ದಲಿತ ಸಮುದಾಯದ ಸೇವೆ ಸಲ್ಲಿಸಿದ ಬಾಬು ಜಗಜೇವನರಾಮ : ಹೊರಟ್ಟಿ

0
24
loading...

ಕನ್ನಡಮ್ಮ ಸುದ್ದಿ- ಹುಬ್ಬಳ್ಳಿ: ದಲಿತರಿಗೆ ಬೇಕಾದಂಥಹ ಸಕಲ ಸರಕಾರಿ ಸೌಲಭ್ಯಗಳನ್ನು ಬಾಬು ಜಗಜೀವನರಾಮ್‌ ಅವರು ಕಲ್ಪಿಸಿ ಕೊಡಲು ಸಾಕಷ್ಟು ಶ್ರಮಿಸಿದ್ದಾರೆ ಎಂದು ಬಸವರಾಜ ಹೊರಟ್ಟಿ ಹೇಳಿದರು. ಅವರು ಗುರುವಾರ ನಗರದ ಇಂದಿರಾ ಗ್ಲಾಸ್‌ ಹೌಸ್‌ ನಲ್ಲಿ ಜರುಗಿದ ಬಾಬು ಜಗಜೀವನರಾಮ್‌ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇಂದು ದಲಿತ ಸಮುದಾಯಕ್ಕೆ ಸಿಗಬೇಕಾದ ಅನೇಕ ಸರಕಾರಿ ಸೌಲಭ್ಯಗಳನ್ನು ಕೊಡಿಸುವಲ್ಲಿ ಹಿಂದೆಯೇ ಜಗಜೀವನರಾಮ್‌ ಶ್ರಮಿಸಿದ್ದಾರೆ ಎಂದರು. ಹು-ಧಾ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜಣ್ಣಾ ಕೊರವಿ ಮಾತನಾಡಿ, ನಮ್ಮ ದೇಶದ ದಲಿತ ಸಮುದಾಯಕ್ಕೆ ಬಾಬು ಜಗಜೀವನರಾಮ್‌ ರಂಥಹ ಮಹಾನ್‌ ವ್ಯಕ್ತಿಗಳಿಂದಲೇ ನ್ಯಾಯ ದೊರಕಿದೆ ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್‌ ಕಾರ್ಯಕರ್ತರು ಸಿಹಿ ಹಂಚಿದರು. ಕಿರಣ ಹಿರೇಮಠ, ಮೇಘರಾಜ ಹಿರೇಮನಿ ಸಾಲಿ, ಮಂಜಣ್ಣ ಬೇಲೇರಿ ಮತ್ತಿತರರು ಪಾಲ್ಗೊಂಡಿದ್ದರು.

loading...