ಜನಮನ ರಂಜಿಸಿದ ಜೋಡೆತ್ತಿನ ಓಟದ ಸ್ಪರ್ಧೆ

0
12
loading...

ಸವಣೂರು : ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಸೇವಾ ಸಮಿತಿ ವತಿಯಿಂದ 11 ನೇ ಬಾರಿಯ ರಾಜ್ಯ ಮಟ್ಟದ ಜೋಡೆತ್ತಿನ ಓಟದ ಸ್ಪರ್ಧೆ ಜರುಗಿತು.

ಸ್ಪರ್ಧೆಯಲ್ಲಿ ಸುಮಾರು 18 ಬಹುಮಾನಗಳನ್ನು ಇಡಲಾಗಿತ್ತು. ಸುತ್ತ ಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಪರ್ಧೆಯನ್ನು ವೀಕ್ಷಿಸಲು ಆಗಮಿಸಿದ್ದರು. ಸಿಳ್ಳೆ,ಕೇಕೆ ಹಾಕುವ ಮೂಲಕ ಸ್ಪರ್ಧಾಳುಗಳನ್ನು ನೆರೆದ ಜನ ಹುರುದುಂಬಿಸುತ್ತಿದ್ದರೆ ಸ್ಪರ್ಧಾಳುಗಳು ಮತ್ತಷ್ಟು ಹುಮ್ಮಸ್ಸಿನಿಂದ ಗಾಡಾಗಳನ್ನು ಓಡಿಸುತ್ತಿದ್ದ ದೃಶ್ಯ ನೋಡುಗರ ಮೈನವಿರೇಳುಸುತ್ತಿತ್ತು.ಸ್ಪರ್ಧೆಯಲ್ಲಿ ಒಟ್ಟು 54 ಗಾಡಾಗಳು ಪಾಲ್ಗೊಂಡಿದ್ದವು. ಸ್ಪರ್ಧೆಯಲ್ಲಿ ಬಿಸನಳ್ಳಿ ಗ್ರಾಮದ ಕುರುವತ್ತಿ ಬಸವೇಶ್ವರ ಪ್ರಸನ್ ಜೋಡೆತ್ತಿನ ಗಾಡಾ ಪ್ರಥಮ,ತಳ್ಳಿಹಳ್ಳಿ ಗ್ರಾಮದ ಮೈಲಾರಲಿಂಗೇಶ್ವರ ಪ್ರಸನ್ ಗಾಡಾ ದ್ವಿತೀಯ ಹಾಗೂ ಬಿಸನಳ್ಳಿ ಗ್ರಾಮದ ಬಿಸನಳ್ಳಿ ಹುಲಿ ಹೆಸರಿನ ಗಾಡಾ ತೃತೀಯ ಬಹುಮಾನ ಪಡೆದವು.

loading...