ತಪ್ಪದೇ ಮತದಾನ ಮಾಡಿ

0
14
loading...

ಬೀಳಗಿ:ಯಾವುದೇ ಆಮಿಷಗಳಿಗೆ ಬಲಿಯಾಗದೇ ನಿಮ್ಮ ಹಕ್ಕನ್ನು ಚಲಾಯಿಸಲು ಅಂಜದೆ ಅಳುಕದೇ ಮತದಾನ ಮಾಡಿ ನಿಮ್ಮ ರಕ್ಷಣಗೆ ನಾವು ಸದಾ ಸಿದ್ದ ಎಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರದ 100 ಜನ ಅರೇ ಸೇನಾ ಪಡೆಯ ಸೈನಿಕರು ಹಾಗೂ ಪೋಲಿಸರು ಡಿ.ವಾಯ್.ಎಸ್.ಪಿ. ರಾಮಣಗೌಡ ಹಟ್ಟಿ, ಚುಣಾವಣಾ ಅಧಿಕಾರಿ ಸಿ.ಎಲ್. ಆನಂದ, ಸಿ.ಪಿ.ಆಯ್ ಶ್ರೀಶೈಲ ಗಾಬಿ, ಮುಖ್ಯಾಧಿಕಾರಿ ದೇವೇಂದ್ರ ಧನಪಾಲ ನೇತ್ರತ್ವದಲ್ಲಿ ಪಥ ಸಂಚಲನ ನಡೆಸಿ ಸಾರ್ವಜನಿಕರಿಗೆ ಆತ್ಮ ಸ್ಥೈರ್ಯ ತುಂಬಿದರು.
ಚುಣಾವಣಾ ಅಧಿಕಾರಿ ಸಿ.ಎಲ್. ಆನಂದ ಮಾತನಾಡಿ 18 ವರ್ಷ ಪೂರೈಸಿದ ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮತದಾರ ಪಟ್ಟಿಯಲ್ಲಿ 14 ರೊಳಗಾಗಿ ನೊಂದಾಯಿಸಿಕೊಳ್ಳಬೇಕು, ಶೇ, ನೂರಕ್ಕೆ ನೂರರಷ್ಟು ಮತದಾನ ನಡೆಯಲು ರಂಗೋಲಿ, ಪ್ರತಿಜ್ಞಾವಿಧಿ, ಪ್ರವಚನ, ದೀಪತ್ಸೋವ ಸೇರಿದಂತೆ ಅನೇಕ ಜನ ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು, ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಸಾರಾಯಿ ಹಣ ಆಮಿಷಗಳಿಗೆ ಬಲಿಯಾಗದೆ ನಮ್ಮ ಹಕ್ಕು ಎಂದು ಮತದಾನ ಮಾಡಬೇಕೆಂದರು.

ಡಿ.ವಾಯ್.ಎಸ್.ಪಿ. ರಾಮಣಗೌಡ ಹಟ್ಟಿ, ಮಾತನಾಡಿ ಮೇ 12 ರಂದು ಜರಗಲಿರುವ ವಿಧಾನಸಭೆಯ ಚುಣಾವಣೆಯ ನಡೆಯಲಿದ್ದು ಅಂದು ಮತದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮತದಾನ ಸಮಯದಲ್ಲಿ ಪ್ರತಿ ಮತಗಟ್ಟೆಗೆ ಕೇಂದ್ರ ಇಂಡೂ ಟಿಬೇಟಿಯನ್ ಬಾರ್ಡರ ಸೈನಿಕರನ್ನು ಹಾಗೂ ಪೋಲಿಸರನ್ನು ನೇಮಕ ಮಾಡಲಾಗುವದು ಎಂದರು
ಸಿ.ಪಿ. ಆಯ್ ಶ್ರೀಶೈಲ ಗಾಬಿ ಮಾತನಾಡಿ ಚುಣಾವಣೆ ಸಮೀಪದ ದಿನಗಳಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿರುವ ಗ್ರಾಮೀಣ ಪ್ರದೇಶಗಳಲ್ಲಿ ಅರೇ ಸೇನಾ ಪಡೆಯಿಂದ ಪಥ ಸಂಚಲ ನಡೆಸಿ ಮತದಾರಿಗೆ ನಿರ್ಭಿಡೆಯಿಂದ ಮತ ಚಲಾವಣೆ ಮಾಡಲು ಧೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ ಎಂದು ಹೇಳಿದರು. ಪ.ಪಂ. ಮುಖ್ಯಾಧಿಕಾರಿ ದೇವೆಂದ್ರ ಧನಪಾಲ ಮಾತನಾಡಿ ಪಟ್ಟಣದಲ್ಲಿ ಚುಣಾವಣಾ ದೃಷ್ಟಿಯಿಂದ ಸಕಲ ವ್ಯವಸ್ಥೆಗಳನ್ನು ಪೂರೈಸಿ ಸಂಪೂರ್ಣ ಸಹಕಾರವನ್ನು ನಮ್ಮೆಲ್ಲ ಸಿಬಂದ್ಧಿಯೊಂದಿಗೆ ಕಲ್ಪಿಸಲಾಗುವದು ಎಂದರು.

loading...