ತಂತ್ರಜ್ಞಾನದಿಂದ ಪುಸ್ತಕ ಓದುವ ಹವ್ಯಾಸ ದೂರ: ಪ್ರೊ. ಯಾವಗಲ್

0
11
loading...

ನರಗುಂದ : ಯುವ ಪೀಳಿಗೆ ತಂತ್ರಜ್ಞಾನಕ್ಕೆ ಮಾರುಹೋಗಿ ಪುಸ್ತಕ ಓದುವ ಹವ್ಯಾಸ ಮರೆತು ಫೇಸ್‍ಬುಕ್, ವಾಟ್ಸಪ್‍ನಂತ ಅಂತರ್ಜಾಲಕ್ಕೆ ಮಾರುಹೋಗಿ ಬದುಕನ್ನು ಕಟ್ಟಿಕೊಡುವಂತಹ ಪುಸ್ತಕಗಳಿಂದ ದೂರವಿರುತ್ತಿರುವುದು ಕಳವಳದ ಸಂಗತಿ ಎಂದು ಪ್ರೋ ಎಮ್.ಎಸ್.ಯಾವಗಲ್ ಹೇಳಿದರು.

ಸಿಂದಗಿ ಶ್ರೀ ಶಾಂತವಿರೇಶ್ವರ ಗ್ರಂಥಾಲಯ ಹಾಗೂ ಶ್ರೀ ದೊರೆಸ್ವಾಮಿ ಸಾಹಿತ್ಯ ಪ್ರಕಾಶನ ಭೈರನಹಟ್ಟಿ ಇವರ ಆಶ್ರಯದಲ್ಲಿ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಇತ್ತಿಚೆಗೆ ಹಮ್ಮಿಕೊಂಡಿದ್ದ ವಿಶ್ವಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುಸ್ತಕಗಳು ಸಂಸ್ಕøತಿಕ ಪ್ರತೀಕ. ಪುಸ್ತಕಗಳಿಲ್ಲದ ಮನೆ ಸ್ಮಶಾನವಿದ್ದಂತೆ ಹೀಗಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು. ಅಮ್ಮನಿಂದ ಪ್ರೀತಿಯನ್ನು ಕಲಿತರೆ, ನೀತಿಯನ್ನು ಹೇಳಿಕೊಡುವ ಪುಸ್ತಕ ಮಸ್ತಕವನ್ನರಳಿಸುತ್ತವೆ. ಸಾಧನೆಗೆ ಪ್ರಮುಖ ಸಾದನ ಪುಸ್ತಕವೇ ಹೊರೆತು ಮತ್ತೊಂದಿಲ್ಲ ಹೀಗಾಗಿ ಮೈಮೇಲೆ ಬಟ್ಟೆ ಇಲ್ಲದಿದ್ದರೂ ಸರಿ ಆದರೆ ಮನೆಯಲ್ಲಿ ಪುಸ್ತಕವನ್ನು ಇಟ್ಟು ಆಮೂಲಕ ಮಕ್ಕಳಿಗೆ ಸಾಹಿತ್ಯದ ಅಬಿರುಚಿ ಹಚ್ಚಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವಂತಹ ಕಾರ್ಯವಾಗಬೇಕಾಗಿದೆ ಎಂದು ಕರೆಕೊಟ್ಟರು.
ಡಾ.ಎಂ.ಪಿ.ಕುಲಕರ್ಣಿ ಮಾತನಾಡಿ, ಪುಸ್ತಕ ಲೋಕವನ್ನಾಳುತ್ತವೆ ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ. ಯಾರು ಸಾಹಿತ್ಯವನ್ನು ಅದ್ಯಯನ ಮಾಡುತ್ತಾರೊ ಅವರನ್ನು ಯಾರಿಂದಲೂ ಗೆಲ್ಲಲು ಸಾದ್ಯವಿಲ್ಲ. ಹೀಗಾಗಿ ಸರ್ಕಾರ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಇನ್ನಷ್ಟು ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದರು. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪುಸ್ತಕವನ್ನು ಎದೆಗವಚಿಕೊಂಡು ಓದಿದ ಅನನ್ಯ ಅನುಭವ ಅಂತರ್ಜಾಲದಿಂದ ಸಿಗಲಾರದು. ಹೀಗಾಗಿ ಪ್ರತಿಯೊಬ್ಬರು ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಪ್ರಜೆಗಳಾಗಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕ ಗ್ರಂಥಪಾಲಕರಾದ ಮನೋಜ ಗಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಶಿಕ್ಷಕರಾದ ಎಸ್.ಜಿ.ಮಣ್ಣೂರಮಠ ಅವರು ಮಾತನಾಡಿದರು. ನರಗುಂದದ ಹಿರಿಯ ಸಾಹಿಗಳಾದ ಶ್ರೀ ರುದ್ರನಾಥ ಕಲ್ಯಾಣಶೆಟ್ಟಿಯವರು ಮಾತೋಶ್ರೀ ರಾಚಮ್ಮ ಕ ಕಲ್ಯಾಣಶೆಟ್ಟಿ ಇವರ ಸ್ಮರಣಾರ್ಥ ಶ್ರೀಮಠದ ಗ್ರಂಥಾಲಯಕ್ಕೆ 100ಕ್ಕೂ ಹೆಚ್ಚು ಪುಸ್ತಕಗಳನ್ನು ದೇಣಿಗೆ ನೀಡಿದರು.
ಭೀಮಪ್ಪ ಮನೇನಕೊಪ್ಪ, ಮಲ್ಲಪ್ಪ ಮೊರಬದ, ನಿಂಗಪ್ಪ ನರಗುಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

loading...