ಚಿಕ್ಕ ಸ್ಕೋರ್ ನಿಂದ ದೊಡ್ಡ ಗೆಲುವು ಕಂಡ ಸನ್ ರೈಸರ್ಸ ಹೈದ್ರಾಬಾದ

0
17
loading...

ಜೈಪುರ: ಸವಾಯಿ ಮಾನಸಿಂಗ್ ಮೈದಾನ್ ಮತ್ತೊಂದು ರೋಚಕ್ ಪಂದ್ಯಕ್ಕೆ ಸಾಕ್ಷಿಯಾಯಿತು. ಹೈದ್ರಾಬಾದ ಹಾಗೂ ರಾಜಸ್ತಾನ ನಡುವಣ ಪಂದ್ಯದಲ್ಲಿ ಸನ್ ರೈಸರ್ಸ್ ೧೧ ರನ್ ಗಳ ಗೆಲುವು ಪಡೆದಿದೆ.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹೈದ್ರಾಬಾದ ತಂಡ ಆರಂಭದಲ್ಲೆ ಧವನ್ ವಿಕೆಟ್ ಕಳೆದುಕೊಂಡಿತು.ನಾಯಕ ವಿಲಿಯಂಸನ್ ಹಾಗೂ ಹೆಲ್ಸ್ ಜೊತೆಯಾಟದ ಮೂಲಕ ಇನಿಂಗ್ಸ್ ಕಟ್ಟಿದರು. ಟೂರ್ನಿಯ ನಾಲ್ಕನೆ ಅರ್ಧಶತಕ ಬಾರಿಸಿದ ವಿಲಿಯಂಸನ್ ೬೩ ರನ್ ಗಳ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾದರು ಮತ್ತೊಂದು ಕಡೆ ೪೫ ರನ್ ಮಾಡಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಹೆಲ್ಸ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಸ್ಯಾಮಸನ್ ಗೆ ಕ್ಯಾಚ್ ನೀಡಿ ಹೊರ ನಡೆದರು. ಬಳಿಕ ಬಂದ ಯಾವುದೆ ಬ್ಯಾಟ್ಸ್ಮನ ಹೈದ್ರಾಬಾದ ಪರ ರನ್ ಗಳಿಸುವ ವಿಚಾರ ಮಾಡಲಿಲ್ಲಾ . ಕನ್ನಡಿಗ ಮನೀಷ್ ಪಾಂಡೆ ೧೬ ರನ್ ಮಾಡಿ ಕಳಪೆ ಆಟದ ಪ್ರದರ್ಶನ ನೀಡಿದರು. ನಿಗದಿತ ಓವರಗಳಲ್ಲಿ ಹೈದ್ರಾಬಾದ ೧೫೧ ರನ್ಗಳ ಗುರಿ ನೀಡಿತು.
ಎದುರಾಳಿಗಳಿಗೆ ಕಡಿಮೆ ಗುರಿಯನ್ನು ನೀಡಿ ರೋಚಕ ಗೆಲುವು ಪಡೆಯುವುದು ಸನ್ ಪಡೆಯ ಅಭ್ಯಾಸವಾಗಿದೆ.
ರಾಜಸ್ತಾನ ತಂಡಕ್ಕೆ ಹೈದ್ರಾಬಾದ್ ತಂಡ ಕೇವಲ ೧೫೧ ರನ್ ಗಳ ಚಿಕ್ಕ ಟಾರ್ಗೆಟ್ ನೀಡಿತ್ತು . ಇದನ್ನು ಚೇಸ್ ಮಾಡದ ರಾಜಸ್ತಾನ ಕೇವಲ ೧೪೦ ರನ್ ಮಾಡಿ ಕೇವಲ ೧೧ ರನ್ ಗಳಿಂದ ಹಿಂದುಳಿಯಿತು.
ರಾಜಸ್ತಾನ‌ ಪರ ನಾಯಕ ರಹಾನೆ ೬೫ ಹಾಗೂ ಸಂಜು ಸ್ಯಾಮಸನ್ ೪೦ ರನ್ಗಳ ಕಾಣಿಕೆ ನೀಡಿದ್ನು ಬಿಟ್ಟರೆ ಉಳಿದ ಆಟಗಾರರು ಬ್ಯಾಟಿಂಗ್ ಮರೆತಂತೆ ಬ್ಯಾಟ್ ಬೀಸಿದರು.ಹೈದ್ರಾಬಾದ ತಂಡ ಬ್ಯಾಟಿಂಗನಿಂದ ಅಷ್ಟೇ ಅಲ್ಲ ಕಡಿಮೆ ಸ್ಕೋರ್ ಮಾಡಿ ಬೌಲಿಂಗ‌ ಮೂಲಕ ಗೆಲ್ಲೊದು ಹೇಗೆ ಎಂದು ತೋರಿಸಿತು.

loading...