ಜನರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ: ಶ್ರೀನಿವಾಸ್

0
12
loading...

ಹಾನಗಲ್ಲ : ಇನ್ಯಾವತ್ತೂ ಹಾನಗಲ್ ಬಿಡುವ ಮಾತೇ ಇಲ್ಲ. ಇಲ್ಲಿನ ಜನ ತೋರುತ್ತಿರುವ ಪ್ರೀತಿ, ವಿಶ್ವಾಸ, ಬೆಂಬಲಕ್ಕೆ ಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ವಾಸಿಸುವೆ, ಇಲ್ಲಿನ ಜನರಿಗಾಗಿಯೇ ಬದುಕುವೆ ಎಂದು ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ನುಡಿದರು.

ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್‍ಗೆ ಭದ್ರವಾದ ಬುನಾದಿ ಕ್ಷೇತ್ರದಲ್ಲಿದೆ. ಜಾತ್ಯಾತೀತ ಮನೋಭಾವನೆ ಹೊಂದಿರುವ ಜನ ಇಲ್ಲಿದ್ದಾರೆ. ಈ ಕ್ಷೇತ್ರದೊಂದಿಗೆ ವಿಧಾನ ಪರಿಷತ್ ಸದಸ್ಯನಾಗಿ 8 ವರ್ಷಗಳಿಂದ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗೆಗೆ ಅರಿವಿದೆ. ಜನರ ನೆಮ್ಮದಿಯ ಜೀವನಕ್ಕೆ ಏನು ಮಾಡಬೇಕೆನ್ನುವ ಯೋಚನೆ, ಯೋಜನೆ ಮನದಲ್ಲಿವೆ. ಇಲ್ಲಿನ ಜನ ಆರ್ಥಿಕವಾಗಿ ಮೊದಲು ಮುಂದೆ ಬರಬೇಕಿದೆ. ರೈತನ ಆದಾಯ ಹೆಚ್ಚಬೇಕಿದೆ. ದುಡಿಯುವ ಕೈಗಳಿಗೆ ಉದ್ಯೋಗ ದೊರೆಯಬೇಕಿದೆ. ನೀರಾವರಿ ವ್ಯವಸ್ಥೆ ಸುಧಾರಿಸಬೇಕಿದೆ. ಕ್ಷೇತ್ರದ ಮತದಾರರು ಒಂದು ಬಾರಿ ಆಶೀರ್ವದಿಸಿ, ಆಯ್ಕೆ ಮಾಡಿದರೆ ನಾನೇನು ಎನ್ನುವುದನ್ನು ಸಾಬೀತು ಪಡಿಸುವೆ ಎಂದು ಶ್ರೀನಿವಾಸ ಮಾನೆ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಸದಸ್ಯ ಸತೀಶ ದೇಶಪಾಂಡೆ, ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ ಹಿರೇಮಠ ಮುಖಂಡರಾದ ದಾನಪ್ಪ ಘಂಟೇರ, ಹನುಮಂತಪ್ಪ ಕಲ್ಲೇರ, ವಿಷ್ಣುಕಾಂತ ಜಾಧವ, ಇಮ್ತಿಯಾಜ್ ಲೋಹಾರ, ಭೀಮಣ್ಣ ಲಮಾಣಿ, ರುದ್ರಯ್ಯ ಹಿರೇಮಠ, ದಾವಲಸಾಬ ನಾಗನೂರ, ಎಸ್.ಎಸ್.ಹೇರೂರ, ಉಮೇಶ ಗೌಳಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...