ದಾಖಲೆ ಇಲ್ಲದ 92 ಸಾವಿರ ರೂ. ವಶಕ್ಕೆ

0
41
loading...

ತೇರದಾಳ: ಪಟ್ಟಣದ ಕುಡಚಿ ರಸ್ತೆಯ ನಾಲ್ಕನೇ ಕಾಲುವೆ ಹತ್ತಿರ ಚುನಾವಣೆ ನಿಮಿತ್ತ ನಿರ್ಮಿಸಿರುವ ಚೆಕ್ ಪೋಸ್ಟ್‍ನಲ್ಲಿ ಗುರುವಾರ ಬೆಳಿಗ್ಗೆ ದಾಖಲೆ ಇಲ್ಲದ 97,800 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಡಚಿ ಮೂಲದ ಬುಲೆರೋ ಗೂಡ್ಸ್ ವಾಹನ ತೇರದಾಳ ಕಡೆಗೆ ಬರುವಾಗ ಚೆಕ್ ಪೋಸ್ಟ್‍ನಲ್ಲಿ ವಾಹನ ತಡೆದು ಪೊಲೀಸರು ಪರಿಶೀಲಿಸಿದಾಗ ಚಾಲಕನ ಬಳಿ ದಾಖಲೆ ಇಲ್ಲದೇ 97.800 ನಗದು ಹಣ ದೊರೆತಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಠಾಣಾಧಿಕಾರಿ ಗುರುನಾಥ ಚೌವಾಣ, ಎಸ್.ಎಂ. ಬಗಲಿ, ಎಂ.ಎಂ. ಬೆಳಕೂಡ, ಎಂ.ವೈ. ಗುರವ, ಹುಡೇದಮನಿ, ಲೋಕೇಶ ಹುಕುಮನವರ ಸೇರಿದಂತೆ ಇನ್ನಿತರರು ತಪಾಸಣೆ ವೇಳೆ ಇದ್ದರು.

loading...