ಜನ ಬೆಂಬಲದಿಂದ ಈ ಬಾರಿ ಗೆಲ್ಲುವೆ: ಲಮಾಣಿ

0
30
loading...

ಶಿರಹಟ್ಟಿ: ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಎಲ್ಲ ವರ್ಗದ ಜನತೆ ಬಿಜೆಪಿಯತ್ತ ಮುಖ ಮಾಡುತ್ತಿದ್ದು, ಜನಬಲವೇ ನನಗೆ ಬಲ ಎನಿಸುತ್ತಿದೆ. ಆ ಕಾರಣದಿಂದಾಗಿ ನನಗೆ ಗೆಲ್ಲುವ ವಿಶ್ವಾಸ ಇದೆ ಎಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಪ್ಪ ಲಮಾಣಿ ಹೇಳಿದರು.

ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವತ್ತು ಒಳ್ಳೆಯ ದಿನವೆಂದು ನಾಮಪತ್ರ ಸಲ್ಲಿಸಿದ್ದೇನೆ. 2008ರಿಂದ 2013 ರವರೆಗೆ ಶಾಸಕನಾಗಿ ಕ್ಷೇತ್ರದ ಸಾಮಾಜಿಕ ಸಮಸ್ಯೆ ನಿವಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಾನು ತಂತ್ರ ಮಾಡುವ ಅಗತ್ಯವಿಲ್ಲ. ಹೋದಲ್ಲೆಲ್ಲ ಹಿರಿಯರ ಆಶೀರ್ವಾದ,ಜನತೆ ಬೆಂಬಲ ವ್ಯಾಪಕವಾಗಿ ದೊರೆಯುತ್ತಿದ್ದು ಜನ ಆಶೀರ್ವದಿಸುತ್ತಿದ್ದಾರೆ.
ಕುಡಿಯುವ ನೀರು, ರಸ್ತೆ, ಆಶ್ರಯ ಮನೆ ಕೊಡುವ ಕೆಲಸ ಮಾಡುತ್ತೇನೆ. ಜನಸಾಮಾನ್ಯರ, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದಿಂದ ತಮ್ಮ ಆಯ್ಕೆ ಖಚಿತ,ನನಗೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಸ್ಫರ್ಧೆ ನೀಡಲಿದ್ದಾರೆ ಎಂದು ರಾಮಪ್ಪ ಲಮಾಣಿ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ ಸಂಕನೂರ, ಶಿರಹಟ್ಟಿ ತಾಲೂಕಾ ಬಿಜೆಪಿ ಅಧ್ಯಕ್ಷ ವಿರುಪಾಕ್ಷಪ್ಪ ಅಣ್ಣಿಗೇರಿ, ಅಶೋಕ ಪಲ್ಲೇದ, ದೀಪಕ ಲಮಾಣಿ, ವಿಶ್ವನಾಥ ಕಪ್ಪತ್ತನವರ, ರಾಮಣ್ಣ ಡಂಬಳ, ಜಾನು ಲಮಾಣಿ, ಪರಶುರಾಮ ಇಮ್ಮಡಿ, ತಿಮ್ಮರೆಡ್ಡಿ ಮರಡ್ಡಿ, ಡಿ ವಾಯ್ ಹುನಗುಂದ, ಡಾ. ವಾಯ್.ಎಫ್ ಹಂಜಿ, ಕೆ.ವ್ಹಿ ಹಂಚಿನಾಳ, ನಿಂಬಣ್ಣ ಮಡಿವಾಳರ, ಶೋಭಾ ಲಮಾಣಿ, ಮತ್ತಿತರಿದ್ದರು.

loading...