ಜಾಮೀನಿನ ಮೇಲೆ ಬಿಡುಗಡೆಯಾದ ಸೂರಜ ನಾಯ್ಕ

0
21
loading...

ಕನ್ನಡಮ್ಮ ಸುದ್ದಿ-ಕುಮಟಾ: ಹೊನ್ನಾವರದ ತಾಲೂಕಿನ ಕರ್ಕಿಯಲ್ಲಿ ನಡೆದ ಅಕ್ರಮ ಗೋ ಸಾಗಣೆದಾರರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಬಿಜೆಪಿ ಮುಖಂಡ ಸೂರಜ ನಾಯ್ಕ ಸೋನಿ ಅವರು ಜಾಮೀನಿನ ಮೇಲೆ ಶನಿವಾರ ಜೈಲಿನಿಂದ ಬಿಡುಗಡೆಯಾಗಿ ಕುಮಟಾದ ಬಿಜೆಪಿ ಕಚೇರಿಯಲ್ಲಿ ಆಗಮಿಸುತ್ತಿದ್ದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಸೂರಜ ಅವರಿಗೆ ಕ್ಷೀರಾಭಿಷೇಕ ಮಾಡಿ, ಪುಷ್ಪ ಮಳೆ ಗೈದು ಅದ್ದೂರಿಯಾಗಿ ಸ್ವಾಗತಿಸಿದರು.
ನಂತರ ವಿಚಾರಣೆ ನಡೆಸಿದ ಕೋರ್ಟ್ ಜಾಮೀನಿನ ಆದೇಶವನ್ನು ಏ 6ರಂದು ಕಾದಿರಿಸಿ, ಅವರಿಗೆ ಶುಕ್ರವಾರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ದೊರೆತ್ತಿದೆ. ಶನಿವಾರ ಜೈಲಿನಿಂದ ಬಿಡುಗಡೆಯಾಗಿದ ಸೂರಜ ನಾಯ್ಕ ಸೋನಿ ಅವರಿಗೆ ಕರೆತರಲು ನೂರಾರು ಕಾರ್ಯಕರ್ತರು ಕಾರವಾರಕ್ಕೆ ತೆರಳಿದ್ದರು. ಅಲ್ಲಿಂದ ಕುಮಟಾ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರು ಸೂರಜ ಅವರಿಗೆ ಅದ್ದೂರಿಯಾಗಿ ಸ್ವಾಗತ ನೀಡುವ ಜೊತೆಗೆ ಕ್ಷೀರಾಭಿಷೇಕ ಮಾಡಿ, ಪುಷ್ಪ ಮಳೆ ಗೈದರು. ಅಲ್ಲದೆ ಮಾತೇಯರು ಆರತಿ ಬೆಳಗಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ವಿನೋದ ಪ್ರಭು, ಜಗದೀಶ ಬಳ್ಳಾಲ, ಪ್ರಶಾಂತ ನಾಯ್ಕ, ವಿಶ್ವನಾಥ ನಾಯ್ಕ, ಅಶೋಕ ಆಚಾರ್ಯ, ಬಾಸ್ಕರ ನಾಯ್ಕ, ಸಂಪತ್‍ಕುಮಾರ, ಪುಷ್ಪಾ ಶೇಟ್, ಜ್ಯೋತಿ ಶೇಟ್, ನಾಮಧಾರಿ ಸಮಾಜದ ಅಧ್ಯಕ್ಷ ಜಯಂತ ಸಾರಂಗ ನಾಯ್ಕ, ಸಮಾಜದ ಮುಖಂಡರು ಶ್ರೀಧರ ನಾಯ್ಕ, ಅರವಿಂದ ನಾಯ್ಕ, ಅಶೋಕ ನಾಯ್ಕ ಕಡ್ಲೆ ಹಾಗೂ ಸಾವಿರಾರು ಕಾರ್ಯಕರ್ತರು ಸೇರಿದಂತೆ ಸೂರಜ್ ನಾಯ್ಕ ಸೋನಿ ಅವರ ಅಭಿಮಾನಿಬಳದವರು ಉಪಸ್ಥಿತರಿದ್ದರು.

loading...