ಚುನಾವಣೆಯ ಕುರಿತು ಪತ್ರಕರ್ತರಿಗೆ ಮಾಹಿತಿ

0
22
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರವು ಮುಂಡಗೋಡ ಹಾಗೂ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ ಕ್ಷೇತ್ರಗಳನ್ನು ಒಳಗೊಂಡಿದ್ದು ಒಟ್ಟೂ-1,68,116 ಮತದಾರರಿದ್ದು ಅವರಲ್ಲಿ ಪುರುಷರು-85,999, ಮಹಿಳೆಯರು-82,117 ಮತದಾರರು ಇದ್ದಾರೆ. 100 ಪ್ರತಿಶತದಷ್ಟು ಎಪಿಕ್ ಕಾರ್ಡನ್ನು ನೀಡಲಾಗಿದೆ. ಎಂದು ಕ್ಷೇತ್ರ ಚುನಾವಣಾಧಿಕಾರಿ ಮಹಾಂತೇಶಪ್ಪ.ಎಂ.ಹೇಳಿದರು.

ಅವರು ಸೋಮವಾರ ಪಟ್ಟಣದ ತಾಲೂಕಾ ಕಛೇರಿಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರz(À81) ಚುನಾವಣೆಯ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದರು.
ಯಲ್ಲಾಪುರ ವಿಧಾನಸಭಾ ಮತದಾರ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಒಟ್ಟೂ 230 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಯಲ್ಲಾಪುರ ತಾಲೂಕಿನಲ್ಲಿ 96; ಮುಂಡಗೋಡ ತಾಲೂಕಿನಲ್ಲಿ 88 ಹಾಗೂ ಬನವಾಸಿಯಲ್ಲಿ 46 ಮತಗಟ್ಟೆಗಳಿವೆ. ಚುನಾವಣೆ ಕುರಿತಂತೆ ಯಾವುದಾದರೂ ದೂರುಗಳಿದ್ದರೆ 24 ಘಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಸಂಖ್ಯೆ 08419-262470 ಇದಕ್ಕೆ ಸಾರ್ವಜನಿಕರು ಕರೆ ಮಾಡಬಹುದೆಂದು ಹೇಳಿದರು. ಅಲ್ಲದೇ ಈ ಬಾರಿ ಚುನಾವಣಾ ಆಯೋಗ ನಿರ್ಧರಿಸಿದಂತೆ ಪ್ರತಿ ಪಕ್ಷದ ಅಭ್ಯರ್ಥಿಗೆ ಕೇವಲ 28 ಲಕ್ಷ ರೂ.ಗಳ ಚುನಾವಣಾ ವೆಚ್ಚವನ್ನು ನಿಗದಿಗೊಳಿಸಿದೆ.

ಅಲ್ಲದೇ ಚುನಾವಣಾ ಸಂದರ್ಭದಲ್ಲಿ ಸಂಭವಿಸಬಹುದಾದ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಕ್ಷೇತ್ರದ ಕಿರವತ್ತಿ, ಬಾಚಣಕಿ, ಅಗಡಿ, ದಾಸನಕೊಪ್ಪ. ತಿಗಣಿ ಮುಂತಾದ 5 ಪ್ರದೇಶಗಳಲ್ಲಿ 5 ತನಿಖಾ ಠಾಣೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಕೇಂದ್ರ ವೀಕ್ಷಕರಾಗಿ ಸುನೀಲ್‍ಕುಮಾರ ಜೈನ್, ಆರಕ್ಷಕ ವೀಕ್ಷಕರಾಗಿ ಅಭಿಷೇಕ ತ್ರಿವೇದಿ, ಖರ್ಚು-ವೆಚ್ಚ ವೀಕ್ಷಕರಾಗಿ ಸುರೇಂದ್ರಪಾಲ್ ಸಿಂಗ್ ಇವರನ್ನು ಆಯೋಗ ನೇಮಿಸಿದ್ದು, ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಯಲ್ಲಾಪುರದ ತಹಸೀಲ್ದಾರ ಶಿವಾನಂದ ಉಳ್ಳೇಗಡ್ಡಿ ಹಾಗೂ ಮುಂಡಗೋಡ ತಹಸೀಲ್ದಾರ ವಿಜಯ ಕಡಕಬಾವಿ ಕಾರ್ಯನಿರ್ವಹಿಸಲಿದ್ದಾರೆಂದು ವಿವರಿಸಿದರು. ಸಹಾಯಕ ಚುನಾವಣಾ ಅಧಿಕಾರಿ ಎಸ್.ಬಿ.ಉಳ್ಳೇಗಡ್ಡಿ, ಸಹಾಯಕ ಅಧಿಕಾರಿ ಎಂ.ರಾಜಶೇಖರ ಇದ್ದರು.

loading...