ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಗೆಲ್ಲಲಿದ್ದೇನೆ: ಶಾಸಕ ಶಿವರಾಮ

0
14
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನಾನು ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಗೆಲ್ಲಲಿದ್ದೇನೆ. ಇದಕ್ಕೆ ಕಳೆದ 5 ವರ್ಷದ ಅಭಿವೃದ್ಧಿ ಕಾರ್ಯಗಳೇ ಪ್ರಮುಖ ಕಾರಣ ಮತ್ತು ಬಿಜೆಪಿ ಮುಖಂಡರ ಗೊಂದಲವು ಹೆಚ್ಚು ನನಗೆ ಬೆಂಬಲ ದೊರೆಯುವುದಕ್ಕೆ ಕಾರಣವಾಗುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೆಳಿದರು.
ತಾಲ್ಲೂಕಿನ ಕುಂದರಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಣಗುಂಡಿಯಲ್ಲಿ ಬಿಜೆಪಿ ತೊರೆದ ಸುಮಾರು 20 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುವಲ್ಲಿ ಕೈಜೋಡಿಸಬೇಕು ಎಂದರು.
ಈ ಸಂಧರ್ಭದಲ್ಲಿ ಪಕ್ಷದ ಪ್ರಮುಖರಾದ ಎಂ.ಜಿ.ಭಟ್ಟ ಸಂಕದಗುಂಡಿ, ನರಸಿಂಹ ನಾಯ್ಕ, ರಾಘು ನಾಯ್ಕ ಬೆಳಲೆ, ಯುವರಾಜ ನಾಯ್ಕ, ಜಾನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಗಿರೀಶ ನಾಯ್ಕ, ಚೇತನ ಪೂಜಾರಿ, ಸಂತೋಷ ಪೂಜಾರಿ, ಸುನೀಲ ಪೂಜಾರಿ, ಅಶೋಕ ನಾಯ್ಕ, ಮಧುಕೇಶ್ವರ ನಾಯ್ಕ, ಸಂತೋಷ ನಾಯ್ಕ, ವಿನಾಯಕ ನಾಯ್ಕ, ರಮೇಶ ದೇವಾಡಿಗ, ರಾಮಚಂದ್ರ ಅಂಬಿಗ, ಚಂದ್ರಶೇಖರ ದೇವಾಡಿಗ, ರಾಮಚಂದ್ರ ದೇವಾಡಿಗ, ರವೀಂದ್ರ ನಾಯ್ಕ, ರಾಘವೇಂದ್ರ ನಾಯ್ಕ, ದರ್ಶನ ನಾಯ್ಕ, ನರಸಿಂಹ ಸಿದ್ದಿ, ಗಣಪತಿ ಗೌಡ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಗೊಂಡವರಾಗಿದ್ದಾರೆ.

loading...