ಜಿಲ್ಲಾ ಮಟ್ಟದ ಸ್ಕೌಟ ಗೈಡ್ಸ ಕಾರ್ಯಾಗಾರ

0
32
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: 12 ಭಾರತ ಸ್ಕೌಟ ಆಂಡ ಗೈಡ್ಸ ಜಿಲ್ಲಾ ಸಂಸ್ಥೆ ಶಿರಸಿ ಹಾಗೂ ಸ್ಥಳೀಯ ಸಂಸ್ಥೆ ಯಲ್ಲಾಪುರ ಮುರಾರ್ಜಿ ವಸತಿ ಶಾಲೆ ಯಲ್ಲಾಪುರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ರಾಜ್ಯ ಪಾಲರ ಪದಕ ಪ್ರಶಸ್ತಿಯ ಪೂರ್ವಭಾವಿ ಸಿದ್ದತಾ ಕಾರ್ಯಾಗಾರ ಮೋರಾರ್ಜಿ ವಸತಿ ಶಾಲೆಯಲ್ಲಿ ದಿ. 12 ರಿಂದ 14 ರವರೆಗೆ ಆಯೋಜಿಸಲಾಗಿದೆ.
ದಿನಾಂಕ 12 ರಂದು ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ ಎಸ್.ಬಿ.ಉಳ್ಳೆಗಡ್ಡಿ ಮಾತನಾಡಿ ಸ್ಕೌಟ ಆಂಡ ಗೈಡ್ಸ ಯುವ ಜನಾಂಗಕ್ಕಾಗಿ ಒಂದು ಸ್ವಯಂ ಪ್ರೇರತವಾದ ಶೈಕ್ಷಣಿಕ ಜಳುವಳಿಯಾಗಿದ್ದು ಮಕ್ಕಳಲ್ಲಿ ಶಿಸ್ತು, ನಾಯಕತ್ವ ಪ್ರಾಮಾಣೀಕತೆ ರಾಷ್ಟ್ರೀಯ ಮನೋಭಾವನೆಗಳನ್ನು ಬೆಳೆಸುವಂತದ್ದಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಸ್ಕೌಟ ಆಂಡ ಗೈಡ್ಸ ಯಾವುದೇ ಜನಾಂಗ ಧರ್ಮ , ಭಾಷೆ, ವರ್ಣಗಳ ಭೇದವಿಲ್ಲದೇ ಮಕ್ಕಳಲ್ಲಿ ನೈತಿಕ, ಬೌದ್ದೀಕ ಭಾವನಾತ್ಮಕ ಗುಣಗಳನ್ನು ಬೆಳೆಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಸ್ಕೌಟ್ ಆಂಡ ಗೈಡ್ಸ ಕಮೀಷನರ ಎಂ.ಎನ್.ಭಟ್ಟ ವಹಿಸಿದ್ದರು. ವೇದಿಕೆಯ ಮೇಲೆ ಪ್ರೋಬೇಷನರಿ ಕೆ.ಎ.ಎಸ್ ಅಧಿಕಾರಿ ಅಜಯ ವಿಠ್ಠಲ್ , ಭಾರತ ಸ್ಕೌಟ್ ಆಂಡ ಗೈಡ್ಸ ಅಧ್ಯಕ್ಷ ನಂದನ ಬಾಳಗಿ, ಸಂಜಯ ನಾಯಕ, ಕಾರ್ಯದರ್ಶಿ ಸುಧಾಕರ ನಾಯಕ , ಸಂಪನ್ಮೂಲಕ ವ್ಯಕ್ತಿಗಳಾದ ಕಮಲಾಕರ ಪಟಗಾರ ಮತ್ತು ಪ್ರತಿಮಾ, ಖೈರೂನ್ ಇದ್ದರು. ಮನೋಹರ ನಾಯಕ ಸ್ವಾಗತಿಸಿದರು, ಚಂದ್ರಶೇಖರ ನಿರ್ವಹಿಸಿದರು. ನವೀನ ಕುಮಾರ ವಂದಿಸಿದರು. ಜಿಲ್ಲೆಯಿಂದ 80 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

loading...