ಜೆಡಿಎಸ್ ವರಿಷ್ಠರಿಂದ ಲಿಂಗಾಯತರಿಗೆ ಅನ್ಯಾಯ: ಪ್ರತಿಭಟಿಸಿ ರಾಜಿನಾಮೆ

0
24
loading...

ಗಂಗಾವತಿ: ಜೆಡಿಎಸ್ ಪಕ್ಷದ ವರಿಷ್ಠರಾಗಿರುವ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಸಾಮಾಜಿಕ ನ್ಯಾಯ ಒದಗಿಸಲು ವಿಫಲಗೊಂಡಿದ್ದಾರೆ ಎಂದು ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಹೇರೂರು ವಿರುಪಾಕ್ಷಗೌಡ ಆರೋಪಿಸಿದರು.

ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿಯೂ ಲಿಂಗಾಯತರಿಗೆ ಪಕ್ಷದ ಟಿಕೇಟಿನಿಂದ ಸ್ಪರ್ದಿಸಲು ಅವರು ಅವಕಾಶ ಮಾಡಿಕೊಡದ ಕಾರಣದಿಂದ ತಾವು ಮನನೊಂದು ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೂ ಮತ್ತು ಜಂಟಿ ಕಾರ್ಯದರ್ಶಿ ಹುದ್ದಗೆ ರಾಜಿನಾಮೆ ನೀಡಿದ್ದೇನೆ ಎಂದು ಅವರು ಪ್ರಕಟಿಸಿದರು.
ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಕಳೆದ 2 ವರ್ಷಗಳಿಂದ ತಾವು ಈ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯನ್ನು ಮಾಡಿದ್ದೇನೆ. ಸ್ವಂತ ವಾಹನದ ಮೇಲೆ ಕುಮಾರಣ್ಣನವರ ಭಾವಚಿತ್ರವನ್ನು ಹಾಕಿ ಮನೆ ಮನೆಗೆ ಕುಮಾರಣ್ಣ ಮತ್ತು ಸಾಲ ಮನ್ನಾ ಕಾರ್ಯಕ್ರಮ ಪ್ರಚಾರ ಮಾಡಿದ್ದೇನೆ.

ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ತಾವು ಸಹ ಟಿಕೇಟು ಆಕಾಂಕ್ಷಿಯಾಗಿದ್ದೆ. ಆದರೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿರದ ಕರಿಯಣ್ಣ ಸಂಗಟಿಯನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿ ತಮಗೆ ವಂಚನೆ ಎಸಗಿದ್ದಾರೆ ಎಂದು ಹೇಳಿದರು.
ಸರ್ವಾಧಿಕಾರಿ ಶ್ರೀನಾಥ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಆರ್.ಶ್ರೀನಾಥ ಟಿಕೇಟು ಹಂಚಿಕೆ ವಿಷಯದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಈ ಉಸಿರುಗಟ್ಟುವ ವಾತಾವರಣದಿಂದ ತಾವು ಹೊರ ಬರಲು ನಿರ್ಧರಿಸಿ ರಾಜಿನಾಮೆ ನೀಡಿದ್ದಾಗಿ ತಿಳಿಸಿದರು. ಇವರ ಜೊತೆ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಸೈಯದ್ ಮಹಬೂಬಪಾಷಾ ಅಲಿಯಾಸ್ ಬಾಳೆಕಾಯಿ ಪಾಷಾ ಸಹ ರಾಜಿನಾಮೆಯನ್ನು ಘೋಷಿಸಿದರು. ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸುವದಾಗಿ ಅವರು ತಿಳಿಸಿದರು.

loading...