ಡಾ. ಅಂಬೇಡ್ಕರ್‍ರ ತತ್ವಾದರ್ಶ ಪಾಲಿಸಿ: ಗುಬ್ಬಿಶೆಟ್ಟಿ

0
21
loading...

ಮುಂಡರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತುಕಂಡ ಒಬ್ಬ ಅಪರೂಪದ ಮಾನವತಾವಾದಿಯಾಗಿದ್ದು, ಅವರು ಸಾರಿದ ತತ್ವಾದರ್ಶಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಪಾಲಿಸಬೇಕು. ಆ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಹಸೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ದಲಿತ ಸಂಘಟನೆಗಳು ಶನಿವಾರ ಏರ್ಪಡಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಪಾರ ಜ್ಞಾನವನ್ನು ಹೊಂದಿದ್ದ ಅಂಬೇಡ್ಕರ್ ಅವರು ಸ್ವಾತಂತ್ರ ನಂತರ ಸಂವಿಧಾನವನ್ನು ರಚಿಸುವ ಮೂಲಕ ದೇಶದ ಜನತೆಗೆ ಸಾಮಾಜಿಕ ನ್ಯಾಯವನ್ನು ಒದಗಿಸಿದರು. ಅವರು ರಚಿಸಿರುವ ಸಂವಿಧಾನದ ಕಾರಣದಿಂದಾಗಿ ಇಂದು ದೇಶದ ಜನತೆ ಘನತೆಯಿಂದ ಬಾಳುವಂತಾಗಿದೆ ಎಂದು ತಿಳಿಸಿದರು.

ದಲಿತ ಮುಖಂಡ ಕೆ.ಎನ್.ದೊಡ್ಡಮನಿ ಮಾತನಾಡಿ, ಡಾ.ಅಂಬೇಡ್ಕರ ಅವರು ಎಲ್ಲ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ತುಳಿತಕ್ಕೆ ಒಳಗಾದವರಿಗೆ ಸಮಾಜದಲ್ಲಿ ಸಮಾನ ಸ್ಥಾನ ಮಾನ ನೀಡಲು ಶ್ರಮಿಸಿ ಅವರು ಅಜರಾಮರರಾದರು ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ನಿವಾಸದಲ್ಲಿ ರಾಮಕೃಷ್ಣ ಅಭಿಮಾನಿ ಬಳಗದ ವತಿಯಿಂದ ರಾಮಕೃಷ್ಣ ದೊಡ್ಡಮನಿ ಅವರ ಅಧ್ಯಕ್ಷತೆಯಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಜಯಂತಿಯನ್ನು ಆಚರಿಸಿದರು.

ತಾಲೂಕು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಟ್ಟಣದ ಹಳೆ ಎಪಿಎಂಸಿಯಲ್ಲಿನ ಸೊಸಾಯಿಟಿಯಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಅವರ ಜಯಂತಿಯನ್ನು ಆಚರಿಸಿದರು.
ತಾಲೂಕು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಸ್ಥಳೀಯ ಹಳೆ ಬಿಇಒ ಕಚೇರಿಯ ಬಿಲ್ಡಿಂಗ್‍ನಲ್ಲಿ ಡಾ.ಅಂಬೇಡ್ಕರ ಜಯಂತಿ ಆಚರಿಸಲಾಯಿತು. ಹೋರಾಟಗಾರ ವೈ.ಎನ್.ಗೌಡರ ಉಪನ್ಯಾಸ ನೀಡಿದರು.

ಎ.ವೈ.ನವಲಗುಂದ, ಬಸವರಾಜ ರಾಮೇನಹಳ್ಳಿ, ಲಕ್ಷ್ಮಣ ತಗಡಿನಮನಿ, ನಾಗರಾಜ ಹೊಸಮನಿ, ಲಕ್ಷ್ಮಣ ಮುಂಡವಾಡ, ಮಂಜುನಾಥ ಮುಂಡವಾಡ, ಬಾಬಣ್ಣ ಚೆನ್ನಳ್ಳಿ, ಎಂಜಿ.ವಡ್ಡಟ್ಟಿ, ಎ.ಪಿ.ದಂಡಿನ, ಬಿ.ಎಫ್.ಈಟಿ, ಮೈಲಾರಪ್ಪ ಕಲಕೇರಿ, ಸಂತೋಷ ಹಿರೇಮನಿ, ದಂಡೆಪ್ಪ ಹರಿಜನ. ಕೊಟ್ರೇಶ ಗುಡಿ, ಸುರೇಶ ಬಂಡಿವಡ್ಡರ, ಬಿ.ಎನ್.ರಾಟಿ, ಎಸ್.ಬಿ.ಕುಲಕರ್ಣಿ, ಸುರೇಶ ನಾಯ್ಕರ, ಅನೀಲ ಅತ್ತರವಾಲ್, ಅಡೆವಪ್ಪ ಚಲವಾದಿ, ಸುರೇಶ ಲಮಾಣಿ, ಮತ್ತಿತರರು ಉಪಸ್ಥಿತರಿದ್ದರು.

loading...