ಚುನಾವಣೆ ನೀತಿ ಸಂಹಿತೆಯಿಂದ ಕಲಾ ಪ್ರದರ್ಶನಕ್ಕೆ ಅಡ್ಡಿ

0
13
loading...

ಕನ್ನಡಮ್ಮ ಸುದ್ದಿ-ಕಾರವಾರ: ಜಾತ್ರೆ, ಬಂಡಿಹಬ್ಬಗಳು ನಡೆಯವ ಸಮಯದಲ್ಲಿ ವಿಧಾನ ಸಭೆಯ ಚುನಾವಣೆ ಬಂದಿರುವುದರಿಂದ ಚುನಾವಣೆ ನೀತಿಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ತಡ ರಾತ್ರಿ ನಡೆಯುವ ನಾಟಕ, ಯಕ್ಷಗಾನ ಮುಂತಾದ ಕಲಾ ಪ್ರದರ್ಶನಕ್ಕೆ ಸರಕಾರ ನಿರ್ಬಂಧ ಹೇರಿದ್ದು, ಇಂತಹ ಕಲೆಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಕಲಾವಿದರು ಸಂಕಷ್ಟಕ್ಕೀಡಾಗಿದ್ದಾರೆ.
ಜಿಲ್ಲೆಯಾದ್ಯಂತ ಪ್ರತಿಯೊಂದು ಹಳ್ಳಿ ಹಳ್ಳಿ, ಸಂದುಗೊಂದುಗಳಲ್ಲಿ ತಲೆ ಎತ್ತಿ ನಿಂತಿರುವ ದೇವಸ್ಥಾನ, ಗುಡಿ-ಗುಂಡಾರಗಳಿಗೆ ಸದ್ಯ ಜಾತ್ರೆ, ವಾರ್ಷಿಕೋತ್ಸವದ ಸಮಯ. ದೇವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಾಟಕ, ಯಕ್ಷಗಾನ ಪ್ರದರ್ಶಿಸುವುದು ಈ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೂ ಕೆಲವು ಕಡೆ ಆಧುನಿಕ ಶೈಲಿಯಲ್ಲಿ ಸಾಂಸ್ಕøತಿಕ, ಜಾನಪದ ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.

ಸ್ಟೇಜ್‍ಗೆ ಪರದೆ ಅಳವಡಿಸುವ ಕಾಯಕ ನನ್ನದಾಗಿದ್ದು, ಚುನಾವಣೆ ನೀತಿ ಸಂಹಿತೆಯಿಂದ ಈ ಎಲ್ಲಾ ಬುಕಿಂಗ್‍ಗಳು ರದ್ದಾಗುವ ಸಾಧ್ಯತೆ ಇದ್ದು ಈ ಒಂದೆರಡು ತಿಂಗಳಲ್ಲಿ ನನಗೆ ಸಿಗುವ ಆದಾಯ ಸಹ ಖೋತಾ ಆಗಲಿದೆ. ಹೊಟ್ಟೆಪಾಡಿಗೆ ಬೇರೆ ದಾರಿಯೇ ಇಲ್ಲದಂತಾಗಿದೆ. ತಾನು ಇದನ್ನೆ ನಂಬಿ ಬದುಕುತ್ತಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ನಡೆಯುವ ನಾಟಕ ಮತ್ತು ಯಕ್ಷಗಾನ ಪ್ರದರ್ಶನಗಳು ಮಧ್ಯರಾತ್ರಿಯಿಂದ ಮುಂಜಾನೆ ವರೆಗೂ ನಡೆಯುವುದು ವಾಡಿಕೆ. ಜಾತ್ರಾ ಮಹೋತ್ಸವದ ಅಂಗವಾಗಿ ಜನರು ಇಂತಹ ಕಲಾ ಪ್ರದರ್ಶನಗಳನ್ನು ಕಿಕ್ಕಿರಿದು ಸೇರಿ ರಾತ್ರಿ ಜಾಗರಣೆ ಮಾಡುವುದರ ಮೂಲಕ ಕಲೆಯನ್ನು ಆಸ್ವಾದಿಸುತ್ತಾರೆ. ಇದರಿಂದ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನಕ್ಕೆ ಆದಾಯ ಹಾಗೂ ಕಲಾರಸಿಕರಿಗೆ ಮನರಂಜನೆ ಸಿಗುತ್ತದೆ.

ನೀತಿ ಸಂಹಿತೆ ಪ್ರಕಾರ, ರಾತ್ರಿ 10 ಗಂಟೆಯ ಬಳಿಕ ಯಾವುದೇ ಸಾಂಸ್ಕøತಿಕ, ರಸಮಂಜರಿ, ನಾಟಕ, ಯಕ್ಷಗಾನ ಪ್ರದರ್ಶನ ನಡೆಸಲು ಆಸ್ಪದ ಇಲ್ಲ. ಒಂದುವೇಳೆ ಅಂತಹ ಪ್ರದರ್ಶನವೇನಾದರೂ ಮಾಡಿದರೆ,ಕಾನೂನನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಚುನಾವಣಾಕಾರಿಗಳಿಗೆ ಅಕಾರ ಇದೆ. ಆದರೂ ಇಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳು,ನಾಟಕ,ಯಕ್ಷಗಾನ ಮುಂತಾದವುಗಳು ರಾಜಕೀಯದಿಂದ ಹೊರತಾಗಿದ್ದು,ಸಾಮೂಹಿಕವಾಗಿ ಸಾರ್ವಜನಿಕರಿಂದಲೇ ನಡೆಸಲ್ಪಡುವುದರಿಂದ ಸರಳವಾಗಿ ಸಂಪ್ರದಾಯದಂತೆ ಆಚರಣೆ ಮಾಡಲು ಅವಕಾಶ ನೀಡಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

loading...