ಡಾ.ಮಂಜುಳಾಗೆ ಸಿಂಗಿ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯ

0
18
loading...

ಸಿಂದಗಿ:ಡಾ.ಮಂಜುಳಾ ಗೋವರ್ಧನ ಮೂರ್ತಿ ಅವರಿಗೆ ಸಿಂಗಿ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನಿಡಬೇಕು ಎಂದು ಒತ್ತಾಯಿಸಿ ತಾಲೂಕಿನ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶನಿವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಯುವ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ, ರಮೇಶ ಮೋರಟಗಿ,ಅರುಣಕುಮಾರ ಸಿಂಗೆ, ನಿಂಗಪ್ಪ ಬಿಸನಾಳ ಹಾಗೂ ಇತರರು ಮಾತನಾಡಿ ಡಾ. ಮಂಜುಳಾ ಅವರು ಕ್ಷೇತ್ರದ ಜೊತೆ ಸುಮಾರು ವರ್ಷಗಳ ಸಂಪರ್ಕದಲ್ಲಿದ್ದವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಮತ್ತು ಸಂಘಟನೆಗೆ ಪ್ರಾಮಾಣಿಕ ಕಾರ್ಯ ಮಾಡಿ ಉಚಿತ ಸಾಮೂಹಿಕ ವಿವಾಹ ಮಾಡಿ ಸಾಮಾಜಿಕ ಕಾರ್ಯವನ್ನು ನಿರ್ವಹಿಸಿದ್ದಾರೆ. ರಾಜ್ಯ ನಾಯಕರು ಟಿಕೇಟ್ ನೀಡುವ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅವರ ಕೈವಾಡದಿಂದ ಟಿಕೇಟ್ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಸಿಂದಗಿ ಕ್ಷೇತ್ರದಲ್ಲಿ ಹಾಲು ಮತಕ್ಕೆ ಸಾಮಾಜಿಕ ನ್ಯಾಯದಡಿ ಟಿಕೇಟ್ ನೀಡಬೇಕಿತ್ತು ಆದರೆ ಇಲ್ಲಿಯವರೆಗೂ ಕಾಂಗ್ರೆಸ್ ಹಾಲುಮತಕ್ಕೆ ಅನ್ಯಾಯ ಮಾಡುತ್ತಿದೆ. ಸಚಿವ ಎಂ.ಬಿ.ಪಾಟೀಲ ತನ್ನ ಹಿಡಿತದಲ್ಲಿ ಜಿಲ್ಲೆ ಇರಬೇಕು ಎಂಬ ಮನೋಭಾವದಿಂದ ಕುತಂತ್ರ ರಾಜಕಾರಣ ಬುದ್ದಿ ಬಳಸಿ ಬೇರೋಬ್ಬರಿಗೆ ಟಿಕೇಟ್ ನೀಡಲು ಮುಂದಾಗಿದ್ದಾರೆ.

ಕ್ಷೇತ್ರದಲ್ಲಿ ಕೆಪಿಸಿಸಿ ಇತ್ತಿಚಿಗಷ್ಟೇ ಮಾಡಿರುವ ಗುಪ್ತ ಸಮೀಕ್ಷೆ ಕಾರ್ಯದಲ್ಲಿ ಡಾ.ಮಜುಳಾ ಅವರ ಹೆಸರು ಪ್ರಭಲವಾಗಿ ಕೇಳಿ ಬಂದಿದೆ ಸಮೀಕ್ಷೇ ಆಧಾರದಿಂದ ಅವರಿಗೆ ಟಿಖೇಟ್ ನೀಡಬೇಕೆ ಹೊರತು ಸಚಿವರ ಒಡನಾಟದಲ್ಲಿರುವವರಿಗೆ ಟಿಕೇಟು ನೀಡುವುದಲ್ಲ. ಸಿಎಂ ಸಿದ್ದರಾಮಯ್ಯ ಅವರು ಡಾ. ಮಂಜುಳಾ ಅವರ ಪರವಾಗಿ ನಿಂತಿದ್ದಾರೆ ಆದರೆ ಸಚಿವ ಎಂ.ಬಿ.ಪಾಟೀಲರು ಮಂಜುಳಾ ಅವರಿಗೆ ಟಿಕೆಟ್ ತಪ್ಪಿಸಬೇಕು ಎಂಬ ಹುನ್ನಾರದಿಂದ ಸುಮಾರು ದಿನಗಳಿಂದ ವಿವಿಧ ಚಟುವಟಿಕೆ ಮಾಡುತ್ತಿರುವುದು ಕ್ಷೇತ್ರದ ಜನತೆಗೆ ಬೇಸರ ತಂದಿದೆ. ಪ್ರತಿಭಟನೆಯಲ್ಲಿ ಹಾಲುಮತದ ತಾಲೂಕಾ ಅಧ್ಯಕ್ಷ ಶರಣಪ್ಪ ಹಿರೇಕುರುಬರ, ಕೆಂಚಪ್ಪ ಪೂಜಾರಿ, ಸಿದ್ದು ಕೇರಿಗೊಂಡ, ಮಲ್ಲಕಪ್ಪ ಜೇರಟಗಿ, ಹಸೀಮ ಆಳಂದ, ಪ್ರಭುಲಿಂಗ ಪೂಜಾರಿ, ಬಸು ಬಿರಾದಾರ, ಸಚೀನ ಪೂಜಾರಿ, ಸಲೀಂ ಕಣ್ಣಿ, ವಿರೇಶ ಕೋಟಾರಗಸ್ತಿ, ಶಿವಯೋಗಿ ಬಸ್ತಿಹಾಳ, ನಿಂಗಪ್ಪ ಬಿರಾದಾರ, ಶಂಕ್ರೆಪ್ಪ ಒಗ್ಗಿ, ಮಡ್ಡು ಸೊನ್ನದ, ಶರಣಪ್ಪ ಹೂಗಾರ, ಸಿದ್ದು ಗಣಿಹಾರ, ಮಾಳು ವಾಲಿಕಾರ, ಮಹಾಂತೇಶ ಹರವಾಳ, ಮಲ್ಲಕಣ್ಣ ಪಾಚಾ, ಮಹಾಂತೇಶ ಅಮ್ಮಾಗೋಳ, ಕಾಸು ಅಡವಿ, ರಜಾತ ತಾಂಬೆ, ದಾದಾಪೀರ ಯಾಳಗಿ, ಮಲಕಣ್ಣ ಮೋಟಗಿ, ಶಿವು ಕುಮಸಗಿ, ರಹೀಮ ಚಿನವಾರ, ಮಾಳು ಪೂಜಾರಿ, ಅಯಿಬೂ ತಾಂಬೋಳಿ, ಸಿದ್ದು ಕಂಬಾರ, ಮಾಹಾಂತೇಶ ಹಿರೇಕುರುಬರ ಹಾಗೂ ಇತರರು ಇದ್ದರು.

loading...