ತಂಗಡಗಿ ದುರಾಡಳಿತ ವಿರೋಧಿಸಿ ಸ್ಪರ್ಧೆ: ಚೆನ್ನದಾಸರ

0
17
loading...

ಗಂಗಾವತಿ: ಕನಕಗಿರಿ ಶಾಸಕ ಶಿವರಾಜ ತಂಗಡಗಿ ದುರಾಡಳಿತ ಮತ್ತು ದೌರ್ಜನ್ಯ ವಿರೋಧಿಸಿ ತಮ್ಮ ಪಕ್ಷೇತರನಾಗಿ ಕನಕಗಿರಿ ಕ್ಷೇತ್ರದಿಂದ ಸ್ಪರ್ದಿಸಿದ್ದೇನೆ ಎಂದು ರಮೇಶ ಚೆನ್ನದಾಸರ ತಿಳಿಸಿದರು.

ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಕ್ಷೇತ್ರದಲ್ಲಿ ಚೆನ್ನದಾಸರ ಜಾತಿಯವರು ಸುಮಾರು 15 ಸಾವಿರ ಮತದಾರರಿದ್ದಾರೆ. ಎಸ್‍ಸಿ ಮೀಸಲು ಕ್ಷೇತ್ರದಲ್ಲಿ ರಾಜ್ಯದ ಇತರ ಯಾವ ಕ್ಷೇತ್ರದಲ್ಲೂ ಸಹ ಚೆನ್ನದಾಸರ ಜಾತಿಯವರು ಸ್ಪರ್ದೆ ಮಾಡಿಲ್ಲ. ತಮ್ಮ ಸ್ಪರ್ದೆ ಈ ಕ್ಷೇತ್ರದಲ್ಲಿ ಪ್ರಥಮವಾಗಿದೆ ಎಂದು ಹೇಳಿದರು.
ಜೈ ಭೀಮ ಆಟೋ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಬಸೀರ್, ಮುಖಂಡರಾದ ರುದ್ರಪ್ಪ, ಆನಂದ ತಮ್ಮ ಸಂಘಟನೆಯಿಂದ ರಮೇಶ ಚೆನ್ನದಾಸರಿಗೆ ಬೆಂಬಲ ಇದೆ ಎಂದು ತಿಳಿಸಿದರು. ಕುರುಬ ಸಮಾಜದ ಮುಖಂಡ ಪುಂಡನಗೌಡ ಮಾತನಾಡಿದರು.

loading...