ಚುನಾವಣೆ ಅಧಿಕಾರಿಗಳಿಂದ ಮತಗಟ್ಟೆ ಪರಿಶೀಲನೆ

0
23
loading...

ಕನ್ನಡಮ್ಮ ಸುದ್ದಿ- ಕೋಹಳ್ಳಿ: ವಿಧಾನ ಸಭೆ ಚುನಾವಣೆ ನಿಮಿತ್ತ ಗ್ರಾಮಕ್ಕೆ ಅಥಣಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ ಭೇಟಿ ನೀಡಿ, ಚುನಾವಣೆ ಸಿಮೀತವಾದ ಮತಗಟ್ಟೆಗಳನ್ನು ಪರಿಶೀಲನೆ ನಡೆಸಿದರು.
ನಂತರ ಅವರು, ಕೋಹಳ್ಳಿ ಗ್ರಾಮದಲ್ಲಿ ಒಟ್ಟು ಏಳು ಮತಗಟ್ಟೆಯಲ್ಲಿ ವಿದ್ಯುತ್ ಸೌಲಭ್ಯ, ರ್ಯಾಂಪ್, ಕಿಡಕಿ, ಬಾಗಿಲು, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆಯ ಬಗ್ಗೆ ಖುದ್ದು ಪರಿಶೀಲನೆ ಮಾಡಿದರು. ಪ್ರಾಥಮಿಕ ಶಾಲೆಯಲ್ಲಿ ಇರುವ ಎರಡು ರ್ಯಾಂಪ್‍ಗಳಿಗೆ ಮತದಾರರಿಗೆ ಅನುಕೂಲವಾಗುವಂತೆ ಎರಡು ಬದಿಗೆ ಕಬ್ಬಿಣದ ರ್ವಾಂಡ್ ಹಾಕಬೇಕು. ಗ್ರಾಮದಲ್ಲಿ ರಾಜಕೀಯ ಪಕ್ಷ, ನಾಯಕರನ್ನು ಒಳಗೊಂಡ ಬ್ಯಾನರ್, ಹೊರ್ಡಿಂಗ್ಸ್‍ಗಳನ್ನು ತೆರವುಗೊಳಿಸಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಚುನಾವಣೆಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಸಿದ್ದತೆ ಮಾಡಿಕೊಳ್‍ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಅಧಿಕಾರಿಗಳಾದ ಉದಯಗೌಡ ಪಾಟೀಲ, ಎನ್ ಟಿ ಉಗಾರೆ, ರವಿ, ಮಾಯಣ್ಣವರ, ಮಠದ, ಪಿಡಿಒ ಈರಪ್ಪ ತಮದಡ್ಡಿ, ಗ್ರಾಮ ಸಹಾಯಕ ಮಹಾಂತೇಶ ನಾಟೀಕಾರ, ಹಣಮಂತ ಸತ್ತಿ, ಅಪ್ಪಾಸಾಬ ಬಾಡಗಿ, ಸಿದ್ದರಾಮೇಶ್ವರ ಮೋಟಗಿ ಸೇರಿದಂತೆ ಎಲ್ಲ ಮತಗಟ್ಟೆ ಅಧಿಕಾರಿಗಳು ಇದ್ದರು.

loading...