ಜಾಲತಾಣಗಳಲ್ಲಿ ಚುನಾವಣಾ ಅಭ್ಯರ್ಥಿಗಳ ಪ್ರಚಾರ ಭರಾಟೆ

0
23
loading...

ಬಸವರಾಜ ದಂಡಿನ

ಗದಗ: ಕರ್ನಾಟಕದ ವಿಧಾನಸಭಾ ಚುನಾವಣೆಯ ವಿದ್ಯಮಾನಗಳು ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೊರಿಗಟ್ಟಲೆ ನುಸುಳಿಕೊಳ್ಳುತ್ತಿವೆ. ಮೊಬೈಲ್ ಆನ್ ಮಾಡಿದರೆ ಸಾಕು ವ್ಯಾಟ್ಸ್ ಆ್ಯಪ್, ಫೇಸ್ ಬುಕ್‍ಗಳಲ್ಲಿ ವ್ಹಿಡಿಯೋ ಕ್ಲಿಪಿಂಗ್ಸ್‍ಗಳು ಚುನಾವಣಾ ಅಭ್ಯರ್ಥಿಗಳ ಪ್ರಚಾರದ ಭರಾಟೆಗಳಿಂದ ತುಂಬಿಕೊಳ್ಳುತ್ತಿವೆ.

ಗದಗ ಜಿಲ್ಲೆ ಇದಕ್ಕೆ ಹೊರತಾಗಿಲ್ಲ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆ.ಡಿ.ಎಸ್ ಸೇರಿದಂತೆ ಇತರ ಪ್ರಾದೇಶಿಕ ಪಕ್ಷಗಳ, ಸ್ವತಂತ್ರ್ಯ ಅಭ್ಯರ್ಥಿಗಳ ಫೋಟೋ ವ್ಹಿಡಿಯೋಗಳು ವ್ಯಾಟ್ಸ್ ಆ್ಯಪ್, ಫೇಸ್ ಬುಕ್‍ಗಳಲ್ಲಿ ತುಂಬಿ ತುಳುಕುತ್ತಿವೆ. ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ತಲುಪಲು ವ್ಯಾಟ್ಸ್ ಆ್ಯಪ್, ಫೇಸ್ ಬುಕ್, ಟ್ವೀಟರ್ ಮತ್ತು ಯೂ ಟ್ಯೂಬ್‍ನಂತಹ ಸಾಮಾಜಿಕ ಜಾಲತಾಣಗಳನ್ನು ಪ್ರಚಾರದ ತಂತ್ರವನ್ನಾಗಿ ಬಳಕೆ ಮಾಡಿಕೊಂಡಿವೆ. ಮತದಾರರನ್ನು ತಲುಪಲು ಬಹಳಷ್ಟು ಪರಿಣಾಮಕಾರಿ ಮಾಧ್ಯಮವಾಗಿರುವ ಈ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಲು ರಾಜಕೀಯ ಪಕ್ಷಗಳಿಗೆ, ರಾಜಕೀಯ ಸುದ್ದಿಗಳನ್ನು ಅಪ್‍ಲೋಡ ಮಾಡುವವರಿಗೆ ಚುನಾವಣಾ ಆಯೋಗ ನಿರ್ಧಿಷ್ಠ ಸೂಚನೆಗಳನ್ನೂ ನೀಡಿದೆ.

ಏನು ಸೂಚನೆ : ಫೇಸ್ ಬುಕ್, ಇನ್ಸ್ಟಾಗ್ರಾಮ್, ಬಹು ಸಂಖ್ಯೆ ಎಸ್.ಎಮ್.ಎಸ್., ವ್ಯಾಟ್ಸ್ ಆ್ಯಪ್, ಟ್ವೀಟರ್ ಮತ್ತು ಯೂ ಟ್ಯೂಬ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಮತ್ತು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಜಾಹೀರಾತು ನೀಡುವುದಕ್ಕೆ ಮುಂಚೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಅರ್ಜಿ ನಮೂನೆ -26 ಅಡಿ ತಮ್ಮ ಸಾಮಾಜಿಕ ಜಾಲತಾಣಗಳ ಅಕೌಂಟ ಮಾಹಿತಿ ನಮೂದಿಸಬೇಕು. ಪಕ್ಷಗಳೂ ಸಹ ತಮ್ಮ ಅಕೌಂಟ ನಂಬರ್‍ಗಳ ಮಾಹಿತಿ ಒದಗಿಸಬೇಕು. ಪೂರ್ವಾನುಮತಿ ಜಾಹೀರಾತು ಮಾತ್ರ ಪ್ರಚಾರ ಮಾಡಬೇಕು. ಅನುಮತಿ ಪಡೆಯದೇ ಇದ್ದಲ್ಲಿ ಗ್ರೂಪ್ ಅಡ್ಮೀನ್, ಶೇರ್ ಮಾಡಿದವರು ಹಾಗೂ ಅಭ್ಯರ್ಥಿಗಳ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ರೀತ್ಯ ಕ್ರಮ ಕೈಗೊಳ್ಳಲಾಗುವುದು.

ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಜಾಹೀರಾತುಗಳು ಮಾಧ್ಯಮಗಳಲ್ಲಿ ಪ್ರಕಟಣೆ ಮಾಡುವುದಕ್ಕಿಂತ ಮುಂಚೆ ಪ್ರಮಾಣೀಕರಣ ಪತ್ರ ಕಡ್ಡಾಯ. ಹಾಗೆಯೇ ಪ್ರಕಟಿಸಿದ್ದಲ್ಲಿ ಅಭ್ಯರ್ಥಿಯ ಖರ್ಚು ವೆಚ್ಚಕ್ಕೆ ಆ ಜಾಹೀರಾತಿನ ಹಣ ಸೇರಿಸುವುದರ ಜೊತೆಗೆ ಅವರ ಮೇಲೆ ಹಾಗೂ ಪತ್ರಿಕೆಯ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಅಡಿ ಕ್ರಮ ಕೈಗೊಳ್ಳಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ.

ಟಿ.ವಿ.,ಕೇಬಲ್ ನೆಟವರ್ಕ, ರೆಡಿಯೋ, ಸಾಮಾಜಿಕ ಜಾಲತಾಣ, ಇ-ಪೇಪರ ಹಾಗೂ ಬಲ್ಕ ಎಸ್.ಎಂ.ಎಸ್ ಮೂಲಕ ಚುನಾವಣಾ ಜಾಹೀರಾತು ನೀಡುವವರು ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಗಳಾಗಿದ್ದಲ್ಲಿ ಕನಿಷ್ಟ ಮೂರುದಿನ ಮುಂಚಿತವಾಗಿ, ಸಂಘ ಸಂಸ್ಥೆಗಳಿದ್ದಲ್ಲಿ ಕ£ಷ್ಟ 7 ದಿನಗಳ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಮಂಜೂರಾತಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ನಮೂನೆಯಲ್ಲಿ ಎಲ್ಲ ಅವಶ್ಯಕ ವಿವರ ಮತ್ತು ಜಾಹೀರಾತು ವಿಷಯದ ಎಲೆಕ್ಟ್ರಾನಿಕ ಟ್ರಾನ್ಸಸ್ಕ್ರಿಪ್ಷನ್ ಹಾಗೂ ಆ ವಿಷಯದ ಸಂಪೂರ್ಣ ವಿವರದ ಧೃಢೀಕೃರಿಸಿದ ಸ್ಕ್ರಿಪ್ಟ (ಬರವಣಿಗೆ ರೂಪದಲ್ಲಿ) ತಲಾ ಎರಡು ಪ್ರತಿಗಳನ್ನು ಸಲ್ಲಿಸಬೇಕು. ಈ ಜಾಹೀರಾತಿನ ತಯಾರಿಕಾ ವೆಚ್ಚ ತಿಳಿಸಬೇಕು. ಟಿ.ವಿ.ಕೇಬಲ್, ಸಾಮಾಜಿಕ ಜಾಲತಾಣ, ರೇಡಿಯೋ, ಇ-ಪೇಪರ ಇವುಗಳ ಪ್ರದರ್ಶನ ವೆಚ್ಚ ಹಾಗೂ ಟಿವಿ, ಹಾಗೂ ಕೇಬಲ್ ನೆಟ್‍ವರ್ಕಗಳಲ್ಲಿ ಪ್ರದರ್ಶನದ ವೇಳಾಪಟ್ಟಿ ಅದರ ವೆಚ್ಚವನ್ನು ವಿವರವಾಗಿ ನೀಡಬೇಕು. ಬಲ್ಕ ಎಸ್.ಎಂ.ಎಸ್.ಕಳಿಸುವ ದಿನ ಸಮಯ ಹಾಗೂ ವೆಚ್ಚವನ್ನು ತಿಳಿಸಬೇಕೆಂಬ ನಿಯಮವಿದೆ.

ಕಣ್ಣಿಟ್ಟು ಕಾಯುತ್ತಿದೆ ಕಣ್ಗಾವಲು ಸಮಿತಿ : ಗದಗ ಜಿಲ್ಲೆಯ ನಾಲ್ಕೂ ವಿಧಾನಸಭಾ ಮತಕ್ಷೇತ್ರಗಳಲ್ಲಿ ಕಣ್ಗಾವಲು ಸಮಿತಿಯು ವಿವಿದ ರಾಜಕೀಯ ಪಕ್ಷಗಳ ಚಲನವಲನ, ವಿದ್ಯಮಾನಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಅಗತ್ಯ ಮಾಹಿತಿ, ಫೋಟೋ ವ್ಹಿಡಿಯೋ ಮೂಲಕವೂ ದಾಖಲಾತಿಯನ್ನು ಪಡೆಯುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು ಮೈ ಎಲ್ಲ ಕಣ್ಣಾಗಿ ತನ್ನ ಕಾರ್ಯಚಟುವಟಿಕೆಗಳನ್ನು ಮಾಡಿಕೊಳ್ಳಬೇಕಿದೆ.

ಸಂಪರ್ಕಿಸಿ ಮಾಹಿತಿಗಾಗಿ ಮತ್ತು ದೂರು ಸಲ್ಲಿಕೆಗಾಗಿ 08372-239177, ವಾಟ್ಸಪ್-9481548329, ಫೇಸ್ ಬುಕ್, ಟೀಟ್ವರ ಅಥವಾ ಲಿಖಿತವಾಗಿಯೂ ದೂರು ಸಲ್ಲಿಸಬಹುದಾಗಿದೆ.

ಯಾವುದೇ ರೀತಿಯ ದೂರು ದಾಖಲಾಗಿಲ್ಲ ಸಾಮಾಜಿಕ ಜಾಲತಾಣ, ಮುದ್ರಣ ಎಲೆಕ್ಟ್ರಾನಿಕ್ಸ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಚುನಾವಣೆ ಸಂಬಂಧಿತ ವಿಷಯಗಳ ನಿಗಾವಹಿಸಲು ಕಣ್ಗಾವಲು ಸಮಿತಿಯನ್ನು ರಚಿಸಲಾಗಿದೆ. ಇದುವರೆಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರು ದಾಖಲಾಗಿಲ್ಲ.

ಮನೋಜ್ ಜೈನ್, ಜಿಲ್ಲಾ ಚುನಾವಣಾಧಿಕಾರಿ

loading...