ಜಿಲ್ಲೆಯಲ್ಲಿ ಕಾಂಗ್ರೇಸ್ ಜಯಭೇರಿ ಭಾರಿಸಲಿದೆ: ದೇಶಪಾಂಡೆ ಭವಿಷ್ಯ

0
16
loading...

ಕನ್ನಡಮ್ಮ ಸುದ್ದಿ-ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ರಾಜ್ಯದ ಅಧಿಕಾರ ಚುಕ್ಕಾಣಿ ಮತ್ತೆ ಹಿಡಿಯಲಿದೆ ಎಂದು ರಾಜ್ಯದ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಸದಾಶಿವಗಡದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ನಡೆದ ಗ್ರಾಮ ಪಂಚಾಯತ್, ತಾ.ಪಂ. ಜಿ.ಪಂ. ಹಾಗೂ ಸಹಕಾರಿ ಸಂಘಗಳ ಚುನಾವಣೆಗಳಲ್ಲಿ, ಎಪಿಎಂಸಿಗಳಲ್ಲಿ ಗೆದ್ದಿದ್ದೇವೆ. ಅದು ಎಲ್ಲಾ ಜನಸಮುದಾಯಗಳನ್ನು ಒಳಗೊಳ್ಳುವ ಏಕೈಕ ಪಕ್ಷವಾಗಿದ್ದು, ನಾವು ಜನರನ್ನು ಒಡೆದು, ದ್ವೇಷ ಎಬ್ಬಿಸಿ ಮತ ಕೇಳುವುದಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತ ಕೇಳುತ್ತೇವೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿಲ್ಲ. ಜನರ ಜೊತೆ ಸತತ ಸಂಪರ್ಕ ಇಟ್ಟುಕೊಂಡವರಿಗೆ, ಅಭಿವೃದ್ಧಿ ಕೆಲಸ ಮಾಡಿದವರಿಗೆ, ಪಕ್ಷ ಸಂಘಟಿಸಿದವರಿಗೆ ಟಿಕೆಟ್ ಸಿಗಲಿದೆ. ಶಿರಸಿಯಲ್ಲಿ ಭೀಮಣ್ಣ ನಾಯ್ಕ ಸಹ ಟಿಕೆಟ್ ಆಕಾಂಕ್ಷಿ.  ಪಕ್ಷದ ಚುನಾವಣಾ ಪ್ರಣಾಳಿಕೆ ಸಹ ಸಿದ್ಧವಾಗಿದೆ. ಮೊಯ್ಲಿ ನೇತೃತ್ವದಲ್ಲಿ ಅದು ನಡೆದಿದೆ. ಶೀಘ್ರವೇ ಪಕ್ಷದ ಪ್ರಣಾಳಿಕೆ ಮತ್ತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಕಾಂಗ್ರೆಸ್ ಪಕ್ಷ ಜಾತ್ಯಾತೀತ ಹಿನ್ನೆಲೆಯಿದೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಜನ ವರ್ಗಗಳ, ಸಮುದಾಯಗಳ ನಾಯಕರು ಇಲ್ಲಿದ್ದಾರೆ. ಇಂಥ ಪಕ್ಷವನ್ನು ನೀವು ಬೇರೆಡೆ ಕಾಣಲಾಗದು. ಕೆಲ ಪಕ್ಷಗಳು ಮುಸಲ್ಮಾನರಿಗೆ ಸ್ಪರ್ಧಿಸಲು ಟಿಕೆಟ್ ಸಹ ನೀಡಲ್ಲ. ಆದರೆ ಕಾಂಗ್ರೆಸ್ ಪಕ್ಷ ನೋಡಿ. ಎಲ್ಲಾ ಸಮುದಾಯಗಳ ನಾಯಕರು ಇಲ್ಲಿ ಸಿಗುತ್ತಾರೆ. ಎಲ್ಲರಿಗೂ ಇಲ್ಲಿ ಸಮಾನ ಅವಕಾಶಗಳಿವೆ ಎಂದರು.

ಅಲ್ಪಸಂಖ್ಯಾತರು ಎಲ್ಲೆಲ್ಲಿ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಎಲ್ಲಿ ಅವರಿಗೆ ಟಿಕೆಟ್ ನೀಡಲು ಸಾಧ್ಯವಿದೆ ಎಂಬುದನ್ನು ಪಕ್ಷ ಪರಿಶೀಲಿಸಿ ಟಿಕೆಟ್ ನೀಡಲಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ದೇಶಪಾಂಡೆ ಪ್ರತಿಕ್ರಿಯಿಸಿದರು.

loading...