ಜೆಡಿಎಸ್ ಅಭ್ಯರ್ಥಿ ಅಮ್ಜದ್ ನಾಮಪತ್ರ ಸಲ್ಲಿಕೆ

0
23
loading...

ಕನ್ನಡಮ್ಮ ಸುದ್ದಿ-ಭಟ್ಕಳ: 79ನೇ ಭಟ್ಕಳ ವಿಧಾನ ಸಭಾ ಕ್ಷೇತ್ರದ ವಿಧಾನ ಸಭಾ ಚುನಾವಣೆಗೆ ಜೆ.ಡಿ.ಎಸ್. ಪಕ್ಷದ ಅಧೀಕೃತ ಅಭ್ಯರ್ಥಿಯಾಗಿ ಸೈಯದ್ ಮೊಹಮ್ಮದ್ ಅಮ್ಜದ್ ಅವರು ನಾಮ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಜೆ.ಡಿ.ಎಸ್. ಪ್ರಮುಖ ಪಾಂಡು ನಾಯ್ಕ, ಪುರಸಭಾ ಸದಸ್ಯ ಕೆ.ಪಿ. ಪೈ ಮುಂತಾದವರು ಉಪಸ್ಥಿತರಿದ್ದರು. ಚುನಾವಣಾಧಿಕಾರಿ ಎನ್. ಸಿದ್ಧೇಶ್ವರ ಅವರು ನಾಮ ಪತ್ರವನ್ನು ಸ್ವೀಕರಿಸಿದರು.
ಭಟ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಜೆ.ಡಿ.ಎಸ್. ಪಕ್ಷ ಕ್ಷೇತ್ರಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ತಿಂಗಳುಗಳೇ ಕಳೆದಿತ್ತು. ಈ ಮಧ್ಯೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಭಟ್ಕಳಕ್ಕೆ ಬಂದಾಗ ಕೂಡಾ ಇನಾಯತುಲ್ಲಾ ಅವರನ್ನು ಗೆಲ್ಲಿಸುವಂತೆ ಮತದಾರರಿಗೆ ಕೋರಿದ್ದರು. ಈ ಮಧ್ಯೆ ಇನಾಯತುಲ್ಲಾ ಶಾಬಂದ್ರಿಯವರು ಇಲ್ಲಿನ ತಂಜೀಂ ಸಂಸ್ಥೆಯವರು ತವiಗೆ ಬೆಂಬಲಿಸುವಂತೆ ಕೋರಿದ್ದು ಇವರ ಕೋರಿಕೆಯನ್ನು ಮನ್ನಿಸದ ತಂಜೀಂ ಇವರಿಗೆ ಚುನಾವಣೆಗೆ ನಿಲ್ಲುವುದಕ್ಕೂ ನಿರ್ಭಂದ ಹೇರಿದ್ದರಿಂದ ಪರ್ಯಾಯ ಅಭ್ಯರ್ಥಿಯನ್ನು ನಿಲ್ಲಿಸಬೇಕಾಗಿ ಬಂದಿತ್ತು.

ಈ ಮಧ್ಯೆ ನಡೆದ ಬೆಳವಣಿಗೆಯೊಂದರಲ್ಲಿ ಜೆ.ಡಿ.ಎಸ್. ಪ್ರಮುಖರು ಇಲ್ಲಿನ ಬಿ.ಜೆ.ಪಿ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಿ ಶಾಂತಾರಾಮ್ ಅವರ ಮನೆಗೆ ತೆರಳಿ ಅವರನ್ನು ಜೆ.ಡಿ.ಎಸ್. ಅಭ್ಯರ್ಥಿಯನ್ನಾಗಿಸಲು ಪ್ರಯತ್ನಿಸಿದ್ದು ಅವರು ನೇರವಾಗಿ ಇವರ ಅಹ್ವಾಹ್ನವನ್ನು ತಿರಸ್ಕರಿಸಿರುವುದಾಗಿ ತಿಳಿದು ಬಂದಿದೆ. ಬಿ.ಜೆ.ಪಿ.ಯಲ್ಲಿ ಟಿಕೆಟ್ ದೊರೆಯುತ್ತದೆನ್ನುವ ಅವರ ಕನಸು ಹುಸಿಯಾಗಿದ್ದರೂ ಸಹ ನಾನು ಬಿ.ಜೆ.ಪಿಯಲ್ಲಿಯೇ ಮುಂದುವರಿಯುವುದಾಗಿ ಹೇಳಿದ್ದರಿಂದ ಜೆ.ಡಿ.ಎಸ್. ಪ್ರಮುಖರು ವಾಪಾಸಾಗಿ ಅಂತಿಮವಾಗಿ ಅಮ್ಜದ್ ಅವರನ್ನು ಕಣಕ್ಕಿಳಿಸಿದ್ದಾರೆನ್ನಲಾಗಿದೆ.
ಈ ಹಿಂದಿ ಚುನಾವಣೆಯಲ್ಲಿ ದ್ವಿತೀಯ ಸ್ಥಾನಕ್ಕೆ ಬಂದು ನಿಂತ ಜೆ.ಡಿ.ಎಸ್. ಪಕ್ಷ ನಂತರದ ಐದು ವರ್ಷಗಳಲ್ಲಿ ಯಾವುದೇ ಒಂದು ಕೆಲಸವನ್ನು ಮಾಡದೇ ತಟಸ್ಥವಾಗಿದ್ದುಕೊಂಡು ಕಳೆದ ಒಂದು ತಿಂಗಳಿನಿಂದ ಮೈಕೊಡವಿ ಚುನಾವಣೆಗೆ ಸಜ್ಜಾಗಿದೆ. ಯಾವುದೇ ಜನಪರ ಕಾರ್ಯಕ್ರಮಗಳಲ್ಲಿ, ಹೋರಾಟಗಳಲ್ಲಿ ತೊಡಗಿಸಿಕೊಳ್ಳದೇ ನಿದ್ದೆ ಮಾಡಿದ್ದ ಪಕ್ಷಕ್ಕೆ ಇಂದು ಅಭ್ಯರ್ಥಿಗಳನ್ನು ಹುಡುಕುವುದೂ ಕಷ್ಟಕರವಾಗಿ ಪರಿಣಮಿಸಿದ್ದು ಮಾತ್ರ ವಿಪರ್ಯಾಸ.

loading...