ತ್ರಿಕೋನ ಸ್ಪರ್ಧೆಗೆ ಸಜ್ಜಾದ ಅಖಾಡಾ

0
19
loading...

ನಾಗರಾಜ ಶಹಾಪುರಕರ
ಕನ್ನಡಮ್ಮ ಸುದ್ದಿ-ಹಳಿಯಾಳ: ಕಾಂಗ್ರೆಸ್‍ನಿಂದ ಆರ್.ವಿ. ದೇಶಪಾಂಡೆ, ಭಾಜಪದಿಂದ ಸುನೀಲ ಹೆಗಡೆ, ಜೆಡಿಎಸ್‍ನಿಂದ ಕೆ.ಆರ್. ರಮೇಶ್ ಮುಖ್ಯ ಸ್ಪರ್ಧಿಗಳಾಗಿರುವ ಹಳಿಯಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡಾವು ತ್ರಿಕೋನ ಸ್ಪರ್ಧೆಗೆ ಸಜ್ಜಾಗಿದೆ.

ಆರ್.ವಿ. ದೇಶಪಾಂಡೆ- ಆಡಳಿತ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಅತಿ ಹಿರಿಯ ಸಚಿವರಾಗಿದ್ದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಹುದ್ದೆಯಲ್ಲಿರುವ ರಘುನಾಥರಾವ್ ವಿಶ್ವನಾಥರಾವ್ ದೇಶಪಾಂಡೆಯವರು ಪ್ರಮುಖ ಸ್ಪರ್ಧಿಯಾಗಿದ್ದಾರೆ. ಸತತ 6 ಬಾರಿ ಗೆದ್ದು, 7ನೇ ಬಾರಿ ಸೋತು ನಂತರ ಮತ್ತೆ ವಿಜೇತರಾಗಿ ಕ್ಷೇತ್ರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿರುವ ದೇಶಪಾಂಡೆಯವರು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು, ತಾನು ಹಿರಿಯ ಸಚಿವನಾಗಿ ಸರ್ಕಾರದ ವತಿಯಿಂದ ಮಾಡಿದ ಅಭಿವೃದ್ಧಿಯ ಹೊಳೆ ಮಾತ್ರವಲ್ಲದೇ ಸರ್ಕಾರೇತರವಾಗಿ ಮಾಡಿದ ಹತ್ತು-ಹಲವಾರು ಜನಪರ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಿ ತನ್ನನ್ನು ಮರು ಆಯ್ಕೆ ಮಾಡಬೇಕೆಂದು ಕೋರುತ್ತಿದ್ದಾರೆ. ಈ ಬಾರಿ ಗೆಲುವಿನ ಅಂತರ ಹೆಚ್ಚಾಗಬೇಕು ಎಂಬುದು ದೇಶಪಾಂಡೆಯವರ ಹೆಬ್ಬಯಕೆಯಾಗಿದೆ.

ಕೆ.ಆರ್.ರಮೇಶ್- ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತಮ್ಮ ಹುಟ್ಟುಹಬ್ಬದ ನಿಮಿತ್ಯ ವೈಯಕ್ತಿಕವಾಗಿ ವಿವಿಧ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಜೆಡಿಎಸ್ ಅಭ್ಯರ್ಥಿ ಕೆ.ಆರ್. ರಮೇಶ್ ರವರು ಮಹಿಳಾ ಸ್ವ-ಸಹಾಯ ಸಂಘಗಳನ್ನು ಸಹ ರಚಿಸಿದ್ದಾರೆ. ತುಂಬಾ ಪ್ರಯಾಸಪಟ್ಟು ಹಲವಾರು ತಿರುವುಗಳನ್ನು ದಾಟಿದ ನಂತರ ಇವರಿಗೆ ಟಿಕೇಟ್ ದೊರೆತಿದೆ. ಬೆಂಗಳೂರು ಮೂಲದ ಉದ್ಯಮಿಯಾಗಿದ್ದು ಕಳೆದ ಒಂದು ದಶಕಗಳಿಂದ ಹಳಿಯಾಳ ಕ್ಷೇತ್ರದ ಸಂಪರ್ಕದಲ್ಲಿರುವ ರಮೇಶ್ ರವರು ಜೆಡಿಎಸ್ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿದ ಆಶ್ವಾಸನೆಗಳು ಮತ್ತು ತಮ್ಮ ವೈಯಕ್ತಿಕ ಸೇವಾ ಕಾರ್ಯಗಳ ಹಿನ್ನೆಲೆಯ ಆಧಾರದ ಮೇಲೆ ಮತಯಾಚನೆ ಮಾಡುತ್ತಿದ್ದಾರೆ.

loading...