ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ: ಸುರೇಶ ಐಹೊಳೆ ಘೋಷಣೆ

0
49
loading...

ರಾಯಬಾಗ 21: ಕುಡಚಿ ಮತಕ್ಷೇತ್ರಾದಾದ್ಯಂತ ಕಳೆದ ಎಂಟು ವರ್ಷಗಳಿಂದ ಜೆಡಿಎಸ್ ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಿ ಪಕ್ಷದ ಪ್ರತಿಯೊಂದು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಕೆಲಸಮಾಡಿ ಜೆಡಿಎಸ್ ಪಕ್ಷದ ಎಲ್ಲ ಕಾರ್ಯಕ್ರಮಗಳನ್ನು ಯಶ್ವಸಿಯಾಗಿಸಿದ್ದರೂ ಕುಡಚಿ ಕ್ಷೇತ್ರಕ್ಕೆ ನನಗೆ ಟಿಕೆಟ್ ನೀಡದೇ ಬೇರೆ ತಾಲೂಕಿನ ಅಭ್ಯರ್ಥಿಗೆ ಟಿಕೆಟ್ ನೀಡಿ ಎಚ್.ಡಿ.ಕುಮಾರಸ್ವಾಮಿಯವರು ನನಗೆ ವಂಚನೆ ಮಾಡಿದ್ದಾರೆಂದು ಕುಡಚಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಬಂಡಾಯ ಸುರೇಶ ಐಹೊಳೆ ಆಕ್ರೋಶವ್ಯಕ್ತಪಡಿಸಿದರು.
ಹಾರೂಗೇರಿ ಪಟ್ಟಣದ ತಮ್ಮ ಸ್ವಗ್ರಹದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಪ್ರಧಾನಿ ದೇವೆಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿಯವರು ಮೊದಲಿನಿಂದಲೂ ಕುಡಚಿ ಕ್ಷೇತ್ರಕ್ಕೆ ನನಗೆ ಟಿಕೆಟ್ ಕೊಡುತ್ತೇವೆ ಪಕ್ಷ ಸಂಘಟಿಸುವಂತೆ ಹೇಳಿದ್ದರು. ಹೀಗಾಗಿ ನಾನು ನಿರಂತರ ಈ ಭಾಗದ ಸುಮಾರು 32 ಹಳ್ಳಿಗಳಲ್ಲಿ ನಿರಂತರ ಸಂಪರ್ಕಹೊಂದಿ ಕುಡಚಿ ಜೆಡಿಎಸ್ ಬ್ಲಾಕ್‍ದ ಎಲ್ಲ ಪದಾಧಿಕಾರಿಗಳನ್ನು ನೇಮಕ ಮಾಡಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನ, ಮನೆಮನೆಗೆ ಕುಮಾರಣ್ಣ, ಕುಮಾರಪರ್ವ,ಆದರೆ ಈ ಚುನಾವಣೆಯ ಸಂದರ್ಭದಲ್ಲಿ ಏಕಾಎಕಿ ಕುಡಚಿ ಕ್ಷೇತ್ರದ ನನ್ನನ್ನು ಬಿಟ್ಟು ಈ ಕ್ಷೇತ್ರದ ಬಗ್ಗೆ ಏನು ಗೋತ್ತಿರಲಾರದ ಬೇರೆ ತಾಲೂಕಿನರೊಬ್ಬರಿಗೆ ಟಿಕೆಟ್ ನೀಡಿದ್ದು ಖಂಡನಿಯ ಜೆಡಿಎಸ್ ಪಕ್ಷದಲ್ಲಿ ಯಾವುದೇ ತತ್ವಸಿದ್ದಾಂತಗಳಿಲ್ಲ ದೇವೆಗೌಡರು ಹಾಗೂ ಕುಮಾರಸ್ವಾಮಿಯವರು ಆಡಿದ್ದೆ ಆಟ ಪಕ್ಷದ ಸಂಘಟನೆಗೆ ದುಡಿದವರಿಗೆ ಕವಡೆಕಾಸಿನ ಕಿಮ್ಮತ್ತು ಇಲ್ಲ ಇನ್ನುಮುಂದೆ ಜೆಡಿಎಸ್ ಪಕ್ಷ ಅದೋಗತಿಗೆ ಹೋಗುವುದು ಗ್ಯಾರಂಟಿ ಹೀಗಾಗಿ ನಾನು ಕುಡಚಿ ಮತಕ್ಷೇತ್ರದಿಂದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಷರ್ಧೆ ಮಾಡುವುದು ನಿಶ್ಚಿತ ಕ್ಷೇತ್ರದಲ್ಲಿ ಸುಮಾರು 30 ಸಾವಿರ ಲಿಂಗಾಯತ, 32 ಸಾವಿರ ಮುಸ್ಲಿಂ, 43 ಸಾವಿರ ದಲಿತ ಮತದಾರರಿದ್ದಾರೆ ಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಕ್ಕಪಾಠ ಕಲಿಸುತ್ತಾರೆಂದು ಹೇಳಿದರು. ಸೋಮವಾರ 23 ರಂದು ಜೆಡಿಎಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೆನೆಂದು ಹೇಳಿದರು.

ಈ ಸಂದರ್ಭದಲ್ಲಿ ಕುಡಚಿ ಜೆಡಿಎಸ್ ಪಕ್ಷದ ಅಧ್ಯಕ್ಷ ತಾತುಗೌಡಾ ಬುಲಬುಲಿ, ಹಣಮಂತ ಪಾಟೀಲ, ರಾವಸಾಬ ಬುರ್ಲಟ್ಟಿ, ಕಾಡೇಶ ಐಹೊಳೆ, ಅಶೋಕ ವಾಳಕೆ, ಮಾಹಾಲಿಂಗ ಕೆಮ್ಮನಕೊಲ, ಭಗವಂತ ಮಾದರ, ರಾಮಪ್ಪ ನಾಯಿಕ,ಮಲ್ಲೇಶ ಕಾಂಬಳೆ, ಮಹೇಶ ಐಹೊಳೆ, ರವಿ ಮಾದರ ಸೇರಿದಂತೆ ಮೊದಲಾದವರು ಇದ್ದರು.

loading...