ಜಾಗತಿಕತೆಗೆ ಸ್ಪರ್ಧೆಯೊಡ್ಡಲು ಕೌಶಲ್ಯ ಅಗತ್ಯ: ಡಾ.ಸಂಗಾಪೂರ

0
21
loading...

ಚಿಕ್ಕೋಡಿ 15: ವಿದ್ಯಾರ್ಥಿಗಳು ಪದವಿಯ ಜತೆಗೆ ಸಾಮಾನ್ಯ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಂಡು ಇಂದಿನ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡಲು ಸಿದ್ಧರಾಗಬೇಕಾದ ಅಗತ್ಯವಿದೆ ಎಂದು ಧಾರವಾಡ ಮಹಾಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಬಿ.ಸಂಗಾಪೂರ ಹೇಳಿದರು.

ಇಲ್ಲಿನ ಕೆಎಲ್‍ಇ ಸಂಸ್ಥೆಯ ಬಸವಪ್ರಭು ಕೋರೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ 2017-18ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಯೋಜನೆ ರೂಪಿಸಿಕೊಂಡು ಆತ್ಮವಿಶ್ವಾಸದಿಂದ ನಿಗತ ಅವಯಲ್ಲಿ ನಿರ್ದಿಷ್ಠ ಗುರಿ ತಲುಪುವ ಮುಖಾಂತರ ಉನ್ನತ ಸಾಧನೆ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಗೆಲು ನಮ್ಮ ಹೆಜ್ಜೆ ಹೆಜ್ಜೆಗೂ ನಮ್ಮನ್ನು ಪರೀಕ್ಷಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಸೋಲಿಗೆ ದೃತಿಗೆಡದೇ ದೈರ್ಯದಿಂದ ಮುನ್ನುಗ್ಗಿದರೇ ಗೆಲುವು ನಿಶ್ವಿತ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಟಿ.ಕುರಣಿ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ಜೀವನದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಎಸ್.ಬಿ.ವಂಜಿರೆ, ಬಿ.ಎಸ್.ಮಾಳಿ ಮುಂತಾದವರು ಉಪಸ್ಥಿತರಿದ್ದರು. ಕ್ರೀಡಾ ವಿಭಾಗ ಉಪಾಧ್ಯಕ್ಷ ಡಾ. ಜಿ.ಪಿ.ಯಳವತ್ತಿಮಠ ಸ್ವಾಗತಿಸಿದರು. ಮಹೇಶ ಮದಭಾಂವಿ ಮತ್ತು ಸಿದ್ದಣ್ಣಾ ನಾಯಿಕ ನಿರೂಪಿಸಿದರು. ಜೆ.ಎಲ್. ಕದಮ್ಮ ವಂದಿಸಿದರು. ಇದೇ ಸಂದರ್ಭದಲ್ಲಿ ಪಿಎಚ್‍ಡಿ ಪದವಿ ಪಡೆದ ಡಾ. ಎ.ಜಿ.ದೇವದಾಸ ಹಾಗೂ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯಕ್ಕೆ ರ್ಯಾಂಕ ಪಡೆದ ಶೈಲಜಾ ನಾಯಿಕ, ಅಶೋಕ ಲಠ್ಠೆ, ಶಶಿಕಲಾ ಪಾಟೀಲ, ಕೃಷ್ಣಾಬಾಯಿ ಪಿರಾಜಿ, ಬಂಡು ಮಾಳಿ ಅವರನ್ನು ಸನ್ಮಾನಿಸಲಾಯಿತು.

loading...