ಜೆಡಿಎಸ್ ಜಯಭೇರಿ ಬಾರಿಸಲಿದೆ-ಕೆ.ಆರ್.ರಮೇಶ ವಿಶ್ವಾಸ

0
19
loading...

ದಾಂಡೇಲಿ : ಬಡವರ, ಕೃಷಿ, ಕೂಲಿ ಕಾರ್ಮಿಕರ, ದಲಿತರ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶ್ರಮಿಸುವ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಬೇಕು. ಆ ಮೂಲಕ ರಾಜ್ಯದ ಜನ ನೆಮ್ಮದಿಯ, ಸಂತೃಪ್ತಿಯ ಜೀವನ ಸಾಗಿಸುವಂತಾಗಬೇಕೆಂಬ ಮಹತ್ವದ ಇರಾದೆಯಿಂದ ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ.

ಪಕ್ಷದ ಪ್ರಣಾಳಿಕೆ ಮತ್ತು ಕುಮಾರಸ್ವಾಮಿಯವರ ಮೇಲೆ ನಂಬಿಕೆಯ ಫಲಶೃತಿಯಾಗಿ ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಆರ್.ರಮೇಶ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಬುಧವಾರ ನಗರದ ಜೆ.ಎನ್.ರಸ್ತೆಯಲ್ಲಿರುವ ಹಿರೇಮಠ ಕಟ್ಟಡದಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅಂದು ಕುಮಾರಸ್ವಾಮಿಯವರು ನಡೆಸಿದ 20 ತಿಂಗಳ ಅಧಿಕಾರ ರಾಜ್ಯದ ಜನತೆ ಸದಾ ನೆನಪಿಟ್ಟುಕೊಳ್ಳುವಂತಹ ಅಧಿಕಾರ. ಈ ಬಾರಿ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಜೆಡಿಎಸ್ ಅತ್ಯಧಿಕ ಸ್ಥಾನವನ್ನು ಗಳಿಸಲಿದೆ. ಈ ಕ್ಷೇತ್ರದ ಬಗ್ಗೆ ಹಲವಾರು ಉಪಯುಕ್ತ ಕನಸುಗಳನ್ನು ಹಾಗೂ ದೂರದೃಷ್ಟಿಯನ್ನಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಕ್ಷೇತ್ರದ ಸಮಗ್ರ ಮತ್ತು ಶಾಶ್ವತ ಅಭಿವೃದ್ಧಿಯೆ ನನ್ನ ಪರಮ ಗುರಿ. ಈ ಗುರಿ ಈಡೇರಿಸಲು ಕ್ಷೇತ್ರದ ಮತದಾರರು ಆಶೀರ್ವದಿಸಲಿದ್ದು, ಪಕ್ಷದ ಹಾಗೂ ಕುಮಾರಣ್ಣನ ಕೈ ಬಲಬಲಪಡಿಸಲು ಕಾರ್ಯಕರ್ತರು ಪಣತೊಡಬೇಕೆಂದು ಕೆ.ಆರ್.ರಮೇಶ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಹಳಿಯಾಳದ ಮುಖಂಡ ಜಿವೋಜಿ, ನಗರ ಸಭಾ ಸದಸ್ಯರುಗಳಾದ ಲಿಯಾಕತ್ ಖಾನಪುರಿ, ನಮಿತಾ ಹಳದನಕರ, ಶೋಬಾ ಜಾಧವ, ಪಕ್ಷದ ಮುಖಂಡರುಗಳಾದ ಇಸ್ಮಾಯಿಲ್ ಪಿರ್ಜಾದೆ, ಅಸ್ಲಾಂ ದೇಸಾಯಿ, ರಿಯಾಜ ಶೇರಖಾನೆ, ದೇವಕಿ ನಾಯ್ಕ, ಕೃಷ್ಣ ದುಗ್ಗಾಣಿ, ಪ್ರವೀಣ ದಶಮಿ, ರಾಜಶ್ರೀ ಬೇಂದ್ರೆ, ಆಷ್ಪಾಕ ಗರಗ ಮೊದಲಾದವರು ಉಪಸ್ಥಿತರಿದ್ದರು.

loading...