀತಾರಾಮ ಗಾಂವ್ಕಾರ, ಗಣಪತಿ ಮರಾಠಿ, ಸುರೇಶ ಮರಾಠಿ, ನರಸಿಂಹ ಗಾಂವ್ಕಾರ, ಮಹೇಶ ಮರಾಠಿ, ಕೃಷ್ಣ ಗಾಂವ್ಕಾರ, ಮಹಾಬಲೇಶ್ವರ ಮರಾಠಿ ಮುಂತಾದವರಿದ್ದರು.

loading...