ತಾಯಿಯ ಮನಸ್ಸು ಸದಾ ಹಾರೈಕೆಯಿಂದ ಕೂಡಿರುತ್ತದೆ

0
10
loading...

ರಬಕವಿ-ಬನಹಟ್ಟಿ: ವಚನ, ಕವನಗಳೆಂದಾಕ್ಷಣ ಮಹಾನ್ ನಾಯಕರುಗಳದ್ದೇ ಬೇಕೆಂದಿಲ್ಲ. ಓದುಗರ ಮನಸ್ಸಿಗೆ ನೆಮ್ಮದಿ, ಸಂತೋಷದ ಜೀವನ ನಡೆಸಲು ಸಾಧ್ಯವಾದರೆ ಸಾಕು ಅವುಗಳೇ ಶ್ರೇಷ್ಠವಾದುದು, ದಾನ, ದಾಸೋಹ ಹಾಗೂ ದತ್ತಿ ಸಂಸ್ಕøತಿ ದೊರಕಿಸುವ ಬಹುತೇಕ ಶಾಸನಗಳು ದಾನ ಶಾಸನಗಳು ನಮ್ಮ ನಾಡಿನಲ್ಲಿರುವದು ಹೆಮ್ಮೆ ಎಂದು ಸಾಹಿತಿ ಡಾ. ಗುರುದೇವಿ ಹುಲ್ಲೆಪ್ಪನವರಮಠ ಹೇಳಿದರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶರಣ ಸಾಹಿತ್ಯ ಪರಿಚತ್ತು ತಾಲ್ಲೂಕು ಘಟಕ ಜಮಖಮಡಿ ಹಾಗೂ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಯೋಗದಿಂದ ಹಮ್ಮಿಕೊಳ್ಳಲಾದ ಲಿಂ. ಮಹಾಲಿಂಗಮ್ಮ ರುದ್ರಪ್ಪ ಹುಲಗಬಾಳಿ ಇವರ ಸ್ಮರಣಾರ್ಥ ಶರಣಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಬದುಕಿನ ಎಲ್ಲ ಹಂತಗಳಲ್ಲಿಯೂ ಒಂದಿಲ್ಲ ಒಂದು ಚಿಂತೆ ನಮ್ಮನ್ನು ಕಾಡುತ್ತವೆ. ಒಳ್ಳೆಯ ಚಿಂತನೆಗಳನ್ನು ಮಾಡಿ, ಜೊತೆಗೆ ಓದುವ ಹವ್ಯಾಸವನ್ನು ಬಳಸಿಕೊಳ್ಳಿ ಅದು ನಿಮಗೆ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ. ಇಂದು ಪ್ರತಿಯೊಬ್ಬರು ಜೀವನದಲ್ಲಿ ಸಂಕ್ಷಿಪ್ತತೆಯನ್ನು ಆಳವಡಿಸಿಕೊಂಡಿದ್ದೇವೆ. ಅದರಿಂದ ಹೊಸ ಅನುಭವ, ಸಂತೋಷವನ್ನು ಪಡೆದುಕೊಂಡಿದ್ದೇವೆ ಎಂದರು.

ತಾಯಿಯ ಮನಸ್ಸು ಸದಾ ಹಾರೈಕೆಯಿಂದ ಕೂಡಿರುತ್ತದೆ. ತನ್ನ ಪ್ರಾಣವನ್ನಾದರೂ ಕೊಟ್ಟು ಮಗುವಿನ ಪ್ರಾಣ ಉಳಿಸುವ ಮನಸ್ಸು ಹೊಂದಿರುವುದು ವ್ಯಕ್ತಿ ಯಾರಾದರೂ ಇದ್ದರೆ ಅದು ತಾಯಿ ಮಾತ್ರ. ಜಗತ್ತಿನ ಎಲ್ಲ ತಾಯಾಂದಿರನ್ನು ಗೌರವಿಸುವ, ನಮ್ಮಂತವರಲ್ಲಿ ತಮ್ಮ ತಾಯಿಯನ್ನು ಕಾಣುವಂತಹ ಸಂಸ್ಕಾರವನ್ನು ಹೊಂದಿದಂತವರು ಮಲ್ಲಿಕಾರ್ಜುನ ಹುಲಗಬಾಳಿಯವರು. ಅವರ ತಾಯಿಯವರ ಸ್ಮರನಾರ್ಥ ಇಂದು ಈ ಪ್ರಶಸ್ತಿ ನನಗೆ ನೀಡಿರುವುದು ಬಹಳಷ್ಟು ಸಂತೋಷವನ್ನು ನೀಡಿದೆ. ಇಂದಿನ ಯುವಕ ಯುವತಿಯರು ಜೀವನದಲ್ಲಿ ಮೌಲ್ಯ, ಸದ್ಗುಣ, ಧ್ಯಾನ, ನೀತಿಪಾಠಗಳನ್ನು ಕಲಿಯಬೇಕು. ಇಂತಹ ಸಮಾರಂಭಗಳು ಅವರಿಗೆ ಒಂದು ಪಾಠವನ್ನು ಕಲಿಸುತ್ತವೆ ಎಂದು ಡಾ. ಹುಲೆಪ್ಪನವರಮಠ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಶಂಕರ ಅರಬಳ್ಳಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಮತನಾಡಿದರು. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಕಸಾಪ ತೇರದಾಳ ವಲಯ ಅಧ್ಯಕ್ಷ ಕಿರಣ ಆಳಗಿ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕಾ ಅಧ್ಯಕ್ಷ ಮಲ್ಲಿಕಾರ್ಜುನ ಇಂಡಿ, ವಿದ್ಯಾರ್ಥಿ ಪ್ರತಿನಿಧಿಗಳು ಇದ್ದರು.

ಸಮಾರಂಭದಲ್ಲಿ ಮಲ್ಲಿಕಾರ್ಜುನ ಹುಲಗಬಾಳಿ, ಶಾಂತಾದೇವಿ ಹುಲೆಪ್ಪನವರಮಠ, ಚಿತ್ತರಂಜನ ನಾಂದ್ರೇಕರ, ಗುರುನಾಥ ಸುತಾರ, ಮಲ್ಲಪ್ಪ ಜವಳಗಿ , ಶ್ರೀಶೈಲ ಭದ್ರನ್ನವರ, ಎಸ್. ಬಿ. ಹಾವಿನಾಳ, ಮಾಶಾಂತ ಶೆಟ್ಟಿ, ಪ್ರಭುಗೌಡ ಚಾಂದಕವಟೆ, ಮಹಾದೇವಿ ಕೊಳಕಿ, ರಜನಿ ಶೇಠೆ, ವಿಜಯಲಕ್ಷ್ಮೀ ಜಾನಕ್ಕಿ, ಜಗದೇವಿ ಹುಲಗಬಾಳಿ, ಕೃಷಿ ಮತ್ತು ಖುಷಿ ಕಲ್ಯಾಣಿ, ಪ್ರಕಾಶ ಬುರುಡ, ರವಿ ಕೊಣ್ಣೂರ, ಸದಾಶಿವ ಗಾಯಕವಾಡ, ರವಿ ಕೊಣ್ಣೂರ ಸೇರಿದಂತೆ ಅನೇಕರು ಇದ್ದರು.
ಭ.ನಿಂ ಅಸ್ಕಿ ಪ್ರಾರ್ಥಿಸಿದರು. ಎಂ.ಬಿ. ಇಂಡಿ ಸ್ವಾಗತಿಸಿದರು. ಪ್ರೊ. ಶಂಕರ ಹಳಿಂಗಳಿ ನಿರೂಪಿಸಿದರು. ಕೊನೆಗೆ ಸುಕನ್ಯಾ ಟಿ.ಎಲ್. ವಂದಿಸಿದರು.

loading...