ಡಿಡಿಗೆ ಗೆಲವು ತಂದು ಕೊಟ್ಟ ಶ್ರೇಯಸ್ಸು, ಸೋಲಿನ ಸುಳಿಯಿಂದ ಹೊರ ಬಂದ ಡೆವಿಲ್ಸ್

0
59
loading...

ನವದೆಹಲಿ:- ಸತತ ಸೋಲುಗಳನ್ನು ಕಾಣುತ್ತಿದ್ದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ತವರಿನಲ್ಲಿ ಕೊಲ್ಕತ್ತಾ ವಿರುದ್ದ ೫೫ ರನ್ ಗಳ ಗೆಲುವು ಕಂಡಿದೆ. ಗೌತಮ ಗಂಭೀರ ನಾಯಕತ್ವ ಬಿಟ್ಟ ನಂತರ ಡಿಡಿ ತಂಡದ ಜವಾಬ್ದಾರಿಯನ್ನು ಹೆಗ್ಗಲ ಮೇಲೆ ಹೊತ್ತ ಕೊಂಡ ೨೩ ರ ಹರೆಯ ಶ್ರೇಯಸ್ ಅಯ್ಯರ್ ಕೊಲ್ಕತ್ತಾ ವಿರುದ್ದದ ಪಂದ್ಯದಲ್ಲಿ ೪೦ ಎಸೆತದಲ್ಲಿ ಅಜೇಯ ೯೩ ರನ್ ಗಳ ಅಮೋಘ ಆಟದ ಪ್ರದರ್ಶನ ನೀಡಿದರು.
ಡಿಡಿಗೆ ಉತ್ತಮ ಆರಂಭ ನೀಡಿದ ಟೀಂ ಇಂಡಿಯಾದ ಅಂಡರ್-೧೯ ತಂಡದ ನಾಯಕ ಪೃಥ್ವಿ ಷಾ ಹಾಗೂ ಮುನ್ರೊ ಮೊದಲ ವಿಕೆಟ್ ೫೯ ರನ್ ಗಳ ಉತ್ತಮ ಆರಂಭ ನೀಡಿದರು.
ಸತತ ಸೋಲಿನಿಂದ ಕಂಗೆಟ್ಟಿರುವ ಡಿಡಿ ಐಪಿಎಲ್ ಟೂರ್ನಿಯ ಎರಡನೆಯ ಗೆಲವು ಕಂಡಿದ್ದು ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ವಿಶ್ವಾಸ ಮೂಡಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ ಮಾಡಿದ್ದ ಡಿಡಿ ೨೧೯ ರನ್ ಗಳ ಬೃಹತ್ ಮೊತ್ತವನ್ನೆ ಕಲೆ ಹಾಕಿತು. ಪೃಥ್ವಿ ಷಾ ಐಪಿಎಲ್ ನಲ್ಲಿ ಮೊದಲ ಅರ್ಧ ಶತಕ ಬಾರಿಸಿದರು. ಇದರಲಿ ೭ ಬೌಂಡ್ರಿ ಹಾಗೂ ಎರಡು ಸಿಕ್ಸ್ ಕೂಡಾ ಸೇರಿವೆ.
ಚೊಚ್ಚಲ ನಾಯಕ್ವ ಸ್ಥಾನ ಪಡೆದಿರುವ ಅಯ್ಯರ್ ೧೦ ಸಿಕ್ಸರ್ ಹಾಗೂ ಮೂರು ಬೌಂಡ್ರಿ ನೆರವಿನಿಂದ ಅಝೆಯ ೯೩ ರನ್ ಮಾಡಿದರು.
ಅಂತಿಮವಾಗಿ ಮ್ಯಾಕ್ಸ್ವೆಲ್ ಕೂಡಾ ಸಾಲಿಡ್ ಬ್ಯಾಟಿಂಗ್ ಮಾಡಿ ತಂಡದ‌ ಮೊತ್ತ ೨೧೯ ಆಗುವಂತೆ ಮಾಡಿದರು
ಬಿಗ್ ಸ್ಕೋರ್ ಚೇಸ್ ಮಾಡಲು ಬಂದ ಕೆಕೆಆರ್ ಆರಂಭಿಕ ಆಘಾತ ಅನುಭವಿಸಿತು ತಂಡದ ಪ್ರಮುಖ ವಿಕೆಟ್ಗಳು ೮೦ ರೊಳಗೆ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತು.
ರಸಲ್ ಗಿಲ್ ಜೊತೆಯಾಟ ಆಡಿದರೂ ಕೂಡಾ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಕೆಕೆಆರ್ ೨೦ ಓವರ್ಗಳಲಿ ೧೬೪ ರನ್ ಗಳನ್ನು ಮಾಡಲು ಮಾತ್ರ ಶಕ್ತವಾಯಿತು ಈ ಮೂಲಕ ೫೫ ರನ್ ಗಳಿಂದ ಸೋಲು ಕಂಡಿತು.

loading...