ಜೀವನದಲ್ಲಿ ತತ್ವಾದರ್ಶ ಅಳವಡಿಸಿಕೊಳ್ಳಿ: ಡಾ.ಸುಜ್ಞಾನದೇವ

0
25
loading...

ಮುಂಡರಗಿ: ಎಲ್ಲರೊಂದಿಗೆ ಬೆರೆತು ಸಂತೋಷದಿಂದ ಬಾಳುವುದೆ ನಿಜವಾದ ಬದುಕಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಯುವಕ ಯುವತಿಯರ ಸ್ವಚ್ಛಂದ ಹಾಗೂ ಸಂಕುಚಿತ ಮನೋಭಾವನೆಯಿಂದ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ಬನ್ನಿಕೊಲ್ಲ ಹಾಗೂ ಮೈಸೂರಿನ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಿದರಳ್ಳಿ ಗ್ರಾಮದ ರೇಣುಕಾಂಬಿಕಾ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸರ್ವ ಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಾವು ಆಚರಿಸುವ ಪ್ರತಿಯೊಂದು ಹಬ್ಬ ಹುಣ್ಣಿಮೆಗಳಿಗೆ ಒಂದೊಂದು ಅರ್ಥವಿರುತ್ತದೆ. ಎಲ್ಲ ಚರಣೆಗಳಿಗೆ ಒಂದೊಂದ ಅರ್ಥವಿರುತ್ತದೆ. ಆದ್ದರಿಂದ ನಾವು ಹಬ್ಬ ಹರಿದಿನಗಳನ್ನು ಮೋಜಿಗಾಗಿ ಆಚರಿಸಬಾರದು. ಆಚರಣೆಗಳಲ್ಲಿ ಅಡಗಿರುವ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಹೂವಿನ ಶಿಗ್ಲಿಯ ಚನ್ನವೀರ ಸ್ವಾಮೀಜಿ ಆಶೀರ್ವಚನ ನೀಡಿ, ಗ್ರಾಮೀಣ ಭಾಗಗಳಲ್ಲಿ ಕುಟುಂಬ ವ್ಯವಸ್ಥೆ ಈಗಲೂ ಚನ್ನಾಗಿದೆ. ನೂತನ ವಧು ವರರು ತಮ್ಮ ತಂದೆ, ತಾಯಿ, ಅತ್ತೆ ಮಾವ ಹಾಗೂ ಕುಟುಂಬದ ಎಲ್ಲ ಸದಸ್ಯರನ್ನು ಪ್ರೀತಿ ಹಾಗೂ ಗೌರವದಿಂದ ಕಾಣಬೇಕು. ಹುಟ್ಟುವ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ವಿದ್ಯಾಭಾಸ ನೀಡಬೇಕು. ಅವರನ್ನು ದೇಶದ ಸತ್ಪಜೆಗಳನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಚಿಂತಕಿ ಭಾಗ್ಯಲಕ್ಷಮಿ ಇನಾಮತಿ, ಸಂಸಾರದಲ್ಲಿ ಕಷ್ಟ ಸುಖಗಳು ಬರುತ್ತಿರುತ್ತವೆ. ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಎರಡನ್ನೂ ಸಮನವಾಗಿ ಸವೀಕರಿಸಬೇಕು. ಸಂಸಾರದಲ್ಲಿ ಗಂಡ ಹೆಂಡತಿ ಇಬ್ಬರೂ ಸಮಾನರು. ಗಂಡು ಹೆಣ್ಣುಗಳೆಂಬುದನ್ನು ಬದಿಗೊತ್ತಿ ಸತಿಪತಿಗಳು ಸಂಸಾರ ಸಾಗಿಸಬೇಕು ಎಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು.

ದೇವಸ್ಥಾನ ಕಮೀಟಿ ಅಧ್ಯಕ್ಷ ಆರ್.ಬಿ.ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಮೇಟಿ, ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ, ಮುಖಂಡರಾದ ಕೆ.ವಿ.ಹಂಚಿನಾಳ, ಮೈಲಾರೆಪ್ಪ ಕಿಲಾರಿ,ಗೋಣೆಪ್ಪ ಚೌಡಾಳ, ರಮೇಶ ಹಲವಾಗಲಿ, ಮಹಾಂತ್ಯ ಹೊಸಮಠ, ರಾಜಶೇಖರ ಹಾವೇರಿ, ಈರಣ್ಣ ಎಳಮಲಿ, ನಾಗರಾಜಮತ್ತೂರ, ಅಶೋಕ ಸಜ್ಜನರ, ಕೋಟೇಶ ಕಿಲರಿ, ಎಸ್.ಎಸ್.ಬಾಳಿಕಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

loading...