ಡಾ. ರಾಜ್ ಪುಣ್ಯಸ್ಮರಣೆಗೂ ತಟ್ಟಿದ ನೀತಿ ಸಂಹಿತೆ

0
24
loading...

ಕನ್ನಡಮ್ಮ ಸುದ್ದಿ-ನರೇಗಲ್ಲ : ವಿಧಾನ ಸಭೆ ಚುಣಾವಣೆ ಹಿನ್ನಲೆಯಲ್ಲಿ ಜಾರಿಯಾಗಿರುವ ನೀತಿ ಸಂಹಿತೆ ಬಿಸಿಯು ಡಾ. ರಾಜಕುಮಾರ ಪುಣ್ಯಸ್ಮರಣೆಗೂ ತಟ್ಟಿದೆ.

ಡಾ. ರಾಜ ಕಟ್ಟಾ ಅಭಿಮಾನಿ ನರೇಗಲ್ಲ ಸಮೀಪದ ಹಾಲಕೆರೆಯ ರಾಮಣ್ಣ ಭೈರಗೊಂಡ ಕಳೆದ 12 ವರ್ಷಗಳಿಂದ ಡಾ. ರಾಜ ಪುಣ್ಯಸ್ಮರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ. ಅದರಂತೆ ಗುರುವಾರವೂ ಡಾ. ರಾಜಕುಮಾರ ಅವರ 12ನೇ ಪುಣ್ಯಸ್ಮರಣೆ ಅಂಗವಾಗಿ ನರೇಗಲ್ಲನ ಬಸ್ ನಿಲ್ಧಾಣದ ವಾಣಿಜ್ಯ ಮಳಿಗೆಯಲ್ಲಿನ ಶ್ರೀ ಅನ್ನದಾನೇಶ್ವರ ಹೋಟೆಲ್‍ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆದರೆ ಚುಣಾವಣಾ ಅಧಿಕಾರಿಗಳು ಕಾರ್ಯಕ್ರಮಕ್ಕೆ ಪರವಾನಿಗೆ ಪಡೆದೆ ಇರುವುದರಿಂದ ಸಮಾರಂಭ ನಡೆಸಲು ಬಾರದು ಎಂದು ಸಮಾರಂಭದ ನಿಮಿತ್ತ ಹಾಕಲಾಗಿದ್ದ ಪೆಂಡಾಲ್ ತೆರವು ಗೊಳಿಸಿದರು. ಇದರಿಂದಾಗಿ ಡಾ. ರಾಜ್ ಅಭಿಮಾನಿಗೆ ನಿರಾಸೆಯುಂಟು ಮಾಡಿತು.
ಡಾ. ರಾಜ್ ಅಭಿಮಾನಿ ರಾಮಣ್ಣ ಭೈರಗೊಂಡ ಮಾತನಾಡಿ, ಸತತ 12ವರ್ಷಗಳಿಂದ ಡಾ. ರಾಜ ಅವರ ಪುಣ್ಯಸರಣೆ ನಿಮಿತ್ತ ಉಚಿತ ಪುಸ್ತಕ ವಿತರಣೆ, ವಸ್ತ್ರ ವಿತರಣೆ ಜೋತೆಗೆ ಪ್ರಸಾದವನ್ನು ವಿತರಿಸಲಾಗುತ್ತಿತ್ತು. ಅದರಂತೆ ಈ ವರ್ಷವು ಸಮಾರಂಭವನ್ನು ಹಮ್ಮಿಕೊಂಡು ಉಚಿತ ಅನ್ನದಾನ ಮಾಡಬೇಕು ಎಂದು ಕೊಂಡಿದ್ದೆ. ಆದರೆ ಚುಣಾವಣಾ ಅಧಿಕಾರಿಗಳು ನೀತಿ ಸಂಹಿತೆಯ ಕಾರಣದಿಂದ ಸಮಾರಂಭ ನಡೆಸದಂತೆ ಸೂಚಿಸಿದ ಪರಿಣಾಮವಾಗಿ ಸಮಾರಂಭ ರದ್ದಾಗಿದೆ. ಇದರಿಂದ ಬಹಳಷ್ಟು ಬೇಜಾರಾಗಿದೆ. ನೀತಿ ಸಂಹಿತೆಯ ಬಗ್ಗೆ ನನಗೆ ಅಷ್ಟು ಮಾಹಿತಿ ಇರಲಿಲ್ಲ. ಆದರೂ ಈ ವರ್ಷದಿಂದ ನರೇಗಲ್ಲನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಆಸ್ಪತ್ರೆಯಲ್ಲಿರುವಷ್ಟು ದಿನಗಳ ಕಾಲ ಪ್ರತಿನಿತ್ಯ 10 ಇಡ್ಲಿ ಉಚಿತವಾಗಿ ನೀಡಲಾಗುವುದು ಎಂದರು.

loading...