ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಕೆ ಮಾಡಿದರೆ ಲೈಸನ್ಸ್ ರದ್ದಾಗುತ್ತೆ ಹುಷಾರ್…!

0
63
loading...

ಜೋದಪುರ/ ನವದೆಹಲಿ: ನೀವು ವಾಹನ ಸವಾರು ಮಾಡುವಾಗ ಮೊಬೈಲ್ ಪೋನ್ ಬಳಕೆ ಮಾಡಿದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದೆ.
ವಾಹನ ಚಲಾಯಿಸುವಾಗ ಸಾಕಷ್ಟು ಜನ ಮೊಬೈಲ್ ನಲ್ಲಿ ಮಾತನಾಡುತ್ತಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜಸ್ಥಾನ ಹೈಕೋರ್ಟ್ ನ ಜೋಧಪುರ ವಿಭಾಗೀಯ ಪೀಠ ಮಹತ್ವದ ಆದೇಶವನ್ನು ಹೊರಡಿಸಿದೆ.
ವಾಹನ ಚಲಾವಣೆ ನಿಯಮ ಉಲ್ಲಂಘನೆ ಮಾಡಿದ್ದಾರೆ ನಿಮ್ಮ ಪೊಟೋ ಆರ್ ಟಿಓಗೆ ಕಳುಹಿಸಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಬಹುದು ಎಂದು ಜೋಧಪುರ ವಿಭಾಗೀಯ ಪೀಠ ಹೇಳಿದೆ.
ವಿಭಾಗೀಯ ಪೀಠದ ನ್ಯಾಯಾಧೀಶರಾದ ಗೋಪಾಲ್ ಕೃಷ್ಣನ್ ವ್ಯಾಸ್ ಹಾಗೂ ರಾಮಚಂದ್ರ ಸಿಂಗ್ ಝಾಲಾ ಈ ತೀರ್ಪು ನೀಡಿದ್ದಾರೆ.
ವಿಶ್ವದಾದ್ಯಂತ ಮೊಬೈಲ್ ಪೋನ್ ಬಳಕೆ ಮಾಡಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ವಾಹನ ಚಾಲನೆ‌ ಮಾಡುವಾಗ ಮೊಬೈಲ್ ಬಳಕೆ ಮಾಡಿದರೆ ಕಠಿಣ ಕ್ರಮ ಹಾಗೂ ಶಿಕ್ಷೆಗೆ ಗುರಿಯಾಗಬಹುದು.
ಮೊಬೈಲ್ ಬಳಕೆ ಮಾಡಿ ನಾಲ್ಕು ಪಟ್ಟು ಅಪಘಾತ ಸಂಭವಿಸುತ್ತಿವೆ ಎಂದು ವಿಶ್ವ ಆರೊಗ್ಯ ಇಲಾಖೆ ಹೇಳಿದೆ.

loading...