ದಲಿತರನ್ನು ವಿರೋಧಿ ನೀತಿ ಕಾಂಗ್ರೆಸ್ ರಕ್ತದಲ್ಲಿಯೇ ಬಂದಿದೆ : ಬುದ್ದಾನಂದ

0
35
loading...

ಕನ್ನಡಮ್ಮ ಸುದ್ದಿ-ಬೆಳಗಾವಿ : ಹಿಂದುಳಿದವರು ಹಾಗೂ ಮುಸ್ಲಿಂರ ನೆನಪು ಬರೀ ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸಗೆ ನೆನಪು ಬರುತ್ತದೆ. ದಲಿತರು, ಮುಸ್ಲಿಂರು ಹಾಗೂ ಹಿಂದುಳಿದವರ ಓಟ್ ತಮ್ಮ ಅಧಿಕಾರಕ್ಕಾಗಿ ಮಾತ್ರ ಬೇಕು ಎಂಬಂತೆ ರಾಜಕೀಯ ಪಕ್ಷಗಳು ಬಳಕೆ ಮಾಡುತ್ತಾ ಬರುತ್ತಿವೆ ಎಂದು ಬಹುಜನ ಸಮಾಜ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಬುದ್ದಾನಂದ ಹೇಳಿದರು.

ನಗರದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ರಕ್ಷಿಸಿ; ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ಒಂದು ವರ್ಷದ ವರಗೆ ಚುನಾವಣೆ ಮುಗಿದರು ನಿರಂತರ ಜಾಗೃತಿ ನಡೆಯಲಿದೆ. ದಲಿತರು, ಹಿಂದುಳಿದವರು ಹಾಗೂ ಮುಸ್ಲಿಂರ ನೆನಪು ಬರೀ ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸಗೆ ನೆನಪು ಬರುತ್ತದೆ. ಚುನಾವಣೆ ಸಮಯದಲ್ಲಿ ಮಾತ್ರ ದಲಿತರ ಮತಗಳ,ಅಲ್ಪ ಸಂಖ್ಯಾತರ ಮತಗಳು ನೆನಪಿಗೆ ಬರುತ್ತವೆಂದರು. ಕಳೆದ ಐದು ವರ್ಷಗಳ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಬ್ಯಾಕಲಾಗ್ ಹುದ್ದೆಗಳನ್ನು ತುಂಬಲಿಲ್ಲ ಎಂದು ಹೇಳಿದರು.

ದಲಿತರನ್ನು ವಿರೋಧಿಸುವುದು ಕಾಂಗ್ರೆಸ್ ರಕ್ತದಲ್ಲಿಯೇ ಹರಿದು ಬಂದಿದೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂಸತ್ತಿಗೆ ಆಯ್ಕೆಯಾಗದಂತೆ ಇದೇ ಕಾಂಗ್ರೆಸ್ ಅಂದೇ ನೋಡಿಕೊಂಡಿತ್ತು ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯಗೆ ನಿಜವಾಗಿಯೂ ಆತ್ಮವಿಶ್ವಾಸ ಇದ್ದರೆ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಏಕೆ ನಿಲ್ಲಬೇಕಾಗಿತ್ತು. ದಲಿತರ ಮತಗಳು ಈ ಭಾರಿ ಸಿಗುವುದಿಲ್ಲ ಸೋಲು ನಿಶ್ಚಿತ ಎಂಬವುದು ಗೋತ್ತಾಗಿಯೇ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಆದರೆ ಎರಡು ಕ್ಷೇತ್ರದಲ್ಲಿ ಸೋಲು ಅನುಭವಿಸಲಿದ್ದಾರೆ. ಎಸ್‍ಸಿ , ಎಸ್‍ಟಿ ಜನಾಂಗ ರಾಜ್ಯಾದ್ಯಂತ ಸಾಮಾಜಿಕ ಕಳಕಳಿಯ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಬುದ್ದಾನಂದ ಸ್ವಾಮೀಜಿ ಕರೆ ನೀಡಿದರು.
ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಮಾತನಾಡಿ, ರಾಜ್ಯದ ಖಜಾನೆಯ ಹಣ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಕೊಳ್ಳೆ ಹೊಡೆದಿದೆ. ಭೂಗಳ್ಳರು, ಅಕ್ರಮ ದಂಧೆ ಮಾಡುವವರು, ಸೀಮೆ ಎಣ್ಣೆ ಮಾರುವವರು, ಭುಜ ಭಲದ ದುಂಡಾವರ್ತಿಗಳೇ ಸರಕಾರದಲ್ಲಿ ಅಧಿಕಾರ ಅನುಭವಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಾಬುಲಾಲ ಬಾಗವಾನ, ದತ್ತಾ ಬಿಲಾವರ, ಸದಾ ಕೋಲಕಾರ, ಜಯರಾಮ ಉಪಸ್ಥಿತರಿದ್ದರು.

loading...